ಹುಬ್ಬಳ್ಳಿ: 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ವೈದ್ಯರಿಂದ ಮೌನ ಪ್ರತಿಭಟನೆ
ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ವೈದ್ಯರು| ಏಳನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಕಿಮ್ಸ್ ಆಸ್ಪತ್ರೆಯ ವೈದ್ಯರಿಂದ ಮೌನ ಪ್ರತಿಭಟನೆ| ರಾಜ್ಯದ 17 ವೈದ್ಯಕೀಯ ಕಾಲೇಜುಗಳಲ್ಲಿ ಈಗಾಗಲೇ ಏಳನೇ ವೇತನ ಆಯೋಗ ಜಾರಿ|
ಹುಬ್ಬಳ್ಳಿ(ಸೆ.21): ಏಳನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಕಿಮ್ಸ್ ಆಸ್ಪತ್ರೆಯ ವೈದ್ಯರು ಮೌನ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಇಂದು(ಸೋಮವಾರ) ನಡೆದಿದೆ.
ನಗರದ ಕಿಮ್ಸ್ ಆಸ್ಪತ್ರೆಯ ಒಪಿಡಿ ಮುಂಭಾಗ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ವೈದ್ಯರು, ರಾಜ್ಯದ 17 ವೈದ್ಯಕೀಯ ಕಾಲೇಜುಗಳಲ್ಲಿ ಈಗಾಗಲೇ ಏಳನೇ ವೇತನ ಆಯೋಗವನ್ನ ಜಾರಿ ಮಾಡಲಾಗಿದೆ. ಆದರೆ ಇದುವರೆಗೂ ಕಿಮ್ಸ್ ವೈದ್ಯಕೀಯ ಕಾಲೇಜಿಗೆ ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಉತ್ತರ ಕರ್ನಾಟಕದ ಪ್ರಥಮ ನೀರಾ ಮಳಿಗೆ ಆರಂಭ
ಕಿಮ್ಸ್‌ನಲ್ಲಿ 300 ಕ್ಕೂ ಹೆಚ್ಚು ಜನ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕಿಮ್ಸ್‌ನಲ್ಲಿ ಏಳನೇ ವೇತನ ಆಯೋಗವನ್ನ ಜಾರಿ ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಹಾಗೂ ಕಿಮ್ಸ್ ಆಡಳಿತ ಮಂಡಳಿಗೆ ಒಂದು ವಾರ ಗಡುವು ನೀಡಿದೆ. ಸದ್ಯ ಕಪ್ಪುಪಟ್ಟಿ ಧರಿಸಿ ಕರ್ತವ್ಯ ವೈದ್ಯರು ನಿರ್ವಹಿಸುತ್ತಿದ್ದಾರೆ. ಬೇಡಿಕೆ ಈಡೇರದಿದ್ದರೆ ಮುಂದಿನ ಸೋಮವಾರದಿಂದ ಕರ್ತವ್ಯ ಸ್ಥಗಿತಕ್ಕೆ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.