Asianet Suvarna News Asianet Suvarna News

ಧಾರವಾಡದ ಅಂಬೋಳ್ಳಿ ಗ್ರಾಮದಲ್ಲಿ ರಸ್ತೆಯಿಲ್ಲದೇ ಶಾಲಾ ಮಕ್ಕಳ ಪರದಾಟ!

ಜಿಲ್ಲೆಯ ಅಳ್ಳಾವರ ತಾಲೂಕಿನ ಅಂಬೋಳ್ಳಿ ಗ್ರಾಮಕ್ಕೆ ಸಂಬಂಧಿಸಿದ ಅವರಾದಿ ದಡ್ಡಿ ಎಂಬ ಪುಟ್ಟ ಗ್ರಾಮಕ್ಕೆ ಈಗ ರಸ್ತೆಯಿಲ್ಲದೆ  ಪರಿಸ್ಥಿತಿ ಎದುರಾಗಿದೆ. ಅದು ಖಾಸಗಿ ಜಮೀನಿನ ಮಾಲೀಕನು ಆತನ ಹೊಲದಲ್ಲಿ ರಸ್ತೆ ಬಂದ್ ಮಾಡಿದಕ್ಕೆ ಮಕ್ಕಳಿಗೆ ಶಾಲೆಗೆ ಹೋಗಲು ಸಹ ಪರದಾಡುವಂತಾಗಿದೆ.

Dharwads Amboli village without a road for school childrens gvd
Author
First Published Aug 21, 2024, 1:28 PM IST | Last Updated Aug 21, 2024, 1:28 PM IST

ವರದಿ: ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಆ.21): ಜಿಲ್ಲೆಯ ಅಳ್ಳಾವರ ತಾಲೂಕಿನ ಅಂಬೋಳ್ಳಿ ಗ್ರಾಮಕ್ಕೆ ಸಂಬಂಧಿಸಿದ ಅವರಾದಿ ದಡ್ಡಿ ಎಂಬ ಪುಟ್ಟ ಗ್ರಾಮಕ್ಕೆ ಈಗ ರಸ್ತೆಯಿಲ್ಲದೆ  ಪರಿಸ್ಥಿತಿ ಎದುರಾಗಿದೆ. ಅದು ಖಾಸಗಿ ಜಮೀನಿನ ಮಾಲೀಕನು ಆತನ ಹೊಲದಲ್ಲಿ ರಸ್ತೆ ಬಂದ್ ಮಾಡಿದಕ್ಕೆ ಮಕ್ಕಳಿಗೆ ಶಾಲೆಗೆ ಹೋಗಲು ಸಹ ಪರದಾಡುವಂತಾಗಿದೆ. ಸುಮಾರು ಎಪ್ಪತ್ತು ವರ್ಷಗಳಿಂದ ಇದೆ ದಾರಿಯಿಂದ ನಡೆದು ಜೀವನ ನಡೆಸುತ್ತಿದ್ದ ಕುಟುಂಬಗಳಿಗೆ ದೇವದಾಸ ಗಾಂವಕರ ಎಂಬುವರು ಇದೀಗ ಕಂಠಕವಾಗಿದ್ದಾರೆ ಸುಮಾರು ಎಂಟು ವರ್ಷಗಳ ಹಿಂದೆ ಜಮೀನನ್ನು ಖರೀದಿ ಮಾಡಿದ್ದ ದೇವದಾಸ ಗಾಂವಕರ ಇಲ್ಲಿನ ಕುಟುಂಬಗಳಿಗೆ ದಾರಿ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು. 

ಅದರಂತೆ ಇಲ್ಲಿಯವರೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರು ಆದರೆ ಈಗ ನಡೆದಾಡಲು ದಾರಿ ಕೊಡುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ದಾರಿ ಇಲ್ಲದೆ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ವಯಸ್ಸಾದವರಿಗೆ ಚಿಕಿತ್ಸೆ ಸಿಗುತ್ತಿಲ್ಲ ವೃದ್ಧರು ಜೀವನ್ಮರದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಷ್ಟಾದರೂ ಕನಿಕರ ತೋರದ ದೇವದಾಸ ಗಾಂವಕರ ಎಂಬುವ ಜಮೀನಿನ ಮಾಲೀಕ ದರ್ಪ ತೋರಿ ಇಡೀ ಗ್ರಾಮಕ್ಕೆ ಬೇಲಿ ಹಾಕಿ ಸಂಚಕಾರ ತಂದಿದ್ದಾನೆ. ನಮಗೆ ದಾರಿ ಕೊಡಿ ಎಂದು ಅವರಾದಿ ದಡ್ಡಿ ಗ್ರಾಮಸ್ಥರು ದೇವದಾಸ ಗಾಂವಕರ ಅವರಿಗೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. 

ಅದಕ್ಕೆ ಆತ ಕ್ಯಾರೆ ಎನ್ನದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಅದನ್ನು ಸಹಿಸದ ದೇವದಾಸ ಗಾಂವಕರ ಗ್ರಾಮಸ್ಥರ ಮೇಲೆಯೇ ಅಳ್ಳಾವರ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದಾನೆ. ಸಚಿವ ಶಾಸಕ ಸಂತೋಷ್‌ ಲಾಡ್ ನನಗೆ ಚೆನ್ನಾಗಿ ಗೊತ್ತು. ಅವರ ಬೆಂಬಲ ನನಗಿದೆ ಎಂದು ಹೇಳಿ ಇಡೀ ಗ್ರಾಮಸ್ಥರ ಮೇಲೆಯೇ ದೌರ್ಜನ್ಯ ಎಸಗಿದ್ದಾನೆ. ಉಳ್ಳವರ ಬೆಂಬಲ ತನಗಿದೆ ಎಂದು ಗ್ರಾಮಸ್ಥರನ್ನ ಬೇಲಿ ಹಾಕಿ ಬಂಧಿಸುವುದು ಯಾವ ನ್ಯಾಯ. ಸಂಬಂಧ ಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಸಿ ಕೂಡಲೇ ದೇವದಾಸ ಗಾಂವಕರನ ವಿರುದ್ಧ ಕ್ರಮ ಕೈಗೊಳ್ಳ ಬೇಕು.

ಇದು ಕೊಲೆ ಆರೋಪಿ ದರ್ಶನ್ ಕೈ ಕಡಗದ ರಹಸ್ಯ: ನಾಲ್ಕು ದಶಕದಿಂದ ಕೈಯಿಂದ ಕಳಚಿರಲಿಲ್ಲ ಈ ಕಡಗ!

ಆ ಗ್ರಾಮಕ್ಕೆ ಇರೋ ದಾರಿಯನ್ನ ಮತ್ತೆ ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕಿ ಎಂದು ಅಂಬೋಳ್ಳಿ ಗ್ರಾಮದ ಆಗ್ರಹವಾಗಿದೆ. ಒಟ್ಟಿನಲ್ಲಿ ಮಾನವೀಯತೆ ಮನುಷ್ಯನ ಗುಣದಲ್ಲಿದ್ದರೆ ಮಾತ್ರ ಜಗತ್ತು ಉದ್ದಾರ ಆಗುತ್ತೆ ಅನ್ನೋ ಮಾತು ಇಲ್ಲಿ ಯಾವುದು ಕಂಡು ಬರುತ್ತಿಲ್ಲ ಈ ವರದಿಯನ್ನ ನೋಡಿ ಎಚ್ಚೆತ್ತುಕ್ಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಗಮನ ಹರಿಸಿ ಈ ಗ್ರಾಮಕ್ಕೆ ರಸ್ತೆಯನ್ನು ಅನೂಕೂಲ ಮಾಡಿಕೊಡಲು ಮುಂದಾಗ್ತಾರಾ ಎಂಬುದನ್ನ ಕಾಯ್ದು ನೋಡಬೇಕು.

Latest Videos
Follow Us:
Download App:
  • android
  • ios