ಹೊಸಪೇಟೆ(ನ.27): ವಿಜಯನಗರದ ಉಪಚುನಾವಣೆಯಲ್ಲಿ ಪ್ರಚಾರದ ಕಾರ್ಯ ಭರದಿಂದ ಸಾಗಿದೆ.ಜಿಲ್ಲೆಯ ಎಲ್ಲ ಕಾಂಗ್ರೆಸ್ ‌ಮುಖಂಡರು ಪ್ರಚಾರ ಮಾಡ್ತಿದ್ದಾರೆ. ಬಿಜೆಪಿ ಅನೈತಿಕ ವ್ಯವಹಾರ ಮಾಡುತ್ತಿದೆ. ನಿಷ್ಠಾವಂತರು, ಪ್ರಾಮಾಣಿಕ ಎನ್ನುವ ಶಬ್ಧ ಬಳಸಿ ಅನೈತಿಕತೆ ಮಾಡುತ್ತಿದ್ದಾರೆ. ಬಿಜೆಪಿಯವರು ನೀತಿಗೆಟ್ಟವರು, ಲಜ್ಜೆಗೆಟ್ಟವರಾಗಿದ್ದಾರೆ. ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲಿ ಎಲ್ಲಡೆ ಅನೈತಿಕ ಕೆಲಸ ಮಾಡ್ತಿದ್ದಾರೆ. ಕೆಟ್ಟ ವ್ಯವಸ್ಥೆ ತಂದು ದೇಶವನ್ನೇ ಹಾಳು ಮಾಡ್ತಿದ್ದಾರೆ ಇದಕ್ಕೆ ಸಾಕ್ಷಿ ಮಹಾರಾಷ್ಟ್ರ ಘಟನೆಯಾಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಬಸವರಾಜ ರಾಯರೆಡ್ಡಿ ಅವರು ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಸಂವಿಧಾನದ ಆಶಯವನ್ನೇ ಬುಡಮೇಲು ಮಾಡ್ತಿದ್ದಾರೆ. ನೈತಿಕತೆಯ ರಾಜಕಾರಣ ಉಳಿಬೇಕಂದ್ರೇ ಹದಿನೈದು ಕಡೆ ಬಿಜೆಪಿಯನ್ನು ಸೋಲಿಸಬೇಕು. ಹಣ ಕೊಟ್ರೇ ಮತ ಹಾಕ್ತಾರೆ ಅನ್ನೋದು ಸುಳ್ಳು. ಮತದಾರರಲ್ಲಿ ನೈತಿಕತೆ ಇದೆ. ಉಪಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗುರುವಾರ ಹೊಸಪೇಟೆಯ ಐದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ. ಸಹೊಸಪೇಟೆಗೆ ಆಗಮಿಸಲಿರುವ ಸಿದ್ದರಾಮಯ್ಯ ಅವರು ಗಾದಿಗನೂರು, ಪಾಪಿನಾಯಕನ ಹಳ್ಳಿ ಕಾರಿಗನೂರು, ಮಲಪನಗುಡಿಯಲ್ಲಿ  ರೋಡ್ ಶೋ ನಡೆಸಲಿದ್ದಾರೆ. ಬಳಿಕ ಕಮಲಾಪುರದಲ್ಲಿ ಹಾಗೂ ಹೊಸಪೇಟೆ ನಗರದಲ್ಲಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶಕ್ಕೆ ಮೂವತ್ತು ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ. 

ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ ಒಬ್ಬ ಆಯೋಗ್ಯ ಶಾಸಕನಾಗಿದ್ದಾನೆ. ವಾಮಮಾರ್ಗದಿಂದ ಗೆಲ್ಲಲು ಪ್ಲಾನ್ ಮಾಡಿದ್ದಾನೆ. ಮಗನ ಮದುವೆ ಅದ್ದೂರಿಯಾಗಿ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮದುವೆ ಮಾಡುವುದು ತಪ್ಪಾಗಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ. 

ನೀತಿ ಸಂಹಿತೆ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಎಷ್ಟು ಜನರು ಊಟ ಮಾಡಿದ್ರೇ ಅದೆಲ್ಲ ಆಯೋಗ ಲೆಕ್ಕ ಕೊಡಬೇಕು. ಬರೀ ಊಟಕ್ಕೆ 2 ಕೋಟಿ ಖರ್ಚು ಮಾಡ್ತಿದ್ದಾರೆ. ಒಂದು ಊಟಕ್ಕೆ ಐದು ನೂರರಂತೆ  ಲೆಕ್ಜಾ ಹಾಕಬೇಕು ಎಂದು ಹೇಳಿದ್ದಾರೆ. 
ಅನರ್ಹ ಶಾಸಕ ಆನಂದ್ ಸಿಂಗ ಕ್ಷೇತ್ರದ ಎಲ್ಲ ಮತದಾರಿಗೆ ಗೋಲ್ಡ್ ಕಾಯಿನ್ ಹಂಚುತ್ತಿದ್ದಾರೆ. 51 ಸಾವಿರ ಕುಟುಂಬಕ್ಕೆ ಗೋಲ್ಡ್ ಕಾಯಿನ್ ಕೊಡಲು ನಿರ್ಧಾರ ಮಾಡಿದ್ದಾರೆ. ಮನೆಯೊಂದಕ್ಕೆ 8 ಗ್ರಾಂ ಕಾಯಿನ್ ನೀಡ್ತಿದ್ದಾರೆ.  ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ. 

ಬಿಜೆಪಿ ಓವರ್ ಕಾನ್ಫಿಡೆನ್ಸ್ ನಲ್ಲಿದ್ದಾರೆ. ದಿನದಿಂದ ದಿನಕ್ಕೆ ಬಿಜೆಪಿ ಅಂಕಿ ಅಂಶ ಕೆಳಗೆ ಇಳಿತಿದೆ. ಕಾಂಗ್ರೆಸ್ ಮುಕ್ತ ಭಾರತ ಅಲ್ಲ ಬಿಜೆಪಿ ಮುಕ್ತ ಭಾರತವಾಗುತ್ತದೆ. ಡಿಸೆಂಬರ್ 9 ರಿಂದ ಅದು ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.