Asianet Suvarna News Asianet Suvarna News

ಬಿಜೆ​ಪಿಯಿಂದ ಜಾತಿ ಹೆಸ​ರಲ್ಲಿ ಸಮಾಜ ಒಡೆ​ಯುವ ಯತ್ನ: ಡಿಕೆಶಿ

ಸಮಾಜದಲ್ಲಿ ಹಿಂದುಳಿದ, ಗುರುತಿಸಿಕೊಳ್ಳದ ವರ್ಗಗಳ ಬಗ್ಗೆ ಚಿಂತಿಸಿ ನಿಗಮ ಮಾಡಿದರೆ ಒಪ್ಪಿಕೊಳ್ಳಬಹುದು. ಆದರೆ, ರಾಜ್ಯ ಸರ್ಕಾರ ಸಾಗುತ್ತಿರುವ ದಾರಿ ಸರಿಯಲ್ಲ. ಈ ಕುರಿತಂತೆ ನ. 30ರಂದು ಪಕ್ಷದ ಹಿರಿಯರ ಸಭೆ ಕರೆದಿದ್ದು, ಪಕ್ಷದ ಮುಂದಿನ ನಡೆ ಬಗ್ಗೆ ನಿರ್ಧರಿಸಲಿದ್ದೇವೆ: ಡಿ.ಕೆ. ಶಿವಕುಮಾರ

DK Shivakumar Slam On BJP Governemnt grg
Author
Bengaluru, First Published Nov 29, 2020, 2:32 PM IST

ಶಿರಸಿ(ನ.29): ಬಿಜೆಪಿ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳುತ್ತಿದೆ. ಅದು ರಚಿಸಿಕೊಂಡ ಚಕ್ರವ್ಯೂಹದಲ್ಲಿ ಅದೇ ಸಿಲುಕಿಕೊಳ್ಳಲಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಭವಿಷ್ಯ ನುಡಿದಿದ್ದಾರೆ.

ನಗರದ ಶ್ರೀಪಾದ ಹೆಗಡೆ ಕಡವೆ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಹಿಂದುಳಿದ, ಗುರುತಿಸಿಕೊಳ್ಳದ ವರ್ಗಗಳ ಬಗ್ಗೆ ಚಿಂತಿಸಿ ನಿಗಮ ಮಾಡಿದರೆ ಒಪ್ಪಿಕೊಳ್ಳಬಹುದು. ಆದರೆ, ರಾಜ್ಯ ಸರ್ಕಾರ ಸಾಗುತ್ತಿರುವ ದಾರಿ ಸರಿಯಲ್ಲ. ಈ ಕುರಿತಂತೆ ನ. 30ರಂದು ಪಕ್ಷದ ಹಿರಿಯರ ಸಭೆ ಕರೆದಿದ್ದು, ಪಕ್ಷದ ಮುಂದಿನ ನಡೆ ಬಗ್ಗೆ ನಿರ್ಧರಿಸಲಿದ್ದೇವೆ ಎಂದರು.

ಪಕ್ಷ ನನಗೆ ನೀಡಿರುವ ಹುದ್ದೆಯನ್ನು ಅಧಿಕಾರ ಎಂದು ಪರಿಗಣಿಸುವುದಿಲ್ಲ. ಬಿಜೆಪಿ ಆಡಳಿತದಿಂದ ಕಿರುಕುಳ ಅನುಭವಿಸುತ್ತಿರುವ ಜನತೆಯನ್ನು ಹೊರ ತರಲು ನನಗೆ ನೀಡಿರುವ ಜವಾಬ್ದಾರಿ ಎಂದು ಪರಿಗಣಿಸಿದ್ದೇನೆ. ಜಾತಿಯ ಬಗ್ಗೆ ನನಗೆ ನಂಬಿಕೆ ಇಲ್ಲ, ಆದರೆ, ರಾಜ್ಯದಲ್ಲಿ ಬದಲಾವಣೆ ತಂದು ಯುವಕರು ಮತ್ತು ಮಹಿಳೆಯರನ್ನು ಅಧಿಕ ಪ್ರಮಾಣದಲ್ಲಿ ವಿಧಾನಸೌಧಕ್ಕೆ ಕರೆದೊಯ್ಯಲು ನಿರ್ಧರಿಸಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದು, ಐವರು ಶಾಸಕರು ಇಲ್ಲಿಂದ ಆರಿಸಿ ಬಂದಿದ್ದರು. ಈಗ ನಮ್ಮ ಮನೆಯನ್ನು ನಾವು ಮೊದಲು ಸರಿಪಡಿಸಿಕೊಳ್ಳಬೇಕಾಗಿದೆ. ಜಿಲ್ಲೆಯ ಜನ ಬುದ್ಧವಂತರು ಮತ್ತು ವ್ಯವಹಾರದಲ್ಲಿಯೂ ಚತುರರಾಗಿದ್ದಾರೆ. ಈ ಜನರಿಂದಲೇ ನಾವು ಬದಲಾವಣೆ ನಿರೀಕ್ಷಿಸಿದ್ದೇವೆ ಎಂದರು.

ಸರ್ಕಾರಿ ವಾಹನದ ಮೇಲೆ ಕುಳಿತು ಯುವತಿಯ ಪೋಸ್, ದಾಖಲಾಯ್ತು ಕೇಸ್!

ಅರಣ್ಯ ಅತಿಕ್ರಮಣದಾರರಿಗೆ ಇಲಾಖೆಯ ಕಿರಿಕಿರಿ ಜಿಲ್ಲೆಯಾದ್ಯಂತ ಇದೆ. ರೈತರ ಹೊಲದ ಹೊರಗೆ, ಅರಣ್ಯ ಪ್ರದೇಶಕ್ಕೆ ಅವರು ಬೇಲಿ ಹಾಕಿಕೊಳ್ಳಲಿ, ಆದರೆ, ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ನಾವು ಆಸ್ಪದ ನೀಡುವುದಿಲ್ಲ. ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಒದಗಿಸಬೇಕು ಎಂಬುದರ ಸಲುವಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತವಿದ್ದಾಗ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ರಾಜ್ಯ, ಅತಿಕ್ರಮಣದಾರರಿಗೆ ತೊಂದರೆ ನೀಡುತ್ತಿದೆ. ರೈತರನ್ನು ಮುಗಿಸುವುದೇ ಇಂದಿನ ಸರ್ಕಾರದ ಕಾಯಕವಾಗಿದೆ. ಅತಿಕ್ರಮಣದಾರರು ಮತ್ತು ರೈತರನ್ನು ರಕ್ಷಿಸುವುದು ಕಾಂಗ್ರೆಸ್‌ ಪಕ್ಷದ ಜವಾಬ್ದಾರಿ ಎಂದು ಪರಿಗಣಿಸಿದ್ದೇವೆ ಎಂದರು.

ಲೀಡ್‌ ತರುವವರೇ ಮುಂದಿನ ನಾಯಕರು

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಆಡಳಿತ ಬರಬೇಕು. ಚುನಾವಣೆ ಬಂದಾಗ ಮಾತ್ರ ನಾಯಕರು ಕಾರ್ಯಪ್ರವೃತ್ತರಾಗಬಾರದು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾರು ತಮ್ಮ ಬ್ಲಾಕ್‌ನಲ್ಲಿ ಕಾಂಗ್ರೆಸ್‌ನ್ನು ಲೀಡ್‌ ತರುತ್ತಾರೋ ಅವರೇ ಮುಂದಿನ ನಾಯಕರಾಗುತ್ತಾರೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು. ಸಾಧ್ಯವಾಗದಿದ್ದ ಪಕ್ಷದಲ್ಲಿ ಈ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಕೊಡಬೇಕು ಎಂದರು.
ಪ್ರತಿ ಬ್ಲಾಕ್‌ನಲ್ಲಿಯೂ ಒಂದು ಕಾಂಗ್ರೆಸ್‌ ಕಾರ್ಯಾಲಯ ಸ್ಥಾಪನೆ ಮಾಡಲಿದ್ದೇವೆ. ಪ್ರತಿ ಬ್ಲಾಕ್‌ಗಳಲ್ಲಿಯೂ ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸಿ, ಪ್ರತಿ ಮನೆಯನ್ನೂ ಕಾಂಗ್ರೆಸ್‌ ಕಾರ್ಯಕರ್ತರು ತಲುಪುವಂತಾಗಬೇಕು. ಬಿಜೆಪಿಯಿಂದ ಬೃಹತ್‌ ಪ್ರಮಾಣದಲ್ಲಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷ ಸೇರುತ್ತಿದ್ದಾರೆ ಎಂದರು.

ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷದ ಆಧಾರದಲ್ಲಿ ನಡೆಯುವುದಿಲ್ಲ. ಆದರೆ, ನಮ್ಮ ಕಾರ್ಯಕರ್ತರು ಸ್ಪರ್ಧಿಸಿರುತ್ತಾರೆ. ಮಹಿಳೆಯರು ಮತ್ತು ಹಿಂದುಳಿದವರಿಗೆ ಹೆಚ್ಚಿನ ಆದ್ಯತೆ ನೀಡಿ. ಕೆಲ ಸಮಾಜದ ಜನ ಆರ್ಥಿಕವಾಗಿ ಸುಧಾರಿಸಿದ್ದರೂ ಸಾಮಾಜಿಕ ನ್ಯಾಯ ಅವರಿಗೆ ಇನ್ನೂ ಸಿಕ್ಕಿಲ್ಲ. ಅಂತಹವರಿಗೆ ಈ ಚುನಾವಣೆಯಲ್ಲಿ ಆದ್ಯತೆ ನೀಡಬೇಕು ಎಂದರು.

ಗೋಕರ್ಣ ಕೋಟಿತೀರ್ಥ ಪುಷ್ಕರಣಿಗೆ ಕೊನೆಗೂ ಸಿಕ್ತು ಸ್ವಚ್ಛತಾ ಭಾಗ್ಯ; ಇದು ಬಿಗ್ 3 ಇಂಪ್ಯಾಕ್ಟ್!

ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ, ಶಾಸಕ ಶ್ರೀಕಾಂತ ಘೋಟ್ನೇಕರ್‌, ಮಹಿಳಾ ಘಟಕ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ, ಕಿಸಾನ್‌ ವಿಭಾಗದ ಅಧ್ಯಕ್ಷ ಸಚಿನ್‌ ಮಿಗಾ, ಪ್ರಮುಖರಾದ ಸತೀಶ ಸೈಲ್‌, ಮಂಕಾಳ ವೈದ್ಯ, ಶಾರದಾ ಶೆಟ್ಟಿ, ನಿವೇದಿತ ಆಳ್ವಾ, ಸುಷ್ಮಾ ರೆಡ್ಡಿ, ವಿ.ಎಸ್‌. ಆರಾಧ್ಯ, ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಇತರರಿದ್ದರು. ಡಿಕೆಶಿ ಕೈ ಬಲಪಡಿಸಲು ಕಾಂಗ್ರೆಸ್‌ ಕಾರ್ಯಕರ್ತರೆಲ್ಲ ಭಿನ್ನಾಭಿಪ್ರಾಯ ಮರೆತು ಒಂದುಗೂಡಬೇಕು ಎಂದು ಶಾಸ​ಕ ಶ್ರೀಕಾಂತ ಘೋಟ್ನೇಕರ್‌ ತಿಳಿಸಿದ್ದಾರೆ. 

ಕೋವಿಡ್‌ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಸೇವೆ ಮಾಡುತ್ತಿದ್ದರೆ, ಬಿಜೆಪಿ ಕೋವಿಡ್‌ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. ಕಾಂಗ್ರೆಸ್‌ ಸರ್ಕಾರ ಮತ್ತೆ ಸ್ಥಾಪನೆಗೆ ಎಲ್ಲ ಒಂದಾಗಬೇಕು ಎಂದು ಶಾಸಕಸತೀಶ ಜಾರಕಿಹೊಳಿ ಹೇಳಿದ್ದಾರೆ.

ಅಡಕೆ ಆರೋಗ್ಯಕ್ಕೆ ಹಾನಿಕರ ಎಂಬ ಗೋರಕ್‌ಸಿಂಗ್‌ ವರದಿ ಸುಪ್ರಿಂ ಕೋರ್ಟ್‌ನಲ್ಲಿದೆ. ಅದನ್ನು ವಾಪಸ್‌ ಪಡೆಯಲು ಯತ್ನಿಸದ ಸ್ಥಳೀಯ ಸಂಸದರು, ಇಲ್ಲಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಬಿಐನ್ನು ವಿರೋಧಿಗಳನ್ನು ಮಣಿಸುವ ಅಸ್ತ್ರವನ್ನಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಕಿಸಾನ್‌ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸಚಿನ್‌ ಮಿಗಾ ತಿಳಿಸಿದ್ದಾರೆ.

ಜಿಲ್ಲೆಯ ಜನತೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆದ ಕಾರ್ಯವನ್ನು ನೆನಪಿಸಿಕೊಳ್ಳುತ್ತಾರೆ. ಆದರೆ, ಇದು ಸಂಸದ ಅನಂತಕುಮಾರ ಮಾಡಿದ ಕಾರ್ಯ ಎಂದು ತೋರಸಲೂ ಏನೂ ಕೆಲಸವಾಗಿಲ್ಲ ಎಂದು ಕಾಂಗ್ರೆಸ್‌ ಮುಖಂಡ ನಿವೇದಿತ ಆಳ್ವಾ ಹೇಳಿದ್ದಾರೆ. 

ಭವ್ಯ ಸ್ವಾಗತ

ನಗರದ ಯಲ್ಲಾಪುರ ನಾಕೆಯಿಂದಲೇ ಡಿಕೆಶಿಯವರನ್ನು ಭವ್ಯ ಸ್ವಾಗತದೊಂದಿಗೆ ಕರೆ ತರಲಾಯಿತು. ಕಾಂಗ್ರೆಸ್‌ ಕಾರ್ಯಾಲಯಕ್ಕೆ ಭೇಟಿ ನೀಡಿದ ಬಳಿಕ ಅವರು ಮಾರಿಕಾಂಬಾ ದೇವಿಯ ದರ್ಶನ ಪಡೆದು ಕಾರ್ಯಕರ್ತರ ಸಭೆಗೆ ಆಗಮಿಸಿದರು.
 

Follow Us:
Download App:
  • android
  • ios