Asianet Suvarna News Asianet Suvarna News

Dharwad: ಗರಗ ಮಡಿವಾಳೇಶ್ವರ ಕಲ್ಮಠದ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

ಧಾರವಾಡ ತಾಲೂಕಿನ ಐತಿಹಾಸಿಕ ಗರಗ ಮಡಿವಾಳೇಶ್ವರ ಕಲ್ಮಠದ ಶ್ರೀ ಮ.ನಿ.ಪ್ರ.ಚನ್ನಬಸವ ಸ್ವಾಮೀಜಿ ಭಾನುವಾರ ಬೆಳಗಿನ ಜಾವ ಲಿಂಜನಗೈಕ್ಯರಾಗಿದ್ದಾರೆ. 

Dharwad Garaga Madivaleswara Kalmata Channabasava swamiji no more Sat
Author
First Published Feb 12, 2023, 6:09 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ  (ಫೆ.12):  ಧಾರವಾಡ ತಾಲೂಕಿನ ಐತಿಹಾಸಿಕ ಗರಗ ಮಡಿವಾಳೇಶ್ವರ ಕಲ್ಮಠದ ಶ್ರೀ ಮ.ನಿ.ಪ್ರ.ಚನ್ನಬಸವ ಸ್ವಾಮೀಜಿ ಭಾನುವಾರ ಬೆಳಗಿನ ಜಾವ ಲಿಂಜನಗೈಕ್ಯರಾಗಿದ್ದಾರೆ. 

ಸ್ವಾಮೀಜಿಗಳಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಸ್ವಾಮೀಜಿಗಳು ವಯೋಸಹಜ ಕಾಯಿಲೆಯಿಂದ  ಬಳಲುತ್ತಿದ್ದರು ಪೂಜ್ಯರ ಅಂತ್ಯಕ್ರಿಯೆ ನಾಳೆ ಸೋಮವಾರ ಬೆಳಿಗ್ಗೆ 12 ಗಂಟೆಗೆ ಗರಗ ಗ್ರಾಮದ ಶ್ರೀಮಠದ ಆವರಣದಲ್ಲಿ ನಡೆಯಲಿದೆ. ಈ ಅಂತ್ಯಕ್ರಿಯೆಗೆ ನಾಡಿನ ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಕಲ್ಮಠದ ಜವಾಬ್ದಾರಿ ಹೊತ್ತುಕೊಂಡಿದ್ದ ಚನ್ನಬಸವ ಸ್ವಾಮೀಜಿಗಳು ಮಠದ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ್ದರು. ಅಲ್ಲದೇ ಅನ್ನದಾನ ಹಾಗೂ ವಿದ್ಯಾದಾನಕ್ಕೆ ಒತ್ತುಕೊಟ್ಟು ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡಿದ್ದರು. ಶ್ರೀಗಳ ಅಗಲಿಕೆಯಿಂದ ಗರಗ-ಹಂಗರಕಿ ಸೇರಿದಂತೆ ಇಡೀ ಧಾರವಾಡ ಜಿಲ್ಲೆಯ ಭಕ್ತಗಣ ಶೋಕಸಾಗರದಲ್ಲಿ ಮುಳುಗುವಂತಾಗಿದೆ.

Valmiki Fair: ಸ್ವಾಮೀಜಿಗಳು ದಲಿತರ ಮೇಲೆ ಕಾಲಿಡುವುದನ್ನು ನಿಲ್ಲಿಸಬೇಕು: ಸಿರಿಗೆರೆ ಶ್ರೀಗಳ ಸಂದೇಶ

ಸಾವರ್ಜನಿಕ ದರ್ಶನಕ್ಕೆ ಅವಕಾಶ: ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹಾಗೂ ಶ್ರೀಮಠದ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ, ದಯಾನಂದ ಪಾಟೀಲ ಮತ್ತು ಗರಗ-ಹಂಗರಕಿ ಗ್ರಾಮದ ಸದ್ಭಕ್ತರ ನೇತ್ರತ್ವದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂದು ಮಧ್ಯಾಹ್ನ ಎರಡು ಘಂಟೆಯಿಂದ ನಾಳೆ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಎಲ್ಲ ಭಕ್ತರಿಗೆ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ನಾಳೆ ಬೃಹತ್ ಮೆರವಣಿಗೆ ಮಾಡಿ ಸೋಮವಾರ ಬೆಳಗ್ಗೆ 7.30ಕ್ಕೆ ಶ್ರೀಗಳ ಅಂತಿಮಯಾತ್ರೆಯ ಮೆರವಣಿಗೆ ಹಂಗರಕಿ ಗ್ರಾಮದಿಂದ ಹೊರಟು, ಗರಗ ಗ್ರಾಮದಲ್ಲಿ ಸಂಚರಿಸಲಿದೆ. ನಂತರ ಶ್ರೀಮಠದ ಆವರಣದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಜರುಗಲಿದೆ.

ಗರಗ-ಹಂಗರಕಿ ಗ್ರಾಮದ ಸದ್ಭಕ್ತರು ಗುರು-ಹಿರಿಯರು ಹಾಗೂ ಮಠಾಧೀಶರು ಶ್ರೀಗಳ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯ ಉಸ್ತುವಾರಿ ವಹಿಸಿದ್ದಾರೆ.
 

Follow Us:
Download App:
  • android
  • ios