ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ಅವರನ್ನು ಮತ್ತೆ ಬೆಂಗಳೂರಿನ ವಾರ್ತಾ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಕಾರ್ಕಳ ನಕ್ಸಲ್‌ ನಿಗ್ರಹ ಪಡೆಯ ಡಿಐಜಿ ವಿಕಾಸ್‌ ಕುಮಾರ್‌ ಅವರನ್ನು ವರ್ಗಾವಣೆಗೊಳಿಸಿ ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರು(ಜೂ.27): ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ಅವರನ್ನು ಮತ್ತೆ ಬೆಂಗಳೂರಿನ ವಾರ್ತಾ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಕಾರ್ಕಳ ನಕ್ಸಲ್‌ ನಿಗ್ರಹ ಪಡೆಯ ಡಿಐಜಿ ವಿಕಾಸ್‌ ಕುಮಾರ್‌ ಅವರನ್ನು ವರ್ಗಾವಣೆಗೊಳಿಸಿ ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರಿನಲ್ಲಿ ಪೊಲೀಸ್‌ ಕಮಿಷನರ್‌ ಆಗಿ ಡಾ.ಹರ್ಷ ಅವರು ಒಂದೂವರೆ ವರ್ಷದ ಹಿಂದೆ ಆಗಮಿಸಿದ್ದರು. ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಶ್ರಮಿಸಿದ ಡಾ.ಹರ್ಷ ಅವರು ‘ನನ್ನ ಬೀಟ್‌- ನನ್ನ ಹೆಮ್ಮೆ’ ಎಂಬ ಕಲ್ಪನೆ ಮೂಲಕ ಪೊಲೀಸ್‌ ಬೀಟ್‌ ವ್ಯವಸ್ಥೆಗೆ ಹೊಸ ಸ್ವರೂಪ ನೀಡಿದ್ದರು. ನಾಗರಿಕರ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ನಾಗರಿಕರನ್ನು ಬೀಟ್‌ ವ್ಯವಸ್ಥೆಗೆ ನೆರವಾಗುವಂತೆ ನೋಡಿಕೊಂಡಿದ್ದರು.

ದಿನ ಭವಿಷ್ಯ: ಈ ರಾಶಿಯವರ ಬುದ್ಧಿಶಕ್ತಿ ಮಂಕಾಗಲಿದೆ!

ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಯನ್ನು ನಿಭಾಯಿಸಿದ ಕ್ರಮಕ್ಕೆ ಡಾ.ಹರ್ಷ ಅವರ ಬಗ್ಗೆ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತಗೊಂಡಿತ್ತು. ಕೋವಿಡ್‌ ವೇಳೆ ಪ್ರತಿದಿನವೂ ವಿಶೇಷ ರೀತಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್‌ ಸಿಬ್ಬಂದಿಯನ್ನು ಕೋವಿಡ್‌ ವಾರಿಯರ್‌ ಹೆಸರಿನಲ್ಲಿ ಗೌರವಿಸಲಾಗಿತ್ತು. ಡಾ. ಹರ್ಷ ಮತ್ತು ವಿಕಾಸ್‌ ಕುಮಾರ್‌ 2004ರ ಐಪಿಎಸ್‌ ಬ್ಯಾಚ್‌ ಅಧಿಕಾರಿಗಳಾಗಿದ್ದಾರೆ.

ಕೊರೋನಾ ವಾರಿಯರ್ಸ್‌ ಕುಟುಂಬಸ್ಥರ ಜೊತೆ ಕಮಿಷನರ್ ವಿಡಿಯೊ ಕಾನ್ಫರೆನ್ಸ್