ಟೆಕ್ ವೃತ್ತಿಪರರಿಗೆ ಸಂತಸದ ಸುದ್ದಿ, ವೈಟ್‌ಫೀಲ್ಡ್‌-ಚಲ್ಲಘಟ್ಟ ನಮ್ಮ ಮೆಟ್ರೋ ಸೇವೆ ಆಗಸ್ಟ್‌ನಲ್ಲಿ ಆರಂಭ

ಟೆಕ್ ಹಬ್ ಎಂದೆನಿಸಿಕೊಂಡಿರುವ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗಿನ  ನಮ್ಮ ಮೆಟ್ರೋ  ನೇರಳೆ ಮಾರ್ಗವು ಆಗಸ್ಟ್ 2023 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲು ಸಜ್ಜಾಗಿದ್ದು, ಆಗಸ್ಟ್ 22 ರಂದು ಟ್ರಯಲ್ ರನ್‌ ನಡೆಸಲಾಗುತ್ತಿದೆ.

Direct Metro Line from Whitefield to Challaghatta BMRCL Trial runs on  August gow

ಬೆಂಗಳೂರು (ಜು.16): ಟೆಕ್ ಹಬ್ ಎಂದೆನಿಸಿಕೊಂಡಿರುವ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗಿನ  ನಮ್ಮ ಮೆಟ್ರೋ  ನೇರಳೆ ಮಾರ್ಗವು ಆಗಸ್ಟ್ 2023 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದ್ದು, ಬೆಂಗಳೂರಿನ ಪ್ರಯಾಣಿಕರಿಗೆ ಪ್ರಮುಖ ನಿರಾಳ ನೀಡಲಿದೆ. ಬೈಯಪ್ಪನಹಳ್ಳಿ-ಕೃಷ್ಣರಾಜಪುರ (Byappanahalli-KR Pura) ಮತ್ತು ಕೆಂಗೇರಿ-ಚಲ್ಲಘಟ್ಟ ಮಾರ್ಗಗಳನ್ನು ಆಗಸ್ಟ್ ಅಂತ್ಯದೊಳಗೆ ಉದ್ಘಾಟಿಸುವ ಯೋಜನೆ ಹಿನ್ನೆಲೆ ಎರಡೂ ಮಾರ್ಗದಲ್ಲೂ ಆಗಸ್ಟ್ 22 ರಂದು ಟ್ರಯಲ್ ರನ್‌ ಗೆ  ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಸಜ್ಜಾಗಿದೆ. 

ಬೈಯಪ್ಪನಹಳ್ಳಿ-ಕೆಆರ್ ಪುರ (2.1 ಕಿಮೀ) ಮತ್ತು ಕೆಂಗೇರಿ-ಚಲ್ಲಘಟ್ಟ (2 ಕಿಮೀ)  ಎರಡೂ ಕಡೆ ಕೂಡ ಪ್ರಾಯೋಗಿಕ ಸಂಚಾರವು  ಆಗಸ್ಟ್ 22, 2023 ರಂದು ಏಕಕಾಲದಲ್ಲಿ ಪ್ರಾರಂಭವಾಗುತ್ತವೆ. ನಾವು ಎರಡೂ ವಿಭಾಗಗಳನ್ನು ಆಗಸ್ಟ್ ಅಂತ್ಯದ ವೇಳೆಗೆ ಉದ್ಘಾಟಿಸಲು ಯೋಜಿಸುತ್ತೇವೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ, ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.

Bengaluru: ನಾಗವಾರ- ಕಾಳೇನ ಅಗ್ರಹಾರ ಮೆಟ್ರೋ ಕಾಮಗಾರಿ ವಿವರ ಬಿಚ್ಚಿಟ್ಟ ಬಿಎಂಆರ್‌ಸಿಎಲ್

ಆಗಸ್ಟ್ 15 ರಿಂದ, ನಾವು ಎರಡೂ ವಿಭಾಗಗಳಲ್ಲಿನ ಆಯಾಮಗಳ ವೇಳಾಪಟ್ಟಿಯನ್ನು (ಟ್ರ್ಯಾಕ್‌ನ ಮಧ್ಯಭಾಗ ಮತ್ತು ಹತ್ತಿರದ ರಚನೆಯ ನಡುವಿನ ಅಂತರ) ಪರಿಶೀಲಿಸಲು ಮೆಟ್ರೋ ರೈಲಿನ ಚೌಕಟ್ಟನ್ನು ಹೊಂದಿರುವ ಟ್ರಾಲಿಯನ್ನು ನಿರ್ವಹಿಸುವ ಮೂಲಕ ಪರೀಕ್ಷಾ ಸಂಚಾರವನ್ನು ಪ್ರಾರಂಭಿಸುತ್ತೇವೆ. ರೈಲು ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ರಚನಾತ್ಮಕ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಪ್ರಾಯೋಗಿಕ ಸಂಚಾರ ಎಂದು ತಿಳಿಸಿದ್ದಾರೆ.

ಇದರ ಬೆನ್ನಲ್ಲೇ, ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಕೆಂಗೇರಿ-ಚಲ್ಲಘಟ್ಟ (Kengeri-Challaghatta) ಮೆಟ್ರೊ ವಿಭಾಗಗಳಲ್ಲಿ ಆರು ಬೋಗಿಗಳ ಒಂದು ರೈಲಿನೊಂದಿಗೆ ಆಗಸ್ಟ್ 22 ರಿಂದ ಪ್ರಾಯೋಗಿಕ ಓಡಾಟ ನಡೆಸಲಾಗುವುದು. ಹೆಚ್ಚುವರಿಯಾಗಿ, ಬೆನ್ನಿಗಾನಹಳ್ಳಿಯಲ್ಲಿ ಭಾರತೀಯ ರೈಲ್ವೆಯ ಟ್ರ್ಯಾಕ್‌ನ ಮೇಲೆ ಪ್ರಾರಂಭಿಸಲಾದ ಓಪನ್ ವೆಬ್ ಗಿರ್ಡರ್ (OWG) ನ ಲೋಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸಂಪೂರ್ಣ ಪ್ರಯಾಣಿಕರ ಸಾಮರ್ಥ್ಯವನ್ನು ಅನುಕರಿಸುವ ಮರಳಿನ ಚೀಲಗಳನ್ನು ಆರು ಬೋಗಿಗಳಿಗೆ ತುಂಬಿ ರೈಲಿನ ಮತ್ತು ಟ್ರ್ಯಾಕ್‌ ನ ರಚನಾತ್ಮಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು OWG ನಲ್ಲಿ ರೈಲು ಇಡೀ ರಾತ್ರಿ ನಿಲ್ಲುತ್ತದೆ ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ.

ಮೆಟ್ರೋದಲ್ಲಿ ಸೀಟ್ ಫ್ರ್ಯಾಂಕ್: ಈ ವಿಡಿಯೋ ನೋಡಿದ್ರೆ ನಗದಿರಲು ಸಾಧ್ಯವಿಲ್ಲ ನೋಡಿ 

ಕೆಆರ್ ಪುರಂ - ಬೈಯಪ್ಪನಹಳ್ಳಿ, ಸುಮಾರು ಎರಡು ಕಿಲೋಮೀಟರ್ ದೂರವಿರುವ ವೈಟ್‌ಫೀಲ್ಡ್ (ಕಾಡುಗೋಡಿ)  ಪ್ರದೇಶವನ್ನು ಕೆಂಗೇರಿ, ಚಲ್ಲಘಟ್ಟ, ಮೆಜೆಸ್ಟಿಕ್ ಮತ್ತು ಬೆಂಗಳೂರಿನ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ.  ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನೇರಳೆ ಮಾರ್ಗವು 39.4 ಕಿಮೀ ವ್ಯಾಪಿಸಿದೆ.

ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ಸಂಪರ್ಕ ಕಳೆದುಕೊಂಡಿರುವುದರಿಂದ ಮಹದೇವಪುರ, ಐಟಿಪಿಬಿ ಮತ್ತು ಕಾಡುಗೋಡಿಯಂತಹ ಪ್ರದೇಶಗಳಿಗೆ ಪ್ರಯಾಣಿಸುವ ಅನೇಕ ಪ್ರಯಾಣಿಕರಿಗೆ, ಜೊತೆಗೆ ವಿಶೇಷವಾಗಿ ಐಟಿ ವೃತ್ತಿಪರರಿಗೆ ರೈಲು ಸಂಪರ್ಕದಿಂದ ತುಂಬಾ ಅನುಕೂಲವಾಗಲಿದೆ.

ನೇರಳೆ ಮಾರ್ಗ ವಿಸ್ತರಣೆಯಾದ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ವಿಭಾಗದ ಮೆಟ್ರೋ ಕಾಮಗಾರಿ  ಡಿಸೆಂಬರ್ 2020 ಕ್ಕೆ ಪೂರ್ಣಗೊಳಿಸುವ ಗುರಿ ಇತ್ತು. ಆದರೆ ಅನೇಕ ಕಾರಣಗಳಿಂದಾಗಿ ವಿಳಂಬವಾಯಿತು. 

ಇನ್ನು ಇದೇ ವೇಳೆ ನಾಗಸಂದ್ರ-ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ಗ್ರೀನ್ ಲೈನ್ (ನಾಗಸಂದ್ರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್) ವಿಸ್ತರಣೆಯನ್ನು ನವೆಂಬರ್ 2023 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪರ್ವೇಜ್ ಹೇಳಿದ್ದಾರೆ.  ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ (RV ರಸ್ತೆ-ಬೊಮ್ಮಸಂದ್ರ) ಡಿಸೆಂಬರ್ 2023 ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಈ 19-ಕಿಮೀ ಎತ್ತರದ ಹಳದಿ ಮಾರ್ಗವು ಸಾವಿರಾರು ಪ್ರಯಾಣಿಕರಿಗೆ,  ವಿಶೇಷವಾಗಿ ಐಟಿ  ವೃತ್ತಿಪರರಿಗೆ ಗಮನಾರ್ಹ ಪ್ರಯೋಜನವಾಗಲಿದೆ ಎಂದಿದ್ದಾರೆ.

ಚೀನಾದ ಸಿಆರ್‌ಸಿಸಿಯಿಂದ ಮೊದಲ ಎರಡು ಸೆಟ್‌ಗಳ ಆರು ಬೋಗಿಗಳ ರೈಲುಗಳು ಆಗಸ್ಟ್ 2023 ರ ಅಂತ್ಯದ ವೇಳೆಗೆ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ. ರೈಲುಗಳ ಪರೀಕ್ಷೆಯು ಸುಮಾರು ಎರಡು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಪರೀಕ್ಷಾ ಅವಧಿಯಲ್ಲಿ ಹೆಚ್ಚುವರಿ ರೈಲು ಸೆಟ್‌ಗಳೂ ಆಗಮಿಸಲಿವೆ ಎಂದಿದ್ದಾರೆ.

Latest Videos
Follow Us:
Download App:
  • android
  • ios