ಭೀಮಾ ನದಿಯಲ್ಲಿ ಸಿಲುಕಿಕೊಂಡು ಜೀವ ರಕ್ಷಣೆಗಾಗಿ ಪರದಾಡುತ್ತಿದ್ದ ನಾಯಿ ಮರಿಯನ್ನು ತಾಯಿ ಶ್ವಾನ ರಕ್ಷಣೆ ಮಾಡಿದೆ

ಆಲಮೇಲ (ಅ.18): ಭಾರಿ ಪ್ರವಾಹದದಿಂದ ವಿಜಯಪುರದ ಆಲಮೇಲ ತಾಲೂಕಿನ ತಾರಾಪುರ ಭೀಮಾ ನದಿಯಲ್ಲಿ ಸಿಲುಕಿಕೊಂಡು ಜೀವ ರಕ್ಷಣೆಗಾಗಿ ಪರದಾಡುತ್ತಿದ್ದ ನಾಯಿ ಮರಿಯನ್ನು ತಾಯಿ ಶ್ವಾನ ರಕ್ಷಣೆ ಮಾಡಿರುವುದು ಗಮನ ಸೆಳೆದಿದೆ. 

"

ತಾಯಿ ಶ್ವಾನವೂ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಆ ನಾಯಿ ಮರಿಯನ್ನು ಪ್ರವಾಹದ ನೀರಿನಲ್ಲೇ ಬಾಯಿ ಅಲ್ಲಿ ಕಚ್ಚಿಕೊಂಡು ಹೋಗಿ ರಕ್ಷಣೆ ಮಾಡಿದೆ.

ಪ್ರವಾಹ ಪ್ರವಾಸ ಹೋಗ್ಬಿಂದ ಸಚಿವ ಅಶೋಕನವರದ್ದು ವೀಕೆಂಡ್ ಪಿಕ್‌ ನಿಕ್ ನಂತಿತ್ತು..! ..

ವಿಜಯಪುರ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನರು ಮನೆ, ಹೊಲ ಕಳೆದುಕೊಂಡು ಕಣ್ಣಿರಾಗುತ್ತಿದ್ದಾರೆ. ಬದುಕೇ ದುಸ್ಥರವಾಗಿದೆ.

ಊರಿಗೆ ಊರಿಯೇ ನೀರಿನಲ್ಲಿ ಮುಳುಗಿದರೂ ವಿಜಯಪುರದಲ್ಲಿ ಕುಡಿಯಲು ನೀರಿಲ್ಲದೇ ಜನರು ಪರದಾಡುವಂತಾಗಿದೆ. ಪ್ರವಾಹದಿಂದ ನಿತ್ಯ ಕುಡಿಯಲು ಸರಬರಾಜು ಮಾಡುತ್ತಿರುವ ಬಾವಿ ಮುಚ್ಚಿಹೋಗಿದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಪೂರೈಸುತ್ತಿದ್ದರೂ ಎಲ್ಲಿಯೂ ಸಾಲುತ್ತಿಲ್ಲ. ಅನ್ನಾಹಾರಕ್ಕಾಗಿ ತೀವ್ರ ಪರದಾಟ ಎದುರಾಗಿದೆ.