'ಆತಂಕ ಪಡುವ ಅಗತ್ಯವಿಲ್ಲ : ಶೀಘ್ರ ಹತೋಟಿಗೆ ಬರಲಿದೆ ಕೊರೋನಾ'
ದೇಶದಲ್ಲಿ ಕೊರೋನಾರ್ಭಟ ಹೆಚ್ಚಾಗಿದ್ದು, ಆದರೆ ಜನರು ಆತಂಕ ಪಡುವ ಅಗತ್ಯವಿಲ್ಲ. ಶೀಘ್ರ ಮಹಾಮಾರಿಹತೋಟಿಗೆ ಬರಲಿದೆ ಎಂದು ಮಾಜಿ ಸಚಿವರು ಭರವಸೆನೀಡಿದ್ದಾರೆ.
ಶಿರಾ (ಆ.15): ತಜ್ಞರ ಪ್ರಕಾರ ಆಗಸ್ಟ್ ಅಂತ್ಯದ ನಂತರ ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಬರಲಿದ್ದು ಜನರು ಭಯಪಡುವ ಅಗತ್ಯ ಇಲ್ಲ, ಮಳೆಯ ಪ್ರಮಾಣ ಹೆಚ್ಚಿದ್ದು ಹೇಮಾವತಿ ಡ್ಯಾಮ್ ತುಂಬಿದ ಕಾರಣ ಕಳ್ಳಂಬೆಳ್ಳ, ಶಿರಾ ಕೆರೆಗಳು ಬಹುತೇಕ ತುಂಬಲಿದೆ ಎಂದು ಮಾಜಿ ಸಚಿವರಾದ ಟಿಬಿ ಜಯಚಂದ್ರ ಹೇಳಿದರು.
ತಾಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಪಂನ ರಂಗಾಪುರ ಮತ್ತು ದೊಡ್ಡಬಾಣಗೆರೆ ಗ್ರಾಪಂನ ಕುರುಬರರಾಮನಹಳ್ಳಿ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಸೊಂಕು ಕಂಡು ಬಂದ ಹಿನ್ನೆಲೆಯಲ್ಲಿ ಏರಿಯಾ ಸೀಲ್‌ಡೌನ್ ಆಗಿರುವ ಕುಟುಂಬಗಳಿಗೆ ದಿನಸಿ ಕೀಟ್ ವಿತರಣೆ ಮಾಡಿ ಮಾತನಾಡಿದರು.
ಕೊರೋನಾ ಅಟ್ಟಹಾಸ: ಸಾಯುವ ಮುನ್ನ ಪತ್ರಕರ್ತ ಕಣ್ಣೀರು, ವಿಡಿಯೋ ವೈರಲ್...
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಈ ಹಿಂದೆ ನೀರು ಬಿಡುವಂತೆ ಮನವಿ ಮಾಡಲಾಗಿತ್ತು. ನನ್ನ ಮನವಿಗೆ ಸ್ಪಂದಿಸಿ ಈ ಭಾಗದ ಕೆರೆಗಳಿಗೆ ನೀರು ಹರಿಸಿದ್ದು ಇಲ್ಲಿನ ಭಾಗದಲ್ಲಿ ಅಂತರ್ಜಲ ಅಭಿವೃದ್ಧಿ ಹೊಂದಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಶಿರಾ ಕೆರೆ ತುಂಬಿದರೆ ಕುಡಿಯುವ ನೀರಿಗೂ ಅನುಕೂಲವಾಗಲಿದೆ ಎಂದರು.
ಕೊರೋನಾ ಕಾಟ: ಕಂಟೈನ್ಮೆಂಟ್ ಕೈಬಿಡಲು ಪ್ರಸ್ತಾವನೆ...
ಯುವ ಕಾಂಗ್ರೇಸ್ ಮಾಜಿ ಅಧ್ಯಕ್ಷ ಬಿ.ಹಲಗುಂಡೇಗೌಡ, ಬ್ಲಾಕ್ ಕಾಂಗ್ರೆಸ್ ಶಿರಾ ತಾಲೂಕು ಗ್ರಾಮಾಂತರ ಅಧ್ಯಕ್ಷ ನಟರಾಜು ಬರಗೂರು, ಹಾರೋಗೆರೆ ಮಹೇಶ್, ಮುಖಂಡರಾದ ಸಿ.ರಾಮಕೃಷ್ಣ, ದಯಾನಂದ್ ಗೌಡ, ಗುಜ್ಜಾರಪ್ಪ, ಚಿತರಹಳ್ಳಿ ಮಂಜುನಾಥ್, ಸಿದ್ದಪ್ಪ, ಲಕ್ಷ್ಮೇನರಸಮ್ಮ, ಬಿಸಿ ಸತೀಶ್, ಕಂಬಿ ಮಂಜುನಾಥ್, ತಿಮ್ಮೇಗೌಡ ರಂಗಧಾಮಪ್ಪ,ವರಕೆರಪ್ಪ, ಕೃಷ್ಣಪ್ಪ, ಆದಿ ಮನೆ ಬಸವರಾಜು, ದೇವರಾಜು, ಪಿಬಿ ನರಸಿಂಹಯ್ಯ, ರಂಗನಾಥ್, ಕರಿಯಣ್ಣ, ತಾಪಂ ಸದಸ್ಯ ಮಂಜುನಾಥ್, ಬೆಜ್ಜೆಹಳ್ಳಿ ರಾಮಚಂದ್ರಪ್ಪ, ರಂಗಪುರ ಶ್ರೀನಿವಾಸ್ ಗೌಡ, ಗಂಗಧರ್, ತಿಪ್ಪೇಸ್ವಾಮಿ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.