ಗದಗ(ಸೆ. 09)  ಡಿಕೆ ಶಿವಕುಮಾರ್ ಬಂಧನದ ಹಿಂದೆ ಮಾಜಿ ಸಿಎಂ ಸಿಎಂ ಸಿದ್ಧರಾಮಯ್ಯ ಕೈವಾಡ ಇದೆ ಎಂಬ ಆರೋಪದ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕ, ಶಾಸಕ ಎಚ್.ಕೆ.ಪಾಟೀಲ್ ಖಂಡಿಸಿದ್ದಾರೆ.

ಆರೋಪ ಮಾಡುತ್ತಿರುವವರ ವಿರುದ್ಧ ಗದಗದಲ್ಲಿ ಕಿಡಿಕಾರಿದ ಪಾಟೀಲರು, ಇದು ಬಿಜೆಪಿಯವರ ಬೇಜವಾಬ್ದಾರಿ, ಕುತಂತ್ರ ಹಾಗೂ ಅಪಹಾಸ್ಯದ ಹೇಳಿಕೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳೀನ್‌ಕುಮಾರ್ ಕಟೀಲ್ ಅವರ ಇಂಥ ಹೇಳಿಕೆ ದುರದುಷ್ಟಕರ ಎಂದರು.

10 ದಿನಗಳ ಬಳಿಕ... ಡಿಕೆಶಿ ಕಂಡು ಕಣ್ಣೀರಾದ ಪತ್ನಿ, ಊಟ ಮಾಡಿಸಿದ ಪುತ್ರಿ

ನ್ಯಾಯಾಂಗ ಪದ್ಧತಿಯ ವಿಚಾರಣಾ ಸಂಸ್ಥೆಯಲ್ಲಿ ರಾಜಕೀಯ ಬೆರಸುವಿಕೆ ಒಳ್ಳೆಯದಲ್ಲ. ಸಿದ್ಧರಾಮಯ್ಯ ಹೇಳಿದ್ದಕ್ಕೆ ಈ‌‌ ಕೆಲಸ ಆಗಿದ್ರೆ, ಕೇಂದ್ರದ  ಸಂಬಂಧಪಟ್ಟ ಇಲಾಖೆ ಸಚಿವರು, ಪ್ರಧಾನಿ ಮೋದಿ ಹೇಳಿಕೆ‌ ಕೊಡಲಿ ಎಂದು ಪಾಟೀಲರು ಆಕ್ರೋಶ ವ್ಯಕ್ತಪಡಿಸಿದರು.

ನವದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆ ಎದುರಿಸುತ್ತಿದ್ದ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನ ಟ್ರಬಲ್ ಶೂಟರ್ ಖ್ಯಾತಿಯ ಡಿಕೆಶಿ ದೆಹಲಿಯ ಫ್ಲಾಟ್ ನಲ್ಲಿ ಹಣ ಸಿಕ್ಕ ವಿಚಾರದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಇದ್ದಾರೆ.