"

ಬಳ್ಳಾರಿ(ನ.27): ಪ್ರತಿಯೊಬ್ಬ ತಂದೆಗೆ ಮಗನ ಮದುವೆ ಪ್ರಮುಖವಾಗಿರುತ್ತದೆ. ಆದ್ರೇ ಮಗನ ಮದುವೆ ನನ್ನ ರಾಜಕೀಯ ಭವಿಷ್ಯ ಒಂದೇ ಬಾರಿ ಬಂದಿದೆ. ನಿನ್ನೆ ನನ್ನ ಮಗನನ್ನು ಮದುಮಗನನ್ನ ಮಾಡಲಾಯಿತು. ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ. ನನ್ನ ಮಗ ಕೇಳಿದ ಮದುವೆ ಮುಖ್ಯನಾ? ಚುನಾವಣೆ  ಮುಖ್ಯನಾ? ಎಂದು ಪ್ರಶ್ನಿಸಿದ್ದಾನೆ. ಸದ್ಯದ ಪರಿಸ್ಥಿತಿಯಲ್ಲಿ ನನಗೆ ಎರಡು ಮುಖ್ಯವಾಗಿದೆ ಯಾವುದನ್ನು ಬಿಡಲಾಗದು ಎಂದು ಅನರ್ಹ ಶಾಸಕ ಆನಂದ ಸಿಂಗ್ ಕಣ್ಣೀರು ಹಾಕಿದ್ದಾರೆ. 

ಬುಧವಾರ ನಗರದಲ್ಲಿ ನಡೆದ ಪ್ರಚಾರದ ವೇಳೆ ಕಣ್ಣೀರು ಹಾಕಿದ ಆನಂದ್ ಸಿಂಗ್, ಡಿಸೆಂಬರ್ ನಲ್ಲಿ ಮಗನ ಮದುವೆ ಇದೆ. ಅದೇ ತಿಂಗಳಲ್ಲಿ ಐದು ಚುನಾವಣೆಗು ಇವೆ. ಯಾವುದನ್ನು ಬಿಡುವ ಸ್ಥಿತಿಯಲ್ಲಿ ನಾನಿಲ್ಲ. ದೇವರು ಎರಡನ್ನು ನಿಭಾಯಿಸುವ ಶಕ್ತಿ ನೀಡಲೆಂದು ಪ್ರಾರ್ಥನೆ ಮಾಡುತ್ತೇನೆ ಎಂದು ಕಣ್ಣಿರು ಹಾಕಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮದುವೆಗೆ ಬಂದವರಿಗೆ ಬಂಗಾರದ ಕಾಯಿನ್ ನೀಡುತ್ತಾರೆನ್ನುವ ಬಸವರಾಜ ರಾಯರೆಡ್ಡಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಪಕ್ಷಗಳ ಯಾವುದೇ ಆರೋಪಕ್ಕೂ ಪ್ರತಿಕ್ರಿಯೆ ಕೊಡಲಾರೆ. ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹಿರಿಯರು ಅದಕ್ಕೆ ಉತ್ತರಿಸಲಾರೆ ಎಂದು ತಿಳಿಸಿದ್ದಾರೆ. 

'ಆನಂದ ಸಿಂಗ್ ಒಬ್ಬ ಆಯೋಗ್ಯ ಶಾಸಕ, ವಾಮಮಾರ್ಗದಿಂದ ಗೆಲ್ಲಲು ಪ್ಲಾನ್ ಮಾಡಿದ್ದಾನೆ'

ನನ್ನ ಮಗನ ಮದುವೆ ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಮದುವೆ ಖರ್ಚು ವೆಚ್ಚದ ಬಗ್ಗೆ ಎಲ್ಲ ರೀತಿಯ ಡಿಟೈಲ್ಸ್ ನೀಡಿದ್ದೇನೆ. ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ. ಆದ್ರೇ ಇರೋ ಒಬ್ಬ ಮಗನ ಮದುವೆಯ ಪ್ರತಿ ಕ್ಷಣ ಅವನ ಜೊತೆಗೆ ಕಳೆಯುತ್ತಿಲ್ಲ ಅನ್ನೋ ನೋವಿದೆ ಎಂದು ಬೇಸರರಿಂದ ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

ನವೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: