Mysuru : ಕನ್ನಡ ಭಾಷೆ ಪರಂಪರೆ ಉಳಿಸದಿದ್ದರೆ ಅನಾಹುತ ಖಚಿತ
ಕನ್ನಡ ಭಾಷೆ ಕನ್ನಡಿಗರ ಅಸ್ಮಿತೆಯಾಗಿದ್ದು, ಭಾಷೆಯ ಪರಂಪರೆಯನ್ನು ಉಳಿಸದಿದ್ದರೆ ಅನಾಹುತ ಖಂಡಿತವೆಂದು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಮೈಸೂರು ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.
ಹುಣಸೂರು (ನ.09): ಕನ್ನಡ ಭಾಷೆ ಕನ್ನಡಿಗರ ಅಸ್ಮಿತೆಯಾಗಿದ್ದು, ಭಾಷೆಯ ಪರಂಪರೆಯನ್ನು ಉಳಿಸದಿದ್ದರೆ ಅನಾಹುತ ಖಂಡಿತವೆಂದು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಮೈಸೂರು ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಬಾಷೆಗೆ ತನ್ನದೇ ಆದ ಪರಂಪರೆ, ಸಂಸ್ಕೃತಿ ಮತ್ತು ಭವ್ಯ ಇತಿಹಾಸವಿದೆ. ಕನ್ನಡ ಭಾಷೆ ಕೇವಲ ಕನ್ನಡಿಗರಿಗೆ ಮಾತ್ರವಲ್ಲ ಇತರ ಭಾಷಿಕರಿಗೂ ಬೇಕಾದ ಭಾಷೆಯಾಗಿದೆ. ಕನ್ನಡ ಭಾಷೆಯ ಅಸ್ಮಿತೆಯನ್ನು ಕಾಪಾಡಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ. ನಮ್ಮ ಭಾಷಾ ಸಂಸ್ಕೃತಿಯನ್ನು, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವತ್ತ ಎಚ್ಚರವಹಿಸಿದಿದ್ದರೆ ಮುಂದಿನ ದಿನಗಳಲ್ಲಿ ಅನಾಹುತವಾಗುವುದು ನಿಶ್ಚಿತ ಎಂದು ಅವರು ಎಚ್ಚರಿಸಿದರು.
ಕನ್ನಡಿಗರಿರದ ಸ್ಥಳವಿಲ್ಲ: ಭಾರತದ ಅಸ್ಮಿತೆಯಾಗಿರುವ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಬರುವ ಪಾತ್ರಗಳಲ್ಲಿ ಕನ್ನಡಿಗರಿದ್ದಾರೆ. ಪ್ರಭು ಶ್ರೀರಾಮಚಂದ್ರನ ಗೆಲುವಿನಲ್ಲಿ ಕನ್ನಡಿಗ ಹನುಮಂತನ ಪಾತ್ರ ಬಹುಮುಖ್ಯ. ರಾಮ ತನ್ನ ಬಾಯಾರಿಕೆಯನ್ನು ನೀಗಿಸಿಕೊಂಡ ಪಂಪ ಸರೋವರ ನಮ್ಮ ರಾಜ್ಯದ ತುಂಗಭದ್ರಾನದಿಯಾಗಿದೆ. ಪರಶುರಾಮನ ತಾಯಿ ಎಲ್ಲಮ್ಮ ಸವದತ್ತಿಯವಳಾಗಿದ್ದಾಳೆ ಪಂಚಪಾಂಡವರಲ್ಲಿ ಮೊದಲ ಮೂವರು ತಾಯಿ ಕುಂತಿದೇವಿ ಕನ್ನಡಿಗಳು. ಕುಂತಲರಾಜ್ಯದ ಹೆಣ್ಣು ಮಗಳು, ಕುಂತಲ ರಾಜ್ಯವೆಂದರೆ ಇಂದಿನ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ಜಿಲ್ಲೆಯನ್ನೊಳಗೊಂಡ ಪ್ರದೇಶವಾಗಿದೆ ಎಂದರು.
ಇತಿಹಾಸದ ಪುಟಗಳಲ್ಲಿ ಸಿಂಧೂಬಯಲಿನ ನಾಗರಿಕತೆಯ ನಿರ್ಮಾತೃಗಳು ಕೂಡ ಕಣ್ಣರ್ ಎಂಬುದಾಗಿದ್ದು, ಇತಿಹಾಸಕಾರ ಫೆಡ್ರಿಕ್ ಹರಾಸ್ ಪ್ರಕಾರ ಕಣ್ಣರ್ ಎಂದರೆ ಕನ್ನಡಿಗರು ಎಂದು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆ ಮತ್ತು ಕನ್ನಡಿಗರು ಇಡೀ ವಿಶ್ವದ ಒಳಿತಿಗಾಗಿ ಇರುವವರು ಎನ್ನುವ ಹೆಮ್ಮೆ, ಜಾಗತಿಕ ಗತ್ತು ನಮ್ಮಲ್ಲಿರಲಿ. ಭಾಷೆಯ ಅಭಿಮಾನ ನಮಗೆ ಮಾತ್ರವಲ್ಲ ವಿಶ್ವಕ್ಕೆ ಅವಶ್ಯವಿದೆ ಎನ್ನುವ ಹೆಮ್ಮೆ ನಮ್ಮದಾಗಲಿ ಎಂದು ಅಭಿಮಾನಪಟ್ಟರು.
ಪ್ರಾಂಶುಪಾಲ ಜ್ಞಾನಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಬಿ.ಎಂ. ನಾಗರಾಜು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪುಟ್ಟಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ಟಿ.ಕೆ. ಬೋಪಯ್ಯ, ಡಾ. ನಂಜುಂಡಸ್ವಾಮಿ ಹಾಗೂ ವಿದ್ಯಾರ್ಥಿನಿಯರು ಇದ್ದರು.
21 ಭಾಷಿಕರಿಂದ ಒಂದೇ ಕಡೆ ಕನ್ನಡ ರಾಜ್ಯೋತ್ಸವ ಆಚರಣೆ
ಬೆಂಗಳೂರು(ನ.02): ಪೂರ್ವ ವೆನೀಝೀಯಾ ಅಪಾರ್ಟ್‌ಮೆಂಟ್‌ನಲ್ಲಿ ಕನ್ನಡ ಸಂಘ ಮತ್ತು ಕನ್ನಡೇತರರ ಚಂದನವನ ಬಳಗದಿಂದ 67ನೇ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಿ ಕನ್ನಡ ಅಭಿಮಾನವನ್ನು ತೋರಿಸಿಕೊಟ್ಟರು.
ದೇಶದ 10 ರಾಜ್ಯಗಳ 21 ಭಾಷೆಗಳ ಜನರು ಕನ್ನಡ ಭಾಷೆಯ ಬಗ್ಗೆ ಅಭಿಮಾನವಿಟ್ಟು ಎಲ್ಲಾ ಜನರು ಒಟ್ಟಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬೇರೆ ಭಾಷೆಗಳ ಜನರು ಕನ್ನಡದ ಹಾಡು ನೃತ್ಯ, ನಾಟಕವನ್ನು ಪ್ರದರ್ಶಿಸಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದು ವಿಶೇಷವಾಗಿತ್ತು.
ಕರ್ನಾಟಕ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಕೋರಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್!
ಅದಮ್ಯ ಚೇತನ ಟ್ರಸ್ಟ್ ಸಂಸ್ಥಾಪಕಿ ಡಾ. ತೇಜಸ್ವಿನಿ ಅನಂತ ಕುಮಾರ್ ಅವರು ಕನ್ನಡ ಧ್ವಜಾ ರೋಹಣ ನೆರವೇರಿಸಿದರು. ಬಿಡಿಎ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್.ವಿಶ್ವ ನಾಥ್ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಪೂರ್ವ ವೆನೀಝಿಯಾ ನಿವಾಸಿಗಳ ಸಂಘಧ ಆಧ್ಯಕ್ಷ ವಿಶಾಲ್ ಗೋಖಲೆ, ಮುಕುಲ್ ಪಾಂಡುರಂಗಿ, ಸಾಮಾಜಿಕ ಕಾರ್ಯಕರ್ತ ವಿಶ್ವನಾಥ್, ಚಂದನವನ ಬಳಗದ ಶಿವಾ ವೈದ್ಯಮಠ, ಮಹೇಶ್, ಪ್ರಮೋದ್ ಕಡಕೋಳ್, ಸುಂದರೇಶ್, ನಮಿತಾ, ಅನಿತಾ, ವೇದಿಕಾ, ಮಮತಾ ಇದ್ದರು.