Gadag; 10 ನಿಮಿಷದಲ್ಲಿ ಆಪರೇಷನ್, ಮೃತಪಟ್ಟ ಗರ್ಭಿಣಿ ಹೊಟ್ಟೆಯಿಂದ ಮಗು ಹೊರತೆಗೆದ ವೈದ್ಯರು!

* ಮೃತ ಗರ್ಭಿಣಿಯ ಉದರದಿಂದ ಮಗು ಬದುಕಿಸಿದ ವೈದ್ಯರು‌..!

* ಗದಗ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಘಟನೆ

* ಮೂರ್ಛೆ ರೋಗ, ಲೋ ಬಿಪಿಯಿಂದ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದ ಗರ್ಭಿಣಿ......‌

* 10 ನಿಮಿಷದಲ್ಲಿ ಆಪರೇಷನ್ ಮಾಡಿ ಮಗು ಬದುಕಿಸಿದ ವೈದ್ಯರು

doctors delivers living baby from womb of dead pregnant Gadag mah

ಗದಗ( ನ. 11) ವೈದ್ಯ ಲೋಕದಲ್ಲಿ ಒಂದೊಂದು ಅಚ್ಚರಿಗಳು ಆಗುತ್ತಲೇ  ಇರುತ್ತವೆ. ಈ ಬಾರಿ ಅಂಥದ್ದೊಂದು ಅಚ್ಚರಿಯನ್ನು ಗದಗದ (Gadag) ವೈದ್ಯರು ಮಾಡಿದ್ದಾರೆ. ಮೃತ ಗರ್ಭಿಣಿ(Pregnant) ಉದರದಿಂದ ಮಗುವನ್ನು ಜೀವಂತವಾಗಿ (Childbirth)ಹೊರತೆಗೆದಿದ್ದಾರೆ.

ಗದಗ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವೆಂಬರ್ 4ರಂದು ಈ ಸಾಧನೆ ಮಾಡಿದ್ದಾರೆ. ಮೂರ್ಛೆ ರೋಗ, ಲೋ ಬಿಪಿಯಿಂದ ಆಸ್ಪತ್ರೆಗೆ ಬರುವಷ್ಟರಲ್ಲಿ ಗರ್ಭಿಣಿ ಮೃತಪಟ್ಟಿದ್ದಳು.  ತಕ್ಷಣ ಎಚ್ಚರಿಕೆ ಹೆಜ್ಜೆ ಇಟ್ಟ ವೈದ್ಯರಿಂದ ಮಗು ಬಚಾವ್ ಮಾಡಿದ್ದಾರೆ.

10 ನಿಮಿಷದಲ್ಲಿ ಆಪರೇಷನ್ ಮಾಡಿ ಮಗು ಬದುಕಿಸಿದ್ದಾರೆ. ಅಪರೂಪದಲ್ಲಿ ಅತೀ ಅಪರೂಪ ಪ್ರಕರಣ ಇದಾಗಿದೆ. ಮೂರ್ಛೆ ರೋಗ, ಲೋ ಬಿಪಿ ಆಗಿ ಗರ್ಭಿಣಿ ಮೃತಪಟ್ಟರೂ ಮಗುವನ್ನ ಬದುಕಿಸಿದ್ದಾರೆ. ಕುಟುಂಬ ಸದಸ್ಯರ ಮನವೊಲಿಸಿ ಯಶಸ್ವಿಯಾಗಿ ಹೆರಿಗೆ ನಡೆಸಲಾಗಿದೆ.

ಮಗು ಆರೋಗ್ಚೇಯವಾಗಿದ್ತದು ಸುಧಾರಿಸಿಕೊಳ್ಳುತ್ತಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ಗರ್ಭಿಣಿ ಅನ್ನಪೂರ್ಣ ಅವರು ಮಗುನ್ನು ಜಗತ್ತಿಗೆ ನೀಡಿ ಕಣ್ಣು ಮುಚ್ಚಿಕೊಂಡಿದ್ದಾರೆ. ಸದ್ಯ ಮಗುವಿಗೆ ದಂಡಪ್ಪ ಮಾನ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಸತ್ತವಳು ಎದ್ದು ಬಂದಳು; ಎಂಥ ವಿಸ್ಮಯ ಈ ನರಜನ್ಮ!

ಸತ್ತವಳು ಎದ್ದು ಬಂದಿದ್ದಳು; ಮಹಿಳೆ ಸಾವನ್ನಪ್ಪಿದ್ದು, ಆಕೆ ಮೃತಪಟ್ಟಿರುವುದಾಗಿ ಖುದ್ದು ವೈದ್ಯರೇ ಪರಿಶೀಲಿಸಿ ಘೋಷಿಸಿದ್ದರು. ಆದರೆ ಇದಾದ ಬರೋಬ್ಬರಿ 45 ನಿಮಿಷಗಳ ಬಳಿಕ ಆ ಮಹಿಳೆ ಎದ್ದು ಕುಳಿತ್ತಿದ್ದಾಳೆ. 

ದ ಸನ್ ಮಾಡಿದ ವರದಿಯನ್ವಯ ಅಮೆರಿಕದ ಕ್ಯಾಥಿ ಎನ್ನುವವರಿಗೆ ಹೊಸ ಜೀವನ ಸಿಕ್ಕಿದೆ. ಆಕೆ ಅಮೆರಿಕದ ಪೂರ್ವ ಕರಾವಳಿಯ ಮೇರಿಲ್ಯಾಂಡ್‌ ನಿವಾಸಿ. ವಾಸ್ತವವಾಗಿ ಕ್ಯಾಥಿಯ ಮಗಳು ಗರ್ಭಿಣಿಯಾಗಿದ್ದು, ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇನ್ನು ಕ್ಯಾಥಿ ಗಾಲ್ಫ್‌ ಕೋರ್ಸ್‌ನಲ್ಲಿದ್ದಾಗ ಈ ಮಾಹಿತಿ ಬಂದಿದೆ. ಕೂಡಲೇ ಆಕೆ ಅಲ್ಲಿಂದ ಆಸ್ಪತ್ರೆಗೆ ತೆರಳಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಆಕೆಗೆ ಹೃದಯಾಘಾತವಾಗಿದೆ. 

ಇಂತಹ ಪರಿಸ್ಥಿತಿಯಲ್ಲಿ, ಕ್ಯಾಥಿಯನ್ನು ತಕ್ಷಣವೇ ಎಮರ್ಜೆನ್ಸಿ ವಾರ್ಡ್‌ಗೆ ಕರೆದೊಯ್ಯಲಾಯಿತು. ವೈದ್ಯರ ಪ್ರಕಾರ, ಕ್ಯಾಥಿಯ ನಾಡಿ ಸಿಕ್ಕಿಲ್ಲ. ಹೀಗಾಗಿ ಬಹಳ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಯಾಥಿಯ ಮೆದುಳಿಗೆ ಸುಮಾರು 45 ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ವೈದ್ಯರು ಕ್ಯಾಥಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ವೈದ್ಯರ ಭಾಷೆಯಲ್ಲಿ ಹೇಳುವುದಾದರೆ ಕ್ಯಾಥಿಯನ್ನು ಕ್ಲಿನಿಕಲಿ ಡೆಡ್ ಎಂದು ಘೋಷಿಸಲಾಗಿದೆ. ಅತ್ತ, ಕ್ಯಾಥಿಯ ಮಗಳಿಗೆ 36 ಗಂಟೆಯ ಹೆರಿಗೆ ನೋವಿನ ಬಳಿಕ ಸಿಸೇರಿಯನ್ ಮೂಲಕ ಹೆರಿಗೆ ನಡೆದಿದೆ. ಈ ಆತಂಕದ ಸನ್ನಿವೇಶದಲ್ಲಿ ಇತ್ತ ಕ್ಯಾಥಿ ಸತ್ತ ಕೇವಲ 45 ನಿಮಿಷಗಳ ಬಳಿಕ ಮತ್ತೆ ಎದ್ದು ಕುಳಿತಿದ್ದರು.

Latest Videos
Follow Us:
Download App:
  • android
  • ios