ಬಳ್ಳಾರಿ(ನ.24): ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಐತಿಹಾಸಿಕ ಹಂಪಿ ಉತ್ಸವದಂದೇ ಹೊಸಪೇಟೆ ವಿಜಯನಗರ ಜಿಲ್ಲೆಯಾಗಿ ಘೋಷಣೆಯಾಗುತ್ತಿದೆಯಾ? ಈ ಬಗ್ಗೆ ಅನರ್ಹ ಶಾಸಕ ಆನಂದ್ ಸಿಂಗ್ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ. 

ಹೌದು, ಭಾನುವಾರ ವಿಜಯನಗರ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಆನಂದ್ ಸಿಂಗ್ ಅವರು, ಹಂಪಿ ಉತ್ಸವ ಅಂದ್ರೇನೇ ವಿಜಯನಗರ ಉತ್ಸವವಾಗಿದೆ. ಹಂಪಿ ಉತ್ಸವದಂದೇ ‌ಜಿಲ್ಲೆ ಘೋಷಣೆಯಾದ್ರೇ ತಪ್ಪೇನು? ಎಂದು ಹೇಳುವ ಮೂಲಕ ವಿಜಯನಗರ ನಗರದ ಜಿಲ್ಲೆ ರಚನೆ ಆಗುವುದು ಪಕ್ಕಾ ಎಂದು ಹೇಳಿದಂತಾಗಿದೆ.

ಬಳ್ಳಾರಿ ವಿಭಜನೆಗೆ BSY ಅಸ್ತು: ವಿಜಯನಗರ ಜಿಲ್ಲೆಗೆ ಸರ್ಕಾರದ ಮೊದಲ ಹೆಜ್ಜೆ

ವಿಜಯನಗರ ‌ಜಿಲ್ಲೆ ಮಾಡುವ ಬಗ್ಗೆ ಜನರಿಗೆ ಮನವರಿಕೆ ಮಾಡ್ತಿದ್ದೇನೆ‌. ನಿಯೋಗ ತೆಗೆದುಕೊಂಡು ಹೋಗಿರೋ ಬಗ್ಗೆ ಜನರಿಗೆ ‌ಮಾಹಿತಿ ನೀಡುತ್ತಿದ್ದೇನೆ.ಮಂತ್ರಿ ಅಥವಾ ವಿಜಯನಗರ ‌ಜಿಲ್ಲೆ ಮಾಡೋದ್ರ  ಬಗ್ಗೆ ಎರಡು ಆಯ್ಕೆ ನೀಡಿದ್ರೇ, ಮೊದಲು ನನ್ನ ಆಯ್ಕೆ ವಿಜಯನಗರ ‌ಜಿಲ್ಲೆ ಆಗಿರುತ್ತದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.