ಮೈಸೂರು(ಜ.03): ಕಪಾಲ ಬೆಟ್ಟವನ್ನು ಏಸು ಬೆಟ್ಟ ಮಾಡಿ ಶಿವಕುಮಾರ್ ಅವರು ಏಸು ಕುಮಾರ್ ಆಗಲು ಯಾಕೆ ಹೊರಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವನ ಅನುಯಾಯಿಗಳು ಹಾಗೂ ಕಾಲಭೈರವನ ಭಕ್ತರ ವಿರುದ್ಧ ಕಾಂಗ್ರೆಸ್ ನಾಯಕರು ದ್ವೇಷ ಸಾಧನೆ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನೋಡಿದ್ದೇನೆ. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಭಕ್ತರಾದ ಪ್ರಧಾನಿ ಮೋದಿ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ರೆ ಸಿದ್ದರಾಮಯ್ಯ ಯಾಕೆ ಸಿಡಿಮಿಡಿಗೊಳ್ತಾರೆ ಎಂದು ಪ್ರಶ್ನಿಸಿದ್ದಾರೆ.

ಇಲಾಖೆ ಬಗ್ಗೆ ಪ್ರಶ್ನಿಸಿದ್ರೆ ಗರಂ ಆದ್ರು ಅಬಕಾರಿ ಸಚಿವ ನಾಗೇಶ್

ಮಠದಲ್ಲಿ ವಿಭೂತಿ ಹಾಕಿಕೊಂಡ್ರೆ ಕಾಂಗ್ರೆಸ್ ನಾಯಕರು ಯಾಕೆ ಗೇಲಿ ಮಾಡ್ತಾರೆ..? ಕಾಲಭೈರವನ ಬೆಟ್ಟ ಕಪಾಲ‌ ಬೆಟ್ಟವನ್ನು ಏಸು ಬೆಟ್ಟ ಮಾಡಲು ಡಿಕೆಶಿ ಹೊರಟಿದ್ದಾರೆ. ಕಪಾಲ ಬೆಟ್ಟವನ್ನು ಏಸು ಬೆಟ್ಟವನ್ನಾಗಿ ಮಾಡಿ ಶಿವಕುಮಾರ್ ಅವರು ಏಸು ಕುಮಾರ್ ಆಗಲು ಏಕೆ ಹೊರಟಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಶಿವನ ಅನುಯಾಯಿಗಳ ಬಗ್ಗೆ ಕಾಲಭೈರವನ ಭಕ್ತರ ಬಗ್ಗೆ ಯಾಕಿಷ್ಟು ದ್ವೇಷ..? ಈ ಪ್ರಶ್ನೆ ನನ್ನನ್ನು ಕಾಡ್ತಿದೆ, ಕಾಂಗ್ರೆಸ್ ನಾಯಕರು ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನ ಗಮನಿಸಿದ್ರೆ ಶಿವನ ಅನುಯಾಯಿಗಳು, ಕಾಲಭೈರವನ ಭಕ್ತರ ಬಗ್ಗೆ ಅವರಿಗಿರುವ ದ್ವೇಷ ಅರ್ಥವಾಗುತ್ತದೆ ಎಂದಿದ್ದಾರೆ.

ಎಂಜಿ ರೋಡ್‌ ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌..?

ದೇಶದ ಪ್ರಧಾನಿಯಾಗಿ ಮಠದ ಮಕ್ಕಳ ಜೊತೆ ಕೆಲವೊಂದು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅಫ್ಘಾನಿಸ್ತಾನ, ಪಾಕಿಸ್ತಾನಗಳಲ್ಲಿ ಅಲ್ಪಸಂಖ್ಯಾತರಾದ ಹಿಂದು, ಕ್ರೈಸ್ತ, ಜೈನರ ಮೇಲೆ ನಡೆಯುತ್ತಿರುವ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಆ ದೇಶಗಳಲ್ಲಿರುವ ಮಕ್ಕಳು ಕಿರುಕುಳಕ್ಕೆ ಒಳಗಾಗಿದ್ದಾರೆ ಹಾಗಾಗಿ ಸಿಎಎ ಜಾರಿಗೆ ತಂದಿದ್ದು ಎಂದು ಮಠದ ಮಕ್ಕಳ ಮುಂದೆ ಹೇಳಿದ್ದಾರೆ. ಮಕ್ಕಳು ದೇಶದ ಭವಿಷ್ಯ ಅವರ ಮುಂದೆ ಪ್ರಧಾನಿ ಮಂತ್ರಿಗಳು ಆ ರೀತಿ ಮಾತನಾಡಿದ್ದು ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಮಂಡಿಯೂರಿ ಮಾತಾಡೋ ಪರಿಸ್ಥಿತಿ ಬಿಜೆಪಿ ಸಂಸದರಿಗಿಲ್ಲ:

ಕರ್ನಾಟಕ ಸಂಸದರು ಪ್ರಧಾನಿ ಮುಂದೆ ಮಾತನಾಡಲ್ಲ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 1998ರ ನಂತರ ಸತತವಾಗಿ ಬಿಜೆಪಿಗೆ ಹೆಚ್ಚು ಸಂಸದರನ್ನ ಕರ್ನಾಟಕ ನೀಡುತ್ತಾ ಬಂದಿದೆ. ಕಾವೇರಿ, ಕಳಸಾಬಂಡೂರಿ ವಿಚಾರದಲ್ಲಿ ಸಂಸದರು ಪೂರಕವಾದ ದಾಖಲೆಗಳನ್ನ ಕೊಟ್ಟು ಕರ್ನಾಟಕದ ಪರ ಇದ್ದಾರೆ. ಕಾವೇರಿ ನದಿ ನಿರ್ವಾಹಣ‌ಮಂಡಳಿ ರಚಬೆಯಾಗಬಾರದೆಂದು ಸೂಕ್ತ ದಾಖಲೆ‌ಕೊಟ್ಟವರು ಕರ್ನಾಟಕದ ಎಂಪಿಗಳು. ಸೋನಿಯಾ ಗಾಂಧಿ ಎದುರುಗಡೆ ಕಾಂಗ್ರೆಸ್ ನಾಯಕರು ಮಂಡಿಯೂರಿ ಮಾತನಾಡ್ತಾರೆ,ಆ ಸ್ಥಿತಿ ಬಿಜೆಪಿಗಿಲ್ಲ ಎಂದು ಹೇಳಿದ್ದಾರೆ. ನೆರೆ ಬಂದಾಗ ಯುಪಿಎ ಸರ್ಕಾರ ಕೊಟ್ಟ ಅನುದಾನಕ್ಕಿಂತ ಮೂರು ಪಟ್ಟು ಹೆಚ್ಚಿಗೆ ಎನ್‌ಡಿಎ ಸರ್ಕಾರ‌ಕೊಟ್ಟಿದೆ ಎಂದಿದ್ದಾರೆ.