ಡಿಕೆಶಿ ಬಗ್ಗೆ ಮಾತಾಡಿದ್ರೆ ಹುಷಾರ್ : ಈಶ್ವರಪ್ಪಗೆ ಎಚ್ಚರಿಕೆ!
ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದರೆ ಹುಷಾರ್ ಎಂದು ಅಭಿಮಾನಿ ಸಂಘದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ (ಆ.14): ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆಜಿ ಹಳ್ಳಿ) ಹಾಗೂ ದೇವರಜೀವನಹಳ್ಳಿ (ಡಿಜೆ ಹಳ್ಳಿ)ಯಲ್ಲಿ ನಡೆದ ಗಲಭೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತಾಂಧ ಮುಸಲ್ಮಾನರನ್ನು ಬೆಂಬಲಿಸುತ್ತಿದ್ದಾರೆ. ಅವರು ಗಲಭೆಯನ್ನು ಖಂಡಿಸಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಬಾಲಿಶತನವಾಗಿದೆ. ಹಿರಿಯ ರಾಜಕಾರಣಿ ಈಶ್ವರಪ್ಪ ನಾಲಿಗೆ ಮೇಲೆ ಹಿಡಿತ ಇಟ್ಟು ಕೊಂಡು ಮಾತನಾಡಲಿ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಜಿಲ್ಲಾ ಡಿಕೆಶಿ ಅಭಿಮಾನಿಗಳ ಸಂಘದ ಅಧ್ಯಕ್ಷ ಆರ್.ಮೋಹನ್ ಪ್ರತಿಕ್ರಿಯಿಸಿದ್ದಾರೆ.
ದಿಟ್ಟ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ: SDPI, PFI ಸಂಘಟನೆಗಳಿಗೆ ಕುತ್ತು...!...
ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ನಡೆದ ದಾಳಿ ಖಂಡನೀಯ. ಇದನ್ನು ಧರ್ಮಾತೀತ ಹಾಗೂ ಪಕ್ಷಾತೀತವಾಗಿ ಎಲ್ಲರೂ ಖಂಡಿಸಲೇಬೇಕಿದೆ. ಡಿಕೆಶಿ ಸಹ ಇದರಿಂದ ಹೊರತಲ್ಲ. ಆದರೆ ಈ ಬಗ್ಗೆ ಕನಿಷ್ಟಪರಿಜ್ಞಾನ ಹಾಗೂ ವ್ಯವಜ್ಞಾನವಿಲ್ಲದ ಈಶ್ವರಪ್ಪ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. ಮತಾಂಧರು ಎಲ್ಲಾ ಧರ್ಮಗಳಲ್ಲೂ ಇದ್ದಾರೆ. ಇಂತಹವರನ್ನು ಕಾನೂನು, ಪೋಲಿಸರು ಹಾಗೂ ಸಮಾಜ ನಿಯಂತ್ರಿಸಬೇಕಿದೆ.
ನಾವು ದೀಪ ಹಚ್ಚೋರು, ಬೆಂಕಿ ಹಚ್ಚೋರಲ್ಲ : ಸಿದ್ದರಾಮಯ್ಯ..
ಶಿವಮೊಗ್ಗದಲ್ಲಿ ಈ ಹಿಂದೆ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಿಷೇಧಿಸಿದ್ದಾಗ ಅಶೋಕ ರಸ್ತೆಯಲ್ಲಿ ಓಂ ಗಣಪತಿ ಸಮಿತಿ ಹುಟ್ಟು ಹಾಕಿ ಮಾತಾಂಧರನ್ನು ಪೋಷಿಸಿ, ಬೆಳೆಸಿದವರು ಹಾಗೂ ಬೆಳೆಸುತ್ತಿರುವವರು ಯಾರೆಂಬುದನ್ನು ಧೈರ್ಯವಿದ್ದರೆ ಈಶ್ವರಪ್ಪ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು. ಡಿಕೆಶಿ ಸೇರಿದಂತೆ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧ ಈಶ್ವರಪ್ಪನವರು ಮನಬಂದಂತೆ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್‌ನ ಎಲ್ಲಾ ಸೆಲ್‌ಗಳು ಹಾಗೂ ಅಖಿಲ ಕರ್ನಾಟಕ ಡಿಕೆಶಿ ಅಭಿಮಾನಿಗಳ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.