ಭಾರತದ ನರ್ಸ್‌ಗಳಿಗೆ ಜಪಾನ್‌, ಯುರೋಪ್‌, ಮಧ್ಯಪ್ರಾಚ್ಯ ಸೇರಿ ಪ್ರಪಂಚದಾದ್ಯಂತ ಬೇಡಿಕೆಯಿದೆ. ವೃತ್ತಿಗೆ ಗೌರವವಿದೆ, ಗಾಜುಗಣ್ಣಿನ ಶಾಸಕ ಗಣೇಶ್‌ ಪ್ರಸಾದ್‌ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಗುಂಡ್ಲುಪೇಟೆ (ಏ.13): ಭಾರತದ ನರ್ಸ್‌ಗಳಿಗೆ ಜಪಾನ್‌, ಯುರೋಪ್‌, ಮಧ್ಯಪ್ರಾಚ್ಯ ಸೇರಿ ಪ್ರಪಂಚದಾದ್ಯಂತ ಬೇಡಿಕೆಯಿದೆ. ವೃತ್ತಿಗೆ ಗೌರವವಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ತಾಲೂಕಿನ ಗರಗನಹಳ್ಳಿ ಬಳಿಯ ಸಂತ ಮಾಥಾ ನರ್ಸಿಂಗ್‌ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಹಾಗೂ ನೂತನ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದರು.

Add Asianetnews Kannada as a Preferred SourcegooglePreferred

ನರ್ಸಿಂಗ್‌ ವೃತ್ತಿಗೆ ವಿದೇಶಗಳಲ್ಲೂ ಬೇಡಿಕೆಯಿದೆ ಜೊತೆಗೆ ಭಾವನಾತ್ಮಕ, ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಮುಂದೆ ಭವಿಷ್ಯವಿದೆ ಎಂದು ಪ್ರತಿಪಾದಿಸಿದರು. ನರ್ಸ್‌ ಸೇವೆಯೇ ಅತ್ಯಮೂಲ್ಯ ಸೇವೆ. ರೋಗಳಿಗೆ ಸಮಸ್ಯೆಗೆ ವೈದ್ಯರು ಅರ್ಧದಷ್ಟು ಸಮಸ್ಯೆ ಬಗೆಹರಿಸಿದರೆ ನರ್ಸ್‌ಗಳೂ ಕೂಡ ಅರ್ಧದಷ್ಟು ಸಮಸ್ಯೆ ಬಗೆಹರಿಸುತ್ತಿದ್ದಾರೆ.

ಭಾರತ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಜನತೆಯ ಜೀವತಾವಧಿ 35 ಎಂದು ಪರಿಗಣಿಸಲಾಗಿತ್ತು. ಆರೋಗ್ಯ ಕ್ಷೇತ್ರದಲ್ಲಿ ಬದಲಾದ ತಂತ್ರಜ್ಞಾನ ಇತ್ಯಾದಿ ಪ್ರಯೋಗಿಕ ವಲಯಗಳಲಿ ಇದೀಗ ಜನತೆಯ ಜೀವಿತಾವಧಿ ದ್ವಿಗುಣವಾಗಿದೆ ಎಂದು ಹೇಳಲಾಗುತ್ತಿದೆ ಎಂದರು. ಸಂತ ಮಾಥ ನರ್ಸಿಂಗ್‌ ಕಾಲೇಜು ಯಶಸ್ವಿಯಾಗಿ 2 ವರ್ಷ ಪೂರೈಸಿದೆ. ಮೊದಲನೇ ಬ್ಯಾಚ್‌ನ ಪದವಿ ಪಡೆದ ನರ್ಸಿಂಗ್‌ ವಿದ್ಯಾರ್ಥಿಗಳನ್ನು ಆರೋಗ್ಯ ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಲಸ್ಸೇರಿ ಆರ್ಚ್‌ ಬೀಷಪ್‌ ಮಾರ್‌ ಜೋಸೆಫ್‌ ಪಾಂಪ್ಲಾನಿ ಮಾತನಾಡಿದರು. ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ ರಿಜಿಸ್ಟ್ರಾರ್‌ ಶ್ರೀಕಾಂತ್‌ ಫುಲಾರಿ ಘಟಿಕೋತ್ಸವದಲ್ಲಿ ನರ್ಸಿಂಗ್‌ ಪದವಿ ಪಡೆದವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಂಶುಪಾಲ ಆರ್‌.ಎಸ್. ಸಂತೋಷ್‌ ಕುಮಾರ್‌ ಕಾಲೇಜು ವಾರ್ಷಿಕ ವರದಿ ಮಂಡಿಸಿದರು.

ಸಮಾರಂಭದಲ್ಲಿ ಕಣ್ಣೂರು ಜಿಲ್ಲೆಯ ಇರಿಕ್ಕೂರು ಶಾಸಕ, ವಕೀಲ ಸಜೀವ್‌ ಜೋಸೆಫ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ್ಯಾಧಿಕಾರಿ ಎಸ್. ಚಿದಂಬರ, ಗುಂಡ್ಲುಪೇಟೆ ಕ್ರೈಸ್ಟ್‌ ಸಿಎಂಐ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲ ರಿತಿಯಾ ಪುರಿಯಾಂಬಿಲ್‌, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್. ಶಿವನಾಗಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮಂಚಹಳ್ಳಿ ಲೋಕೇಶ್‌, ಮುಖಂಡರಾದ ಸಿದ್ದಪ್ಪ, ಹರೀಶ್‌, ಸಂತೋಷ್‌, ಕ್ರೈಸ್ತ ಸಮಾಜದ ಬೈಜು ಸೇರಿದಂತೆ ಸಂತ ಮಾಥ ನರ್ಸಿಂಗ್‌ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೋಷಕರು ಇದ್ದರು.

‘ಗಾಜುಗಣ್ಣಿನ ಶಾಸಕ ಗಣೇಶ್‌ ಪ್ರಸಾದ್‌’

ನಾನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಸೂಚನೆ ಮೇರೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಗುಂಡ್ಲುಪೇಟೆ ಶಾಸಕ ನನಗೆ ಆತ್ಮೀಯ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಲಿಗಣ್ಣಿನ ಶಾಸಕ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ರ ಬಗ್ಗೆ ಹೇಳಿದ ಮಾತು.

ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಪವರ್‌ಫುಲ್‌, ಮುಖ್ಯಮಂತ್ರಿಗೆ ಆತ್ಮೀಯ ಗಣೇಶ್‌ ಪ್ರಸಾದ ಹೇಳಿದ ಕೆಲಸಗಳಿಗೆಲ್ಲ ಹಿಂದೆ ಮುಂದೆ ನೋಡದೆ ಮಂಜೂರು ಮಾಡುತ್ತಿದ್ದಾರೆ. ಒಳ್ಳೆ ಶಾಸಕ ಸಿಕ್ಕಿದ್ದಾರೆ ಬಳಸಿಕೊಂಡು ಒಳ್ಳೆ ಕೆಲಸ ಮಾಡಿ ಎಂದರು. ನರ್ಸಿಂಗ್‌ ವೃತ್ತಿ ದೊಡ್ಡ ಪವಿತ್ರ ಕ್ಷೇತ್ರವಾಗಿದ್ದು, ಪದವಿ ಪಡೆದವರಿಗೆ ಮುಂದೆ ಭವಿಷ್ಯವಿದೆ. ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಎಂದು ಶಾಸಕ ಗಣೇಶ್ ಪ್ರಸಾದ್‌ ಸಲಹೆ ನೀಡಿದರು.