Dharwad: ಆತಂಕ ಹೆಚ್ಚಿಸಿದ ಬೃಹತ್ ಸೇತುವೆ: ಯಮನೂರಿನ ಬಳಿ ಕಾದು ಕುಳಿತಿರುವ ಯಮ!
ಹುಬ್ಬಳ್ಳಿ, ವಿಜಯಪುರ ರಾಷ್ಟ್ರೀಯ ಹೆದ್ದಾರಿ ನಂಬರ್ 218, ಈ ರಾಷ್ಟ್ರೀಯ ಹೆದ್ದಾರಿ ಎಂದಾಕ್ಷಣ ನವಲಗುಂದ ಭಾಗದ ಜನರು ತಬ್ಬಿಬ್ಬಾಗಿ ಬಿಡುತ್ತಾರೆ. ಕಾರಣ ಈ ರಸ್ತೆಯಲ್ಲಿ ಅಷ್ಟು ಪ್ರಾಣ ಪಕ್ಷಿಗಳು ಹಾರಿ ಹೋಗಿವೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ನ.23): ಹುಬ್ಬಳ್ಳಿ, ವಿಜಯಪುರ ರಾಷ್ಟ್ರೀಯ ಹೆದ್ದಾರಿ ನಂಬರ್ 218, ಈ ರಾಷ್ಟ್ರೀಯ ಹೆದ್ದಾರಿ ಎಂದಾಕ್ಷಣ ನವಲಗುಂದ ಭಾಗದ ಜನರು ತಬ್ಬಿಬ್ಬಾಗಿ ಬಿಡುತ್ತಾರೆ. ಕಾರಣ ಈ ರಸ್ತೆಯಲ್ಲಿ ಅಷ್ಟು ಪ್ರಾಣ ಪಕ್ಷಿಗಳು ಹಾರಿ ಹೋಗಿವೆ. ಇಂತಹ ಹೆದ್ದಾರಿಯಲ್ಲಿ ಸಂಚರಿಸುವ ಸವಾರರು ಈಗ ಇನ್ನೊಂದು ಆತಂಕವನ್ನು ಎದುರಿಸುತ್ತಿದ್ದಾರೆ ಅದು ಸೇತುವೆಯ ದುಸ್ಥಿತಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಹಾದು ಹೋಗುವ ಈ ಹೆದ್ದಾರಿಯೂ ಬೆಣ್ಣೆಹಳ್ಳದ ಮೇಲೆ ಪಾಸಾಗುತ್ತೆ. ಇದಕ್ಕಾಗಿ ಬೃಹತ್ ಸೇತುವೆಯನ್ನು ಸಹ ನಿರ್ಮಾಣ ಮಾಡಲಾಗಿದೆ.
ಆದರೆ ಈ ಸೇತುವೆಯ ನಿರ್ವಹಣೆ ಮಾತ್ರ ಇಲಾಖೆ ನಿರ್ಲಕ್ಷಿಸಿದೆ ಎಂದರು ತಪ್ಪಿಲ್ಲ. ಕಾರಣ ಸೇತುವೆಯ ತಡೆಗೋಡೆ ಬಿದ್ದು ವರ್ಷವೆ ಆಗುತ್ತಾ ಬಂದರೂ ದುರಸ್ಥಿ ಮಾಡದೇ ಇರುವಂತದ್ದು. ಅಷ್ಟೇ ಅಲ್ಲದೆ ಸೇತುವೆಯ ರಸ್ತೆ ಮೇಲೆ ದೊಡ್ಡ ದೊಡ್ಡ ತಗ್ಗುಗಳು ಸಹ ಬಿದ್ದಿವೆ. ಇದರಿಂದ ಅಪಘಾತ ಕಟ್ಟಿಟ್ಟ ಬುತ್ತಿ ಎಂಬ ಮಾತುಗಳು ಸಾರ್ವಜನಿಕ ಆತಂಕ ವ್ಯಕ್ತಪಡಿಸಿದ್ದಾರೆ. ಬೃಹತ್ ಗಾತ್ರದ ವಾಹನಗಳು ಒಮ್ಮೆ ಸೇತುವೆ ಮೇಲೆ ಬಂದ್ರೆ ಇಡೀ ಸೇತುವೆ ಕಂಪಿಸುತ್ತೆ, ಈ ಬಗ್ಗೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.
ಹುಬ್ಬಳ್ಳಿ: ತಗಡಿನ ಶೆಡ್‌ನಲ್ಲಿಯೇ ಶತಮಾನದ ಶಾಲೆ..!
ಬಹುತೇಕ ಗ್ರಾಮಗಳಲ್ಲಿ ರಸ್ತೆ ರಸ್ತೆ ತಿರುವು, ಅಪಘಾತ ವಲಯ, ಹಂಪ್ಸ್ ಸೇರಿದಂತೆ ಯಾವುದರ ಕುರಿತೂ ಬಹುತೇಕ ಕಡೆ ಮಾರ್ಗಸೂಚಿ ಫಲಕ ಅಳವಡಿಸಿಲ್ಲ. ಅಭಿವೃದ್ಧಿ ಕಾಮಗಾರಿಗಾಗಿ ಗುಂಡಿಗಳನ್ನು ತೋಡಿರುವುದು ಅವೈಜ್ಞಾನಿಕ ರಸ್ತೆ ವಿಭಜಕಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ ಆದರೂ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಕಷ್ಟು ಅಪಘಾತಗಳು ನಡೆದು ಸಾವು ನೋವು ಅನುಭವಿಸಿದವರ ಲೆಕ್ಕ ಇಲ್ಲದಂತಾಗಿದೆ. ಇಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಅವಘಡ ನಡೆಯುತ್ತಲೇ ಇರುತ್ತವೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇತ್ತ ಕಡೆ ಕಾಳಜಿ ವಹಿಸದೇ ಇದ್ದರೆ ಹೋರಾಟ ಅನಿವಾರ್ಯ ಎನ್ನುತ್ತಾರೆ ಸ್ಥಳೀಯರು.
ಸಾಧನೆಯ ಶ್ರೇಯಾಂಕ ಆಧರಿಸಿ ವಿವಿಧ ಠಾಣೆಗಳಿಗೆ ಪ್ರಶಸ್ತಿ ವಿತರಿಸಿದ Dharwad ಜಿಲ್ಲಾ ಪೊಲೀಸ್ ಇಲಾಖೆ
ಸರ್ವೀಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವಲ್ಲಿ ಸೂಚನಾ ಫಲಕ ಇಲ್ಲದಿರುವುದು, ಅವೈಜ್ಞಾನಿಕ ಮೇಲ್ಸೇತುವೆ, ತಿರುವು, ಹಂಪ್ಸ್‌ಗಳಲ್ಲಿ ಚಾಲಕರು ವೇಗವಾಗಿ ವಾಹನ ಚಲಾಯಿಸುವುದು, ಕೆರೆ ಕಟ್ಟೆಗಳಿಗೆ ತಡೆಗೋಡೆಗಳೇ ಇಲ್ಲದಿರುವುದು ಒಳಗೊಂಡಂತೆ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ ಎನ್ನುವುದು ಅಂಕಿ–ಅಂಶಗಳಿಂದ ದಾಖಲಾಗುತ್ತಿದೆ.