ನವದೆಹಲಿ[ಸೆ. 08]  ಇಡಿ ವಿಚಾರಣೆಗೆ ಬಂದು ಕಸ್ಟಡಿ ಸೇರಿದ ಡಿ.ಕೆ.ಶಿವಕುಮಾರ್‌ ಅವರನ್ನು ನೊಡಲು ಭಾನುವಾರ ಪತ್ನಿ ಮತ್ತು ಮಗಳಿಗೆ ಅವಕಾಶ ಸಿಕ್ಕಿತ್ತು. ಹತ್ತು ದಿನಗಳ ಬಳಿಕ ಅಪ್ಪನನ್ನು ನೋಡಲು ಪುತ್ರಿ ಐಶ್ವರ್ಯ ಅಮ್ಮ ಉಷಾ ಜತೆಗೆ ದೆಹಲಿಯ ಇಡಿ ಕಚೇರಿಗೆ ಆಗಮಿಸಿದ್ದರು. ಪತ್ನಿ ಮತ್ತು ಮಗಳನ್ನು ನೋಡುತ್ತಿದ್ದಂತೆ ಕಾಂಗ್ರೆಸ್ ಟ್ರಬಲ್ ಶೂಟರ್ ಉಮ್ಮಳಿಸಿ ಬಂದ ದುಃಖ ತಡೆದುಕೊಂಡರು.

‘ಡಿಕೆಶಿ ಶಿವಮೊಗ್ಗದಲ್ಲಿ ಚಹಾ ಮಾರುತ್ತಿದ್ದರು’

ಇತ್ತ ಪತ್ನಿ ಉಷಾ ಮತ್ತು ಮಗಳು ಐಶ್ವರ್ಯರಿಗೆ ದುಃಖದ ಕಟ್ಟೆಯೊಡೆದಿತ್ತು. ಅಪ್ಪನನ್ನು ನೋಡುತ್ತಲೇ ಮಗಳು ಐಶ್ವರ್ಯ ಕಣ್ಣೀರಿಟ್ಟರೆ, ಪತ್ನಿ ಉಷಾ ಸಹ ಬಿಕ್ಕಳಿಸಿದ್ರು.  ಡಿಕೆಶಿ ಕುಟುಂಬಸ್ಥರ ಭೇಟಿಗೆ ಕೋರ್ಟ್ ಒಂದು ತಾಸು ಅವಕಾಶ ನೀಡಿತ್ತು. ಆದ್ರೆ ಅಪ್ಪನ ಎದುರು ಕಣ್ಣೀರಿಡುತ್ತಿದ್ದ ಮಗಳು ಐಶ್ವರ್ಯ ಮತ್ತು ಪತ್ನಿ ಉಷಾರ ಪರಿಸ್ಥಿತಿ ಅರಿತ ಅಧಿಕಾರಿಗಳೂ ಒಂದೂವರೆ ಗಂಟೆಗಳ ಭೇಟಿಗೆ ಅವಕಾಶ ನೀಡಿದ್ರು. ಸಂಜೆ 6 ಗಂಟೆ ಬಂದ ಉಷಾ, ಐಶ್ವರ್ಯ ರಾತ್ರಿ 7 :30 ನಿಮಿಷದವರೆಗೂ ಡಿಕೆಶಿ ಜತೆಗಿದ್ರು. ಈ ವೇಳೆ, ಸಂಸದ ಡಿ.ಕೆ.ಸುರೇಶ್ ಊಟ ತಂದಿದ್ರು. ಡಿಕೆ ಶಿವಕುಮಾರ್ ಗೆ ಇಡಿ ಕಚೇರಿಯಲ್ಲಿ ಊಟ ಮಾಡಿಸಿಯೇ ಪತ್ನಿ, ಮಗಳು ವಾಪಸ್ ತೆರಳಿದ್ರು. 

ಡಿ.ಕೆ .ಶಿವಕುಮಾರ್ ಭಾನುವಾರವೂ ವಿಚಾರಣೆ ಎದುರಿಸಿದ್ರು. ದೆಹಲಿಯ ಫ್ಲ್ಯಾಟ್ನಲ್ಲಿ ಸಿಕ್ಕ 8.5 ಕೋಟಿ ಬಗ್ಗೆ  ಪ್ರಶ್ನೆಗಳ ಅಧಿಕಾರಿಗಳು ಸುರಿಮಳೆಗೈದರು.  ಡಿಕೆಶಿ ಆಪ್ತರಾದ ಉದ್ಯಮಿ ಸಚಿನ್ ನಾರಾಯಣ್ ಹಾಗೂ ರಾಜೇಂದ್ರರನ್ನು ನಾಳೆ ಅಥವಾ ನಾಡಿದ್ದು ಇಡಿ ವಿಚಾರಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.