Asianet Suvarna News Asianet Suvarna News

ತೆಂಗಿನ ಮರಕ್ಕೆ ರೈನಾಸಿರಸ್‌ ದುಂಬಿ ಕಾಟ, ಇಳುವರಿಯಲ್ಲಿ ಇಳಿಕೆ

ಮೈಸೂರಿನಲ್ಲಿ ತೆಂಗಿನ ಮರಕ್ಕೆ ರೈನಾಸಿರಸ್‌ ದುಂಬಿ (ಕುರುವಾಯಿ) ಪೀಡೆಯಾಗಿ ಪರಿಣಮಿಸಿದ್ದು, ಈ ದುಂಬಿ ಕಾಟದಿಂದ ತೆಂಗಿನ ಇಳುವರಿಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

 

Disease to coconut trees in mysore
Author
Bangalore, First Published Jan 30, 2020, 10:55 AM IST

ಮೈಸೂರು(ಜ.30): ಕಲ್ಪವೃಕ್ಷವಾದ ತೆಂಗಿನ ಮರಕ್ಕೆ ರೈನಾಸಿರಸ್‌ ದುಂಬಿ (ಕುರುವಾಯಿ) ಪೀಡೆಯಾಗಿ ಪರಿಣಮಿಸಿದ್ದು, ಈ ದುಂಬಿ ಕಾಟದಿಂದ ತೆಂಗಿನ ಇಳುವರಿಯಲ್ಲಿ ಗಣನೀಯವಾಗಿ ಕಡಿಮೆ ಆಗುತ್ತಿದೆ.

ರೈನಾಸಿರಸ್‌ ದುಂಬಿಯು ತೆಂಗಿನ ಮರಕ್ಕೆ ಬಹಳ ಹಾನಿಯನ್ನು ಉಂಟು ಮಾಡುವ ಪೀಡೆಗಳಲ್ಲಿ ಒಂದಾಗಿದೆ. ತೆಂಗು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಈ ಕೀಟದ ಹಾವಳಿ ಅತಿಯಾಗಿದ್ದು, ತೆಂಗಿನ ಇಳುವರಿಯಲ್ಲಿ ಉಂಟಾಗುವ ಗಣನೀಯ ಹಾನಿಗೆ ಈ ದುಂಬಿಯೇ ಕಾರಣವಾಗಿದೆ.

ಸ್ಪೆಷಲ್ ಕ್ಲಾಸ್ ನೆಪದಲ್ಲಿ ಮೈ, ಕೈ ಮುಟ್ಟೋ ಮುಖ್ಯ ಶಿಕ್ಷಕ, ಸೆಲ್ಫೀ ತೆಗೆದು ಅಪ್ಲೋಡ್

ರೈನಾಸಿರಸ್‌ ಪ್ರೌಢ ದುಂಬಿಯು ಕಾಂಡ ಅಥವಾ ಸುಳಿಗಳ ಮೃದುವಾದ ಭಾಗಗಳನ್ನು ಕೊರೆದು ತಿನ್ನುತ್ತದೆ. ಇದರಿಂದ ಕೊರೆದ ಭಾಗದಲ್ಲಿ ನಾರಿನಂತಹ ಪದಾರ್ಥವನ್ನು ರಂಧ್ರದಲ್ಲಿ ಬಿಟ್ಟಿರುತ್ತದೆ. ಈ ಕೀಟದ ಆಕ್ರಣದ ಮೊದಲ ಸೂಚನೆ ಎಂದರೆ, ರಂಧ್ರದಲ್ಲಿ ದ್ವಾರದಲ್ಲಿ ಕೀಟ ಕೊರೆದು ತಿಂದಿರುವ ಸ್ವಲ್ಪ ನಾರು ಇರುವುದು ಹಾಗೂ ಈ ಕೀಟದ ಹಾವಳಿ ಜಾಸ್ತಿಯಾದಾಗ ಕೀಟ ಕೊರೆದಿರುವ ನಾರು ಗಣನೀಯ ಪ್ರಮಾಣದಲ್ಲಿ ಗಿಡದ ಬುಡದ ಹತ್ತಿರ ಬಿದ್ದಿರುವುದು.

 

ತೀವ್ರ ಹಾನಿಗೊಳಗಾದ ಗರಿಗಳು ಹರಡಿದಾಗ ಬೀಸಣೆಗೆ ಆಕಾರಾದಲ್ಲಿದ್ದು, ಕತ್ತರಿಯಲ್ಲಿ ಕತ್ತರಿಸಿದ ಹಾಗೆ ಕಾಣುತ್ತದೆ. ದುಂಬಿಗಳು ಹೂ ಗೊಂಚಲುಗಳನ್ನು ಕೊರೆದಾಗ ಕಾಯಿಗಳ ಉತ್ಪತ್ತಿ ಕಡಿಮೆ ಆಗಿರುತ್ತದೆ. ಆಗಿಂದಾಗ್ಗೆ ಸುಳಿ ಭಾಗವನ್ನು ಆಕ್ರಮಿಸಿದಾಗ ಮರಗಳು ಸಾಯುತ್ತವೆ. ಈ ಕೀಟದ ಬಾಧೆಯಿಂದ ತುತ್ತಾದ ಭಾಗವನ್ನು ಕ್ರಮೇಣ ಕೆಂಪು ಮೂತಿ ಹುಳುಗಲು ಆಕರ್ಷಿಸುತ್ತವೆ.

ರೈನಾಸಿರಸ್‌ ದುಂಬಿ ಜೀವನ ಚಕ್ರ:

ಘೇಂಡಾ ಮೃಗದ ತಲೆಯ ಮೇಲೆ ಹಿಂದಕ್ಕೆ ಬಾಗಿದ ಕೊಂಬು ಇರುವಂತೆ ಇದಕ್ಕೂ ತಲೆಯ ಮೇಲೆ ಹಿಂದಕ್ಕೆ ಬಾಗಿದ ಕೊಂಬು ಇರುವುದರಿಂದ ರೈನಾಸಿರಸ್‌ ದುಂಬಿ ಎಂಬ ಹೆಸರು ಬಂದಿದೆ. ಈ ಕೊಂಬು ಹೆಣ್ಣು ದುಂಬಿಯಲ್ಲಿ ಉದ್ದವಾಗಿರುತ್ತದೆ. ಕೋಶದದಿಂದ ಹೊರಬಂದ 20 ರಿಂದ 60 ದಿನಗಳ ನಂತರ ಹೆಣ್ಣು ದುಂಬಿಗಲು ಕೊಟ್ಟಿಗೆ ಗೊಬ್ಬರದ ರಾಶಿಗಳು ಮತ್ತು ಕೊಳೆಯುತ್ತಿರುವ ಸಾವಯವ ಪದಾರ್ಥಗಳಲ್ಲಿ 5 ರಿಂದ 15 ಸೆಂ.ಮೀ. ಆಳದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು ಗುಂಡಾಕಾರವಾಗಿದ್ದು, ಬಿಳಿಯ ಬಣ್ಣ ಇರುತ್ತದೆ. ಒಂದು ಹೆಣ್ಣು ದುಂಬಿಯು ಒಂದು ಬಾರಿಗೆ 48 ರಿಂದ 152 ಮೊಟ್ಟೆಗಳನ್ನು ಬಿಡಿ ಬಿಡಿಯಾಗಿ ಇಡುತ್ತದೆ. ಕೋಶಾವಸ್ಥೆಯು ಭೂಮಿಯಲ್ಲಿ ಮಳೆಗಾಲದಲ್ಲಿ 15 ಸೆಂ.ಮೀ. ಆಳದಲ್ಲಿ, ಬೇಸಿಗೆ ಕಾಲದಲ್ಲಿ 120 ಸೆಂ.ಮೀ. ಆಳದಲ್ಲಿ ಜರುಗುತ್ತದೆ. ಕೋಶವು ಕಂದು ಬಣ್ಣವಾಗಿದ್ದು, 14 ರಿಂದ 29 ದಿನಗಳವರೆಗೆ ಇರುತ್ತದೆ.

ಮೈಸೂರಿನಲ್ಲಿ ಕರಿಚಿರತೆ ದರ್ಶನ! ಪ್ರವಾಸಿಗರು ಫುಲ್ ಫಿದಾ

ಸಾಮಾನ್ಯವಾಗಿ ದುಂಬಿಯು ಸಂಜೆ ಸಮಯದಲ್ಲಿ ಕೋಶದಿಂದ ಹೊರಕ್ಕೆ ಬರುತ್ತದೆ. ದುಂಬಿಯು ರಾತ್ರಿ ಸಮಯದಲ್ಲಿ ಹಾರಾಡುತ್ತಿದ್ದು, ಪ್ರಕಾಶಮಾನದ ದೀಪದ ಬೆಳಕಿಗೆ ಆಕರ್ಷಿಸಲ್ಪಡುತ್ತದೆ. ಹಗಲು ಹೊತ್ತಿನಲ್ಲಿ ಮರಗಳ ಸುಳಿಯಲ್ಲಿದ್ದು, ಸಂಜೆಯಿಂದ ಮುಂಜಾನೆಯವರೆಗೆ ಚಟುವಟಿಕೆಯಿಂದ ಇರುತ್ತದೆ. ಈ ರೈನಾಸಿರಸ್‌ ದುಂಬಿಯ ಒಟ್ಟು ಜೀವಿತಾವಧಿ 101 ರಿಂದ 260 ದಿನಗಳು ಅಂದರೆ ಸರಾಸರಿ 6 ತಿಂಗಳು ಇರುತ್ತವೆ.

ರೈತರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಸಲಹಾ ಮತ್ತು ಮಾಹಿತಿ ಕೇಂದ್ರ(ಹಾರ್ಟಿ ಕ್ಲಿನಿಕ್‌), ತೋಟಗಾರಿಕೆ ಇಲಾಖೆ, ಕರ್ಜನ್‌ ಪಾರ್ಕ್, ಮೈಸೂರು, ದೂ. 0821- 2430451 ಸಂಪರ್ಕಿಸಬಹುದು.

ದುಂಬಿ ಹತೋಟಿ ಹೇಗೆ?:

ರೈನಾಸಿರಸ್‌ ದುಂಬಿ ಕೊರೆದ ರಂಧ್ರದಲ್ಲಿ ಕಬ್ಬಿನದ ಕೊಕ್ಕೆಯನ್ನು ತೂರಿಸಿ ದುಂಬಿಗಳನ್ನು ಹೊರ ತೆಗೆದು ಸಾಯಿಸಬೇಕು. ತೆಂಗಿನ ತೋಟದಲ್ಲಿರುವ ಗೊಬ್ಬರದ ಗುಂಡಿಗಳಿಗೆ ಆಗಿಂದಾಗ್ಗೆ ಕ್ಲೋರೋಪೈರಿಫಾಸ್‌ (1 ಲೀಟರ್‌ ನೀರಿಗೆ 2 ಮಿ.ಲೀ) ಸಿಂಪಡಿಸಬೇಕು. ಗೊಬ್ಬರದ ಗುಂಡಿಗಳಲ್ಲಿ ಕಾಣುವ ಮರಿ ಹುಳುಗಳನ್ನು ನಾಶ ಮಾಡಲು ಮೆಟರೈಸಿಯಂ ಎನೈಸೋಪ್ಲಿಯೆ ಎಂಬ ಹಸಿರು ಬೂಷ್ಟನ್ನು ಸಿಂಪಡಿಸಬಹುದು. ದುಂಬಿಗಳನ್ನು ದನದ ಸಗಣಿ ದ್ರಾವಣ ಮತ್ತು ಹರಳು ಹಿಂಡಿಯ ದ್ರಾವಣಗಳ ಸಹಾಯದಿಂದ ಆಕರ್ಷಣೆ ಮಾಡಿ ಸಂಗ್ರಹಿಸಿ ನಾಶಪಡಿಸಬಹುದು.

ರೈನಾಸಿರಸ್‌ ದುಂಬಿಯ ಬಾಧೆಯನ್ನು ತೋಟದಲ್ಲಿ ಕಡಿಮೆ ಮಾಡಲು ಲಿಂಗಾಕರ್ಷಕ ಬಲೆಗಳನ್ನು ಬಳಸಬಹುದು. ರಂಧ್ರದೊಳಗೆ ಮತ್ತು ಸುಳಿಯ 2- 3 ಗರಿಗಳ ಮಧ್ಯದಲ್ಲಿ ಶೇ.5ರ ಮೆಲಾಥಿಯಾನ್‌ ಪುಡಿಯನ್ನು ಸಮ ಪ್ರಮಾಣದ (1:1) ಮರಳಿನೊಂದಿಗೆ ಬೆರೆಸಿದ ಮಿಶ್ರಣವನ್ನು ತುಂಬಬೇಕು.Disease to coconut trees in mysore

Follow Us:
Download App:
  • android
  • ios