Asianet Suvarna News Asianet Suvarna News

ಹನೂರಿನ ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಹೇರಿದ್ದ ನಿಷೇಧ ವಾಪಸ್‌

ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಹೇರಿದ್ದ ನಿಷೇಧವನ್ನು ಆ.7ರ ಬುಧವಾರದಿಂದ ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಮೂಲಕ ನಿಷೇಧ ವಾಪಸ್ ಪಡೆದಿದೆ.

District Administration Canceled Ban On Hogenakal Falls Visits snr
Author
First Published Aug 8, 2024, 12:18 PM IST | Last Updated Aug 8, 2024, 12:18 PM IST

 ಹನೂರು  :  ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಹೇರಿದ್ದ ನಿಷೇಧವನ್ನು ಆ.7ರ ಬುಧವಾರದಿಂದ ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಮೂಲಕ ನಿಷೇಧ ವಾಪಸ್ ಪಡೆದಿದೆ.

ಜಿಲ್ಲಾಡಳಿತ ವಾಪಸ್‌ ಪಡೆಯಲಾಗಿದ್ದರೂ ಜಲಪಾತ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ. ಹನೂರು ತಾಲೂಕಿನ ಹೊಗೇನಕಲ್ ತಮಿಳುನಾಡು ಮತ್ತು ಕರ್ನಾಟಕದ ಗಡಿಯಲಿದ್ದು, ಹೊಗೇನಕಲ್ ಜಲಪಾತ ವೀಕ್ಷಣೆಗೆ ಕಳೆದ 20 ದಿನಗಳಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದ ಒಳಹರಿವು ಹೆಚ್ಚಾಗಿದ್ದ ಕಾರಣ ಕಾವೇರಿ ನದಿಗೆ ಅಪಾರ ಪ್ರಮಾಣವಾದ ನೀರನ್ನು ಬಿಡಲಾಗಿತ್ತು. ಕಳೆದ 20 ದಿನಗಳಿಂದ ಹೊಗೇನಕಲ್ ಜಲಪಾತ ವೀಕ್ಷಣೆಗೆ ನಿಷೇಧ ವಿಧಿಸಲಾಗಿತ್ತು. ಇದೀಗ ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಮೂಲಕ ನಿಷೇಧ ವಾಪಸ್ ಪಡೆದಿದೆ.

ಬಣಗುಡುತ್ತಿರುವ ಜಲಪಾತ: ದಿನನಿತ್ಯ ರಾಜ್ಯದ ಹಾಗೂ ಮಲೆಮಾದೇಶ್ವರ ಬೆಟ್ಟಕ್ಕೆ ಬಂದ ಭಕ್ತಾದಿಗಳು ಹೊಗೇನಕಲ್ ಜಲಪಾತಕ್ಕೆ ಭೇಟಿ ನೀಡಿ ಅಲ್ಲಿನ ಜಲಪಾತದ ಕಲ್ಲುಬಂಡೆಗಳ ನಡುವೆ ಹರಿಯುವ ಕಾವೇರಿಯ ನರ್ತನ ಮತ್ತು ಅಲ್ಲಿನ ಪರಿಸರ ವೀಕ್ಷಣೆ ಮಾಡಲು ಸದಾ ಜನ ಜಂಗುಳಿ ಮತ್ತು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹೊಗೇನಕಲ್ ಜಲಪಾತದಲ್ಲಿ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ.

ಕಾನನ ನಡುವೆ ಹರಿಯುವ ಜಲಪಾತ:

ಉತ್ತಮ ಮಳೆಯಾಗಿ ಅರಣ್ಯ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಹಸಿರಿನ ನಡುವೆ ಜಲಧಾರೆಯಾಗಿ ಹರಿಯುತ್ತಿರುವ ಹೊಗೇನಕಲ್ ಜಲಪಾತ ವೀಕ್ಷಣೆಗೆ ಬೋಟಿಂಗ್ ಅವಕಾಶ ಕಲ್ಪಿಸಿದ್ದು, ಪ್ರವಾಸಿಗರಿಗೆ ವೀಕೆಂಡ್ ಸಂದರ್ಭದಲ್ಲಿ ಜಲಪಾತ ವೀಕ್ಷಣೆ ನಡುವೆ ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ಹರಿಯುತ್ತಿರುವ ಕಾವೇರಿ ನದಿಯ ಮಡಿಲಲ್ಲಿ ಹರಿಯುವ ಹೊಗೇನಕಲ್‌ ಜಲಪಾತದಲ್ಲಿ ಸಂಭ್ರಮಿಸಬಹುದಾಗಿದೆ.

ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ:

ಮಲೆ ಮಾದೇಶ್ವರ ಬೆಟ್ಟ ತೆರಳಿ ದರ್ಶನ ಪಡೆದ ಪ್ರವಾಸಿಗರು ಪ್ರೇಕ್ಷಣೀಯ ಸ್ಥಳ ಹೊಗೇನಕಲ್ ಜಲಪಾತ ವೀಕ್ಷಣೆಗೆ ತೆಪ್ಪದಲ್ಲಿ ತೆರಳಿ ಜಲಪಾತದ ಜಲವೈಭವ ನೋಡಲು ಪ್ರವಾಸಿಗರಿಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿದೆ. ಕಲ್ಲು ಬಂಡೆಗಳ ನಡುವೆ ಹಾಲಿನ ನೊರೆಯಂತೆ ತುಂಬಿ ಹರಿಯುತ್ತಿರುವ ಕಾವೇರಿ ನದಿಯ ನೀರಿನ ದೃಶ್ಯ ವೈಭವ ನೋಡಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ತಮಿಳುನಾಡಿನಿಂದ ಆ ಭಾಗದಲ್ಲಿ ಪ್ರವಾಸಿಗರಿಗೆ ವೀಕ್ಷಣೆಗೆ ಅಲ್ಲಿನ ಸರ್ಕಾರ ಹಾಗೂ ಜಿಲ್ಲಾಡಳಿತ ಪ್ರವಾಸಿಗರಿಗೆ ನಿಷೇಧ ತೆರವು ಗೊಳಿಸಿಲ್ಲ. ಹೀಗಾಗಿ ಬರುವ ಪ್ರವಾಸಿಗರಿಗೆ ಇಲ್ಲಿ ಸರಿಯಾದ ಮೂಲಭೂತ ಸೌಲಭ್ಯಗಳು ಇಲ್ಲದೆ ಇರುವುದು ಈ ಭಾಗದ ಪ್ರವಾಸಿಗರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

Latest Videos
Follow Us:
Download App:
  • android
  • ios