ಕಗ್ಗಂಟಾದ ಶರತ್ ಬಚ್ಚೇಗೌಡ ರಾಜಕೀಯ : ಬಿತ್ತು ದೊಡ್ಡ ಬ್ರೇಕ್
ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರ ಇದೀಗ ಭಾರೀ ಕಗ್ಗಂಟಾಗಿದೆ.
ವರದಿ : ವಿ.ಮಂಜುನಾಥ್ ಸೂಲಿಬೆಲೆ
ಹೊಸಕೋಟೆ (ಅ.16): ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ದಿನಾಂಕ ನಿಗದಿ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟುಸದ್ದು ಮಾಡಿರುವ ಜೊತೆಗೆ ಅವರ ಬೆಂಬಲಿಗರ ಮನಸ್ಸಲ್ಲೂ ಹರ್ಷ ತುಂಬಿದೆ. ಆದರೆ ಈ ನಡುವೆ ಅವರ ಆಸೆಗೆ ಕ್ಷಣಿಕವಾಗಿ ತಣ್ಣೀರೆರೆಚುವಂತಾಗಿದೆ.
ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೊಸಕೋಟೆ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದು, ಶರತ್ ಸೇರ್ಪಡೆ ಬಳಿಕ ಕ್ಷೇತ್ರದಲ್ಲಿ ಆಗುವ ಸಾಧಕ ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದು, ಶರತ್ ಸೇರ್ಪಡೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದಂತಿದೆ.
First Love... ಜೀವನದಲ್ಲಿ ಮರೆಯಲು ಸಾಧ್ಯವೇ ಇರದ ಸಿಹಿ ಅನುಭವ ...
ಸಾಮಾಜಿಕ ಜಾಲತಾಣದಲ್ಲಿ ಅ. 25ಕ್ಕೆ ಮಹೂರ್ತ ಫಿಕ್ಸ್ ಎಂಬ ಸಂದೇಶಗಳು ರವಾನೆ ಆಗುತ್ತಿದೆ. ಆದರೆ ವಾಸ್ತವವಾಗಿ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಕುಟುಂಬದ ವಿರುದ್ಧವಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸಲು ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಿದ್ದಾರೆ. ಆದರೆ ಈಗ ಶರತ್ ಬಚ್ಚೇಗೌಡ ಅವರನ್ನು ಏಕಾಏಕಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ಕಾರ್ಯಕರ್ತರು ಇಬ್ಬಾಗವಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.
ಹೋಬಳಿವಾರು ಸಭೆ: ಎಲ್ಲ ಸಾಧಕ ಭಾಧಕಗಳನ್ನು ಅಂದಾಜಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡರಿಗೆ ಹೋಬಳಿವಾರು ಕಾರ್ಯಕರ್ತರ ಸಭೆ ನಡೆಸಿ ವರದಿ ನೀಡುವಂತೆ ಸಭೆಯಲ್ಲಿ ಸೂಚನೆ ನೀಡಿದ್ಧಾರೆ ಎನ್ನಲಾಗಿದೆ. ಅಂತೆಯೇ ಹೋಬಳಿವಾರು ಸಭೆ ಮಾಡಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚೀಮಂಡಹಳ್ಳಿ ಮುನಿಶಾಮಣ್ಣ ಅವರ ಹೆಗಲಿಗೆ ಹಾಕಿದ್ದು, ಸಭೆಯ ನಂತರ ಪ್ರತಿ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯದ ನಂತರವೇ ಶರತ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಿರ್ಧಾರವಾಗಲಿದೆ.
ಶಾಸಕ ಶರತ್ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹತ್ತಾರು ರೀತಿಯಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಇವೆಲ್ಲಾ ಸತ್ಯಕ್ಕೆ ದೂರವಾದುದು. ಒಬ್ಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಶರತ್ ಬಚ್ಚೇಗೌಡ ಸೇರ್ಪಡೆ ದಿನಾಂಕ ಕುರಿತು ಚರ್ಚೆ ನಡೆದಿಲ್ಲ. ಬದಲಾಗಿ ಹೋಬಳಿವಾರು ಕಾರ್ಯಕರ್ತರ ಸಭೆ ನಡೆಸಿ ವರದಿ ನೀಡುವ ಆದೇಶ ಕೆಪಿಸಿಸಿ ಅಧ್ಯಕ್ಷರಿಂದ ಬಂದಿದೆ. ಅಂತೆಯೇ ಹೋಬಳಿವಾರು ಸಭೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಲಾಗುವುದು.
ಮುನಿಶಾಮಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ