ಫ್ರಾಂಕ್ ಮಾಡಿ ಮಜಾ ನೋಡುವ ಹಲವು ವೀಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ನೋಡುತ್ತಿರಬಹುದು. ಅಪರಿಚಿತರಿಗೆ ಮಾಡುವ ಈ ರೆಕಾರ್ಡಿಂಗ್ ಫ್ರ್ಯಾಂಕ್‌ಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಲ್ಲದೇ ಕಚಗುಳಿ ಇಡುತ್ತವೆ.
ಫ್ರಾಂಕ್ ಮಾಡಿ ಮಜಾ ನೋಡುವ ಹಲವು ವೀಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ನೋಡುತ್ತಿರಬಹುದು. ಅಪರಿಚಿತರಿಗೆ ಮಾಡುವ ಈ ರೆಕಾರ್ಡಿಂಗ್ ಫ್ರ್ಯಾಂಕ್‌ಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಲ್ಲದೇ ಕಚಗುಳಿ ಇಡುತ್ತವೆ. ಅಪರಿಚಿತರು ಇದು ಫ್ರ್ಯಾಂಕ್ ಎಂಬುದನ್ನು ತಿಳಿಯದೇ ಗಾಬರಿಯಾಗುವ ನಂತರ ಅದು ತಮಾಷೆಗಾಗಿ ಮಾಡಿದ್ದು ಎಂದು ತಿಳಿದು ಖುಷಿ ಪಡುವ ವೀಡಿಯೋಗಳು ನೋಡುಗರಿಗೂ ಸಖತ್ ಮಜಾ ನೀಡುತ್ತವೆ. ನೀವು ಸಾಮಾಜಿಕ ಜಾಲತಾಣ ಬಳಕೆದಾರರಾಗಿದ್ದರೆ ಅಲ್ಲಿ ಇಂತಹ ಸಾವಿರಾರು ವೀಡಿಯೋಗಳನ್ನು ನೀವು ನೋಡಬಹುದು. ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಈ ವೀಡಿಯೋಗಳು ನಿಮ್ಮನ್ನು ನಗಿಸಿ ಮನದಲ್ಲಿ ಮೂಡಿದ ದುಗುಡಗಳನ್ನೆಲ್ಲಾ ದೂರ ಮಾಡುತ್ತವೆ.
ಅದೇ ರೀತಿ ಇಲ್ಲೊಂದು ವೀಡಿಯೋ ಇದೆ. ಮೆಟ್ರೋ ರೈಲ್ಲೊಂದರಲ್ಲಿ ಮಾಡಿದ ವೀಡಿಯೋ ಇದಾಗಿದ್ದು, ಯುವಕನೋರ್ವ ಮೆಟ್ರೋ ರೈಲಿನ ಕೋಚಿನಲ್ಲಿ ಬಾಗಿಲಿನ ಪಕ್ಕದ ಜಾಗದಲ್ಲಿ ಸೀಟು ಇಲ್ಲದಿದ್ದರೂ ಸೀಟು ಇರುವಂತೆ ಕುಳಿತುಕೊಂಡಿರುತ್ತಾನೆ. ನಿಮಿಷಗಳ ಕಾಲ ಕುಳಿತ ಈತ ಮುಂದಿನ ಮೆಟ್ರೋ ಸ್ಟೇಷನ್ ಬರುತ್ತಿದ್ದಂತೆ ಅಲ್ಲಿಂದ ಎದ್ದು ಮುಂದೆ ಸಾಗಿದ್ದಾನೆ. ಇದೇ ವೇಳೆ ಆ ಮೆಟ್ರೋ ರೈಲಿನಲ್ಲಿ ಇನ್ನು ಅನೇಕ ಪ್ರಯಾಣಿಕರಿದ್ದು, ಈ ಹುಡುಗ ಕುಳಿತಂತೆ ಮಾಡಿದ ಸ್ಥಳದ ಪಕ್ಕದಲ್ಲೇ ಒಬ್ಬಳು ಹುಡುಗಿ ಮೊಬೈಲ್ ಒತ್ತುತ್ತಾ ನಿಂತಿದ್ದು, ಈತ ಎದ್ದು ಹೋಗಿದ್ದೆ ತಡ ಆಕೆ ಆ ಸ್ಥಳದಲ್ಲಿ ಹೋಗಿ ಕುಳಿತುಕೊಳ್ಳಲು ನೋಡಿದ್ದಾಳೆ. ಆದರೆ ಅಲ್ಲಿ ಸೀಟೆ ಇರಲಿಲ್ಲ, ಇದರಿಂದ ಯುವತಿ ಕ್ಷಣಕಾಲ ಅಚ್ಚರಿಯಿಂದ ನೋಡಿ ಸುಮ್ಮನಾಗಿದ್ದಾಳೆ. ಜೊತೆಗೆ ಬರುತ್ತಿದ್ದ ನಗುವನ್ನು ಆಕೆ ಕಂಟ್ರೋ ಮಾಡಿಕೊಂಡಿದ್ದಾಳೆ.
ಮೋದಿ ಹೇಳಿದ ‘ಆತ್ಮಹತ್ಯೆ ಜೋಕಿಗೆ’ ರಾಹುಲ್, ಪ್ರಿಯಾಂಕಾ ಕಿಡಿ
ಪುಣ್ಯಕ್ಕೆ ಈ ಹುಡುಗಿ ಸೀಟನ್ನು ನೋಡಿದ ಬಳಿಕ ಕುಳಿತುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಹುಡುಗ ಕುಳಿತಿದ್ದಿದ್ದನ್ನು ನಂಬಿ ಮೊಬೈಲ್ ನೋಡುತ್ತಿದ್ದ ಈ ಹುಡುಗಿ ಒಂದು ವೇಳೆ ಅಲ್ಲಿ ಸೀಟಿದೆ ಎಂದು ಭಾವಿಸಿ ಸೀದಾ ಹೋಗಿ ಕುಳಿತಿದ್ದರೆ ಆಕೆ ಕೆಳಗೆ ಮುಗ್ಗರಿಸುತ್ತಿದ್ದಿದ್ದಂತು ಪಕ್ಕಾ, ವೈರಲ್ ಭಯಾನಿ ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಎಲ್ಲರನ್ನು ನಕ್ಕು ನಗಿಸುತ್ತಿದೆ. ವೀಡಿಯೋ ನೋಡಿದ ಅನೇಕರು ಇದಕ್ಕೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಹುಡುಗ ಸೀಟನ್ನು ಜೊತೆಯಲ್ಲೇ ತೆಗೆದುಕೊಂಡು ಹೋದನಾ ಹೇಗೆ ಎಂದು ಹುಡುಗಿ ಯೋಚಿಸುತ್ತಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪುಣ್ಯ ಆಕೆ ಕುಳಿತುಕೊಳ್ಳುವ ಮೊದಲು ನೋಡಿದ್ದಕ್ಕೆ ಬಚಾವಾದಳು ಇಲ್ಲದಿದ್ದರೆ ಕತೆ ಬೇರಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತನ ಬಳಿ ಪೋರ್ಟೆಬಲ್ ಮ್ಯಾಜಿಕಲ್ ಸೀಟ್ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ತುಂಬಾ ತಮಾಷೆಯಾಗಿದೆ ನಗು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಇದು ಯಾವ ಮೆಟ್ರೋದಲ್ಲಿ ನಡೆದ ಘಟನೆ ಎಂಬ ಬಗ್ಗೆ ಯಾವುದೇ ವಿವರ ಈ ವೀಡಿಯೋದಲ್ಲಿ ಇಲ್ಲ,
Trending Video: ತಮಾಷೆಗೆ ಮಾಡಿದ ವಿಡಿಯೋ ವಿವಾದ ಹೊತ್ತು ತಂತು!