ಲಾಕ್‌ಡೌನ್ ಎಫೆಕ್ಟ್: ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ವಿತರಣೆ
ಮೇ ಮತ್ತು ಜೂನ್ ಎರಡು ಮಾಹೆಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿ ಉಚಿತವಾಗಿ ವಿತರಿಸಲು ಆದೇಶ| ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಈ ವಿಶೇಷ ಯೋಜನೆಯ ಅಕ್ಕಿಯನ್ನು ಸಮರ್ಪಕವಾಗಿ ಹಾಗೂ ನಿಗದಿತ ಅವಧಿಯೊಳಗಾಗಿ ಬಳಕೆ ಮಾಡುವ ಕುರಿತು ಆದೇಶ|
ಬಾಗಲಕೋಟೆ(ಮೇ.28): ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಹಾಗೂ ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಒಳಪಡದ ಕಾರ್ಮಿಕರಿಗೆ ಆತ್ಮ ನಿರ್ಭಯ ಯೋಜನೆಯಡಿ ಜಿಲ್ಲೆಯಲ್ಲಿರುವ 23,740 ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಮೇ ಮತ್ತು ಜೂನ್ ಎರಡು ಮಾಹೆಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಈ ವಿಶೇಷ ಯೋಜನೆಯ ಅಕ್ಕಿಯನ್ನು ಸಮರ್ಪಕವಾಗಿ ಹಾಗೂ ನಿಗದಿತ ಅವಧಿಯೊಳಗಾಗಿ ಬಳಕೆ ಮಾಡುವ ಕುರಿತು ಆದೇಶಿಸಿದ್ದು, ಆಹಾರಧಾನ್ಯ ವಿತರಣೆಗೆ ಮರು ಹಂಚಿಕೆ ಮಾಡಲಾಗಿರುತ್ತದೆ. ಈ ಯೋಜನೆಯಡಿ ಬರುವ ಫಲಾನುಭವಿಗಳ ಆಧಾರ ಸಂಖ್ಯೆಯನ್ನು ಪಡೆದು ಆನ್‌ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ವಿತರಿಸತಕ್ಕದ್ದು ಎಂದರು.
ಬರೀ ಸುಳ್ಳು: 'ಮೋದಿ ಘೋಷಿಸಿದ ಪ್ಯಾಕೇಜ್ ಮುಂದೆಯೂ ನೋಡಲ್ಲ, ಹಿಂದೆಯೂ ಕೇಳಿಲ್ಲ'
ಪ್ರತಿ ಆಧಾರ ಸಂಖ್ಯೆಯ ಮೂಲಕ ಪರಿಶೀಲಿಸಿ ಅವರ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದ ನಂತರ ಸದರಿ ಓಟಿಪಿಯನ್ನು ದಾಖಲಿಸಿ ಪಡಿತರ ವಿತರಣೆಗೆ ಕ್ರಮವಹಿಸಲು ತಿಳಿಸಲಾಗಿದೆ. ಮೇ ಮಾಹೆಯ ಪಡಿತರವನ್ನು ಮೇ. 31 ವರೆಗೂ ವಿತರಿಸಬೇಕು. ಜೂನ್ ತಿಂಗಳ ಪಡಿತರವನ್ನು ಜೂನ್ 1 ರಿಂದ 10 ವರೆಗೆ 5 ಕೆಜಿ ಅಕ್ಕಿ ಹಾಗೂ ಕೇಂದ್ರ ಸರಕಾರವು ಹಂಚಿಕೆ ಮಾಡುವ ಕಡಲೆ ಕಾಳನ್ನು ವಿತರಿಸಬೇಕು. ಜೂನ್ ತಿಂಗಳಲ್ಲಿ ಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕಡಲೆ ಕಾಳನ್ನು ಪಡೆಯಲು ಅರ್ಹರಿರುತ್ತಾರೆ. ವಲಸೆ ಕಾರ್ಮಿಕರು ಸ್ವಂತ ಮನೆ ಹೊಂದಿರತಕ್ಕದಲ್ಲ.ಆದಾಯ ತೆರಿಗೆ ಪಾವತಿಸದೇ ಇರುವವರು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.
ಪಡಿತರ ವಿತರಣೆಯ ನ್ಯಾಯಬೆಲೆ ಅಂಗಡಿ ವಿವರ
ವಲಸೆ ಕಾರ್ಮಿಕರು ಈ ಕೆಳಕೆ ತಿಳಿಸಿದ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರಧಾನ್ಯ ಪಡೆಯಬಹುದಾಗಿದೆ.
ಬಾಗಲಕೋಟೆ ತಾಲೂಕಿನ ಟಿಎಪಿಸಿಎಂಎಸ್ ಬಾಗಲಕೋಟೆ ಮೊ.8884508686.
ಬಿ.ಎಂ.ಕೋಟಿ, ನವನಗರ ಮೊ.9591504972.
ಜನತಾ ಬಜಾರ, ನವನಗರ ಮೊ.9886217199.
ಬಾದಾಮಿ ತಾಲೂಕಿನ ಟಿಎಪಿಸಿಎಂಎಸ್ ಬಾದಾಮಿ ಮೊ.9483852571.
ಕಂಜುಮರ್ಸ್ ಕೋ.ಆ.ಸೊ ಗುಳೇದಗುಡ್ಡ ಮೊ.8050379534.
ಪಿ.ಕೆ.ಪಿ.ಎಸ್ ಕೆರೂರ ಮೊ.9739080665.
ಎಲ್.ಬಿ.ನಾಯ್ಕರ ಕುಳಗೇರಿ ಮೊ.9902004385.
ಬೀಳಗಿ ತಾಲೂಕಿನ ಟಿಎಪಿಸಿಎಂಎಸ್ ಬೀಳಗಿ ಮೊ.7019682890.
ಹುನಗುಂದ ತಾಲೂಕಿನ ಟಿಎಪಿಸಿಎಂಎಸ್ ಹುನಗುಂದ ಮೊ.9480262655.
ಶಾಖಾಂಬರಿ ಕಂ.ಕೋ.ಆ.ಸೋ ಇಳಕಲ್ಲ ಮೊ.9972696150.
ಎಸ್.ಎಸ್.ಕಣ್ಣೂರ ಅಮೀನಗಡ ಮೊ.9880663777.
ಶಾಖಾಂಬರಿ ಕೋ.ಆ.ಸೋ, ಕಮತಗಿ ಮೊ.9986262884.
ಜಮಖಂಡಿ ತಾಲೂಕಿನ ಎಂ.ಆರ್.ವಾಣಿ ಜಮಖಂಡಿ ಮೊ.9036908875.
ದಿ ನೇಕಾರ ಸೋ, ಬನಹಟ್ಟಿ ಮೊ.7795399681.
ಟಿಎಪಿಸಿಎಂಎಸ್ ತೇರದಾಳ ಮೊ.9901279627.
ಉಮಾದೇವಿ ದಯಾಳ ಸಾವಳಗಿ ಮೊ.9164786744.
ಮುಧೋಳ ತಾಲೂಕಿನ ಟಿಎಪಿಸಿಎಂಎಸ್ ಮುಧೋಳ ಮೊ.8197917500.
ಚನ್ನಗಿರೇಶ್ವರ ಸೋ ಮಹಾಲಿಂಗಪುರ ಮೊ.7019709925.
ಪ್ರಭು ಬೋಳಿಶೆಟ್ಟಿ, ಲೋಕಾಪುರ ಮೊ.9902743218.