ಬರೀ ಸುಳ್ಳು: 'ಮೋದಿ ಘೋಷಿಸಿದ ಪ್ಯಾಕೇಜ್ ಮುಂದೆಯೂ ನೋಡಲ್ಲ, ಹಿಂದೆಯೂ ಕೇಳಿಲ್ಲ'
ಮೋದಿ ಕೋವಿಡ್ ಪ್ಯಾಕೇಜ್ ಸುಳ್ಳು| 20 ಲಕ್ಷ ಕೋಟಿಯಲ್ಲಿ 1.70 ಕೋಟಿಯಷ್ಟೇ ಜನರಿಗೆ ತಲುಪುತ್ತೆ: ಸತೀಶ ಜಾರಕಿಹೊಳಿ| ಇದು ಜನರನ್ನು ದಾರಿ ತಪ್ಪಿಸುವ ಪ್ಯಾಕೇಜ್:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ|
ಬಾಗಲಕೋಟೆ(ಮೇ.28): ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಕೋವಿಡ್ ಪ್ಯಾಕೇಜ್‌ನಂತಹ ಸುಳ್ಳು ಪ್ಯಾಕೇಜ್ ಅನ್ನು ಮುಂದೆಯೂ ನೋಡಲ್ಲ. ಹಿಂದೆಯೂ ಕೇಳಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬಾಗಲಕೋಟೆ ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿ ಬುಧವಾರ ಕಾಂಗ್ರೆಸ್ ಮುಖಂಡರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸುಳ್ಳು ಪ್ಯಾಕೇಜ್ ಅನ್ನು ಬಿಜೆಪಿಯವರಿಂದ ಮಾತ್ರ ನೀಡಲು ಸಾಧ್ಯ ಎಂದು ವ್ಯಂಗ್ಯವಾಡಿದರಲ್ಲದೆ, 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಕೇವಲ 1.73 ಲಕ್ಷ ಕೋಟಿ ಮಾತ್ರ ಜನರಿಗೆ ತಲುಪುತ್ತದೆ ಎಂದರು.
ಬಾಗಲಕೋಟೆ: ಒಂದೇ ದಿನ 17 ಕೊರೋನಾ ಸೋಂಕಿತರು ಗುಣಮುಖ
ಮಾರ್ಚ್‌ಗಿಂತ ಮೊದಲು ಹಿಂದಿನ ಅನುದಾನ ಸೇರಿಸಿ ಹಾಗೂ ಬೇರೆ ಬೇರೆ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಪ್ಯಾಕೇಜ್ ಘೋಷಿಸಿ 20 ಲಕ್ಷ ಕೋಟಿ ಪ್ಯಾಕೇಜ್ ನೀಡಿರುವುದಾಗಿ ಹೇಳಿದ್ದಾರೆ. ಅದ್ಯಾವುದೂ ಜನರಿಗೆ ತಲುಪುವುದಿಲ್ಲ. ಇದು ಜನರನ್ನು ದಾರಿ ತಪ್ಪಿಸುವ ಪ್ಯಾಕೇಜ್ ಆಗಿದೆ ಎಂದು ದೂರಿದರು.
ಗ್ರಾಪಂ ಚುನಾವಣೆ ನಡೆಯಬೇಕು ಎಂಬುವುದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವು ಆಗಿದೆ. ಚುನಾವಣೆ ನಡೆಸದೆ ಬೇರೆ ದಾರಿಯೂ ಇಲ್ಲಾ. ಆದರೂ ಅನಗತ್ಯವಾಗಿ ತಮ್ಮ ಪಕ್ಷದ ಪದಾಧಿಕಾರಿಗಳನ್ನು ಗ್ರಾಪಂಗಳಿಗೆ ನೇಮಕ ಮಾಡಲು ಬಿಜೆಪಿ ಹೊರಟಿದೆ. ಅದನ್ನು ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳಲು ಸಾಧ್ಯವೆ ಇಲ್ಲ ಎಂದ ಅವರು, ಬೇಕಾದರೆ ಸದ್ಯ ಇರುವ ಗ್ರಾಪಂ ಆಡಳಿತ ಮಂಡಳಿಗಳನ್ನೇ ಮುಂದುವರಿಸಲಿ. ಆದರೆ, ಹೊಸಬರ ನೇಮಕ ಬೇಡ ಎಂದು ತಿಳಿಸಿದರು.
ಪ್ರವಾಹದಂತಹ ಸಂದರ್ಭದಲ್ಲಿ, ಸದ್ಯದ ಕೊರೋನಾ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ನುಡಿದಂತೆ ನಡೆದಿಲ್ಲ. ಆನೆ ನಡೆದಿದ್ದೆ ದಾರಿ ಎಂಬಂತಾಗಿದೆ. ಅಂತಾರಾಜ್ಯ ವಲಸಿಗರಿಗೆ ಸಾರಿಗೆ ವ್ಯವಸ್ಥೆ ಮಾಡಿಲ್ಲ. ಕೆಲವು ರಾಜ್ಯದವರು ಮಕ್ಕಳ ಸಮೇತ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಸರ್ಕಾರಗಳು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಲಹೆ ನೀಡಿದರು.
ಸುಳ್ಳು ಪ್ಯಾಕೇಜ್ ಅನ್ನು ಬಿಜೆಪಿಯವರಿಂದ ಮಾತ್ರ ನೀಡಲು ಸಾಧ್ಯ. 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಕೇವಲ .1.73 ಲಕ್ಷ ಕೋಟಿ ಮಾತ್ರ ಜನರಿಗೆ ತಲುಪುತ್ತದೆ. ಮಾರ್ಚ್‌ಗಿಂತ ಮೊದಲು ಹಿಂದಿನ ಅನುದಾನ ಸೇರಿಸಿ ಹಾಗೂ ಬೇರೆ ಬೇರೆ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಪ್ಯಾಕೇಜ್ ಘೋಷಿಸಿ 20 ಲಕ್ಷ ಕೋಟಿ ಪ್ಯಾಕೇಜ್ ನೀಡಿರುವುದಾಗಿ ಹೇಳಿದ್ದಾರೆ. ಅದ್ಯಾವುದೂ ಜನರಿಗೆ ತಲುಪುವುದಿಲ್ಲ. ಇದು ಜನರನ್ನು ದಾರಿ ತಪ್ಪಿಸುವ ಪ್ಯಾಕೇಜ್ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.