ರಾಜಕೀಯ ಬಣ್ಣ ಕಟ್ಟಿವಿವಾದ ಸೃಷ್ಟಿಸಲು ಹೋಗಬೇಡಿ : ಬಿ. ಹರ್ಷವರ್ಧನ್‌

ಪಟ್ಟಣದ ಬೈಪಾಸ್‌ರಸ್ತೆಯಲ್ಲಿ ವಿವಿಧ ಸಮುದಾಯಗಳ ಭವನ ನಿರ್ಮಾಣದ ಮೂಲಕ ಸಮಾನತೆಯ ಸಂಕೀರ್ಣ ಕಟ್ಟಬೇಕೆಂಬುದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಪರಿಕಲ್ಪನೆಯಾಗಿದ್ದು, ಇದರಲ್ಲಿ ರಾಜಕೀಯ ಬಣ್ಣ ಕಟ್ಟಿವಿವಾದ ಸೃಷ್ಟಿಸಲು ಹೋಗಬೇಡಿ ಎಂದು ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.

Dont go to create political color strife b Harsh Vardhan snr

  ನಂಜನಗೂಡು :  ಪಟ್ಟಣದ ಬೈಪಾಸ್‌ರಸ್ತೆಯಲ್ಲಿ ವಿವಿಧ ಸಮುದಾಯಗಳ ಭವನ ನಿರ್ಮಾಣದ ಮೂಲಕ ಸಮಾನತೆಯ ಸಂಕೀರ್ಣ ಕಟ್ಟಬೇಕೆಂಬುದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಪರಿಕಲ್ಪನೆಯಾಗಿದ್ದು, ಇದರಲ್ಲಿ ರಾಜಕೀಯ ಬಣ್ಣ ಕಟ್ಟಿವಿವಾದ ಸೃಷ್ಟಿಸಲು ಹೋಗಬೇಡಿ ಎಂದು ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.

3.54 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿದ ನಂತರ ಅವರು ಮಾತನಾಡಿದರು.

ಶ್ರೀಕಂಠೇಶ್ವರಸ್ವಾಮಿ ದೇವಾಲಯದ ನಿಧಿಯಿಂದ 8 ಕೋಟಿ ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ವಿವಿಧ ಸಮುದಾಯ ಭವನ ನಿರ್ಮಾಣಕ್ಕೆ ದೇವಾಲಯದ ಅನುದಾನ ನೀಡಿರುವ ಬಗ್ಗೆ ರಾಜಕೀಯ ಕಾರಣಕ್ಕೆ ವಿರೋಧಿಗಳು ವಿವಾದ ಸೃಷ್ಟಿಮಾಡುತ್ತಿದ್ದಾರೆ, ದೇವಾಲಯದ ನಿಧಿಯಿಂದ ಶಾದಿಮಹಲ್‌ ನಿರ್ಮಾಣಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಹುಣ್ಣಿಮೆ, ಶೀವರಾತ್ರಿ, ದೊಡ್ಡಜಾತ್ರೆ ಸೇರಿದಂತೆ ವಿಶೇಷ ದಿನಗಳಲ್ಲಿ ಆಗಮಿಸುವ ಭಕ್ತರಿಗೆ ಸೂಕ್ತ ವಸತಿ ವ್ಯವಸ್ಥೆಯಿಲ್ಲದೇ ಫುಟ್‌ಪಾತ್‌ನಲ್ಲಿ ಭಕ್ತರು ಮಲಗಿರುವುದನ್ನು ನಾನು ಗಮನಿಸಿದ್ದೇನೆ. ಈ ಕಾರಣಕ್ಕಾಗಿಯೇ ದೇವಾಲಯದ ನಿಧಿಯಿಂದ 16 ಕೋಟಿ ವೆಚ್ಚದಲ್ಲಿ 75 ಕೊಠಡಿಗಳ ವಸತಿ ಸಮುಚ್ಛಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇನ್ನು ಬಡ ಹಾಗೂ ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ದೇವಾಲಯದ ಬೈಪಾಸ್‌ ರಸ್ತೆಯಲ್ಲಿ ವಿವಿಧ ಸಮುದಾಯಗಳ ಹೆಸರಿನಲ್ಲಿ ಸಮುದಾಯ ಭವನಗಳ ಸಮುಚ್ಛಯ ನಿರ್ಮಾಣ ಮಾಡಿ ಸಮಾನತೆಯ ಸಮುಚ್ಛಯ ತಲೆ ಎತ್ತಬೇಕು ಎಂಬ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಕನಸಿನ ಯೋಜನೆಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಈ ವೇಳೆ ಶಾದಿ ಮಹಲ್‌ಗೆ ಅನುದಾನ ನೀಡಲು ಕಾನೂನಾತ್ಮಕ ತೊಡಕಿರುವುದನ್ನು ಗಮನಿಸಿ ಅದನ್ನು ಕೈಬಿಡಲಾಗಿದೆ ಎಂದರು.

ಉಳಿದಂತೆ ಉಪ್ಪಾರ, ನಾಯಕ, ಮಡಿವಾಳ, ಈಡಿಗ, ಪೌರಕಾರ್ಮಿಕ, ಸವಿತಾ ಸಮಾಜ, ಒಕ್ಕಲಿಗ, ಗಾಣಿಕ, ಗೆಜ್ಜಗಾರ ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳಿಗೆ ಭವನ ನಿರ್ಮಾಣ ಮಾಡಿಕೊಡಲು ಸಿಎಂ ಬಸವರಾಜ ಬೊಮ್ಮಾಯಿ ಅವರೂ ಕೂಡ ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ವಿಶೇಷ ದಿನಗಳಲ್ಲಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ವಾಸ್ತವ್ಯ ಹೂಡಲು ವಸತಿ ಸೌಕರ್ಯ ಲಭ್ಯವಾಗಲಿದೆ, ಇನ್ನು ಸಂಸದ ವಿ. ಶ್ರೀನಿವಾಸಪ್ರಸಾದ್‌ಅವರ ಈ ದೂರದೃಷ್ಟಿಚಿಂತನೆಯನ್ನು ಸಹಿಸದ ರಾಜಕೀಯ ವಿರೋಧಿಗಳು ಅನುದಾನವನ್ನು ಶಾದಿ ಮಹಲ್‌ಗೆ ಬಳಕೆ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಇನ್ನು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ನಿಧಿಯಿಂದ ಇದೇ ಮೊದಲ ಬಾರಿಗೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಬಳಸುತ್ತಿಲ್ಲ. ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕಲಾಮಂದಿರ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಥಬೀದಿ ಅಭಿವೃದ್ಧಿಗೆ 10.5 ಕೋಟಿ ಅನುದಾನ ಬಳಸಲಾಗಿದೆ. ಅಂತೆಯೇ ಭಕ್ತರು ವಾಸ್ತವ್ಯ ಹೂಡಲು ಭವನಗಳ ನಿರ್ಮಾಣಕ್ಕೆ ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ಇದ್ಯಾವುದರ ಅರಿವು ಇಲ್ಲದೆ ಕೇವಲ ರಾಜಕೀಯ ಲಾಭಕ್ಕಾಗಿ ದೂರದೃಷ್ಟಿಯಿಂದ ಕೂಡಿದ ಯೋಜನೆಗಳ ಬಗ್ಗೆ ಹುಳುಕು ಹುಡುಕುವ ಸಣ್ಣತನವನ್ನು ತೋರುವುದನ್ನು ಬಿಡಬೇಕು ಎಂದು ವಿರೋಧಿಗಳಿಗೆ ಟಾಂಗ್‌ ನೀಡಿದರು.

ನಗರಸಭೆ ಅಧ್ಯಕ್ಷ ಎಚ್‌.ಎಸ್‌. ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಪಿ. ಮಹೇಶ್‌, ನಗರ ಮಂಡಲ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಎಸ್‌.ಎಂ. ಕೆಂಪಣ್ಣ, ನವೀನ್‌ರಾಜ್‌, ಕೆಆರ್‌ಡಿಎಲ್‌ ಸಹಾಯಕ ಎಂಜಿನಿಯರ್‌ ಸೌರಭ, ಲೋಕೇಶ್‌ ಇದ್ದರು.

Latest Videos
Follow Us:
Download App:
  • android
  • ios