Asianet Suvarna News Asianet Suvarna News

ಬಳ್ಳಾರಿ ವಿಭಜನೆಗೆ BSY ಅಸ್ತು: ವಿಜಯನಗರ ಜಿಲ್ಲೆಗೆ ಸರ್ಕಾರದ ಮೊದಲ ಹೆಜ್ಜೆ

ದಶಕದಿಂದ ನನೆಗುದಿಗೆ ಬಿದ್ದಿದ್ದ 'ವಿಜಯನಗರ ಜಿಲ್ಲೆ' ರಚನೆ ಮಾಡಬೇಕೆಂಬ ಏಕಾಏಕಿ ಹೋರಾಟಕ್ಕೆ ಮೊದಲ ಜಯ ಸಿಕ್ಕಿದ್ದು, ವಿಜಯನಗರವನ್ನು ಜೆಲ್ಲೆ ಮಾಡುವ ಬಗ್ಗೆ ಬಿಎಸ್ ವೈ, ಸರ್ಕಾದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

BS Yediyurappa Writes To Chief Sec Over Forming Vijayanagar District
Author
Bengaluru, First Published Sep 19, 2019, 8:33 PM IST

ಬೆಂಗಳೂರು, [ಸೆ.19]: ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರವನ್ನು ಜೆಲ್ಲೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮುಖ್ಯುಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು [ಗುರುವಾರ] ಸರ್ಕಾದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಪತ್ರ ಬರೆದಿದ್ದಾರೆ. 

ಹೊಸಪೇಟೆಯನ್ನು ಕೇಂದ್ರವನ್ನಾಗಿಸಿಕೊಂಡು ವಿಜಯನಗರವನ್ನು ಜಿಲ್ಲೆ ಮಾಡುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಮಂಡಿಸುವಂತೆ ಸರ್ಕಾದ ಮುಖ್ಯ ಕಾರ್ಯದರ್ಶಿಗೆ ಬಿಎಸ್ ವೈ ಪತ್ರದ ಮೂಲಕ ಸೂಚಿಸಿದ್ದಾರೆ.

ನಿನ್ನೆ [ಬುಧವಾರ]  ಉಜ್ಜೈನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ ನೇತೃತ್ವದಲ್ಲಿ  ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಮನವಿ ಪತ್ರ ನೀಡಿತ್ತು. 

ಮನವಿ ಮಾಡಿದ 24 ಗಂಟೆಗಳಲ್ಲಿಯೇ ವಿಜಯನಗರ ಜೆಲ್ಲೆಗೆ ಹೋರಾಟ ನಡೆಸುತ್ತಿರುವರಿಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ.

ಬಿಎಸ್ ವೈ ಬರೆದ ಪತ್ರದಲ್ಲೇನಿದೆ?
"ಪ್ರಸ್ತುತ ಬಳ್ಳಾರಿ ಜಿಲ್ಲೆಯು ತುಂಬಾ ವಿಸ್ತರಾವಾಗಿದ್ದು, 11 ಕಂದಾಯ ತಾಲೂಕುಗಳನ್ನು ಹಾಗೂ 3 ಕಂದಾಯ ಉಪವಿಭಾಗಗಳನ್ನು ಒಳಗೊಂಡಿರುವ ಅತಿ ದೊಡ್ಡ ಜಿಲ್ಲೆ ಎನಿಸಿಕೊಂಡಿದೆ. 

ಜಿಲ್ಲೆಯ ಕೆಲವೊಂದು ಪ್ರದೇಶಗಳು ಜಿಲ್ಲಾ ಕೇಂದ್ರ ಸ್ಥಾನದಿಂದ 200 ಕಿ,ಮೀ. ಅಂತರದಲ್ಲಿರುತ್ತವೆ. ಇದರಿಂದ ಈ ಭಾಗದ ರೈತರಿಗೆ. ಬೆವರಿಗೆ, ಕೂಲ ಕಾರ್ಮಿಕರಿಗೆ ಹಾಗು ಜನಸಾಮಾನ್ಯರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪುವುದು ತುಮಬಾ ದುಸ್ಥರವಾಗಿರುತ್ತದೆ.

ಈ ಹಿನ್ನೆಲಯಲ್ಲಿ ಆಡಳಿತದ ಹಿತದೃಷ್ಟಿಯಿಂದ ಪ್ರಸ್ತುತ ಬಳ್ಳಾರಿ ಜಿಲ್ಲೆ 11 ತಾಲೂಕುಗಳಲ್ಲಿ 5 ತಾಲೂಕುಗಳು [ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು ಮತ್ತ ಕೂಡ್ಲಿಗಿ] ಉಳಿಸಿಕೊಂಡು, ಉಳಿದ 6 ತಾಲೂಕುಗಳು ಅಂದ್ರೆ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟರು, ಹಡಗಲಿ ಮತ್ತು ಹರಪನಹಳ್ಳಿ] ಸೇರಿಸಿ ಹೊಸಪೇಟೆ ಪಟ್ಟಣವನ್ನು ಕೇಂದ್ರವನ್ನಾಗಿಸಿಕೊಂಡು ನೂತನ ವಿಜಯನಗರ ಜಿಲ್ಲೆಯನ್ನು ರಚಿಸುವುದು ತುಂಬಾ ಅಗಗತ್ಯವಿರುತ್ತದೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ವಿಷಯವನ್ನು ಮುಂದಿನ ಸಚಿವ ಸಂಪುಟ ಸಭೆಗೆ ಮಂಡಿಸಲು ಸೂಚಿಸಿದೆ" ಎಂದು ಈ ರೀತಿಯಾಗಿ ಬಿಎಸ್ ವೈ ಸರ್ಕಾದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.   

ಶಾಸಕ ಜೆ.ಗಣೇಶ್, ವಿಧಾನಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಅನರ್ಹಗೊಂಡ ಮಾಜಿ ಶಾಸಕ ಆನಂದ್‍ಸಿಂಗ್, ಮಾಜಿ ಶಾಸಕ ನೇಮಿ ಚಂದ್ರನಾಯಕ್ ಸೇರಿದಂತೆ ಮತ್ತಿತರರ ಬಿಎಸ್ ವೈ ಅವರನ್ನು ಭೇಟಿ ಮಾಡಿ ವಿಜಯನಗರ ಜಿಲ್ಲೆಗೆ ಮನವಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios