Asianet Suvarna News Asianet Suvarna News

Valmiki Fair: ಸ್ವಾಮೀಜಿಗಳು ದಲಿತರ ಮೇಲೆ ಕಾಲಿಡುವುದನ್ನು ನಿಲ್ಲಿಸಬೇಕು: ಸಿರಿಗೆರೆ ಶ್ರೀಗಳ ಸಂದೇಶ

ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ
ಮೇಲ್ವರ್ಗದ ಸ್ವಾಮೀಜಿಗಳು ದಲಿತ ವರ್ಗದ ಸ್ವಾಮಿಜೀಗಳ ತಲೆ ಮೇಲೆ ಕಾಲು ಇಡುತ್ತಾರೆ.
ಯಾರಿಗೂ ಮತ್ತೊಬ್ಬರ ತಲೆ ಮೇಲೆ ಕಾಲಿಡಲು ಅವಕಾಶ ಕಲ್ಪಿಸಬೇಡಿ

Valmiki Fair Swamiji must stop stepping on Dalits heads Sirigere swamiji message sat
Author
First Published Feb 9, 2023, 2:37 PM IST

ವರದಿ : ವರದರಾಜ್ ಏಷ್ಯಾನೆಟ್‌ ಸುವರ್ಣ ನ್ಯೂಸ್

ದಾವಣಗೆರೆ (ಫೆ.09): ಮೇಲ್ವರ್ಗದ ಶ್ರೀಗಳು ದಲಿತ ವರ್ಗದ ಸ್ವಾಮಿಜೀಗಳ ತಲೆ ಮೇಲೆ ಕಾಲು ಇಡಲು ಬರುತ್ತಾರೆ. ಆದರೆ, ಜಗತ್ತಿನಲ್ಲಿ ಯಾರಿಗೂ ಮತ್ತೊಬ್ಬರ ತಲೆ ಮೇಲೆ ಕಾಲಿಡಲು ಅವಕಾಶ ಕಲ್ಪಿಸಬೇಡಿ ಎಂದು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ದಲಿತ ಮಠಾಧೀಶರಿಗೆ ಸಂದೇಶ ರವಾನಿಸಿದರು.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಲಿತರಿಗಾಗಿಯೇ ಜಾತಿ ನಿಂದನೇ ಕಾನೂನು ಇದೆ. ಆ ಕಾನೂನು ಹೆಚ್ಚು ದುರ್ಬಳಕೆಯಾಗ್ತಿದ್ದು, ಅದ ನಾನು ಖಂಡಿಸುತ್ತೇವೆ. ಎಲ್ಲರೂ ಸಮನಾಗಿ ಬಾಳಬೇಕೆಂದು ಈ ಕಾನೂನುಗಳು ಜಾರಿ ಮಾಡಲಾಗಿದೆ. ಜಾತಿ ನಿಂದನೇ ಕಾನೂನು ದುರುಪಯೋಗ ಬಾಳವಾಗಿ ನಡೆಯುತ್ತಿದೆ. ೆಲ್ಲರೂ ಸಮಾನವಾಗಿ ಬಾಳಬೇಕು ಎಂದಾಗಿದೆ. ಆದರೆ, ಇದೀಗ ನವ ಸಮಾಜ ನಿರ್ಮಾಣ ಆಗೇಕಿದೆ. ಯಾರು ಮೇಲು ಅಲ್ಲ ಇಲ್ಲಿ ಯಾರು ಕೀಳಲ್ಲ ಎಲ್ರೂ ಒಂದೇ, ಯಾರೂ ಕೀಳಾಗಿ ಹುಟ್ಟಿಲ್ಲ, ಎಲ್ಲರೂ ಇಲ್ಲಿ ತಲೆ ಎತ್ತಿ ಬಾಳಬೇಕು, ಅಂತಹ ಸಮಾನತೆ ಬರಬೇಕಾಗಿದೆ ಎಂದು ಸಲಹೆ ನೀಡಿದರು.

Valmiki Jatre 2023: ಇಂದು, ನಾಳೆ ಅದ್ಧೂರಿ ವಾಲ್ಮೀಕಿ ರಥೋತ್ಸವ, ಸಾಮೂಹಿಕ ವಿವಾಹ

ಮೇಲ್ವರ್ಗದ ಕೆಳವರ್ಗದ ಮಠಾಧೀಶರೆಂಬ ಬೇಧ ಬೇಡ: ನಾವು ಮೇಲ್ವರ್ಗದ ಕೆಳವರ್ಗದ ಮಠಾಧೀಶರೆಂದುಕೊಳ್ಳಬಾರದು, ಎಲ್ಲಾ ಮಠಾಧೀಶರು ಒಂದೇನೆ, ಜಾತಿ ಹೆಚ್ಚಿದೆ ಅದನ್ನು ನಿವಾರಣೆ ಮಾಡಲು ಆಗಲಿಲ್ಲ, ಜಾತಿ ನಿವಾರಣೆ ಬಸವಣ್ಣನವರ ಕೂಡ ಪ್ರಯತ್ನ ಮಾಡಿದ್ರು, ಅದ್ರು ಅವರಿಂದೂಲು ಈ ಜಾತಿ ನಿವಾರಣೆ ಮಾಡಲಾಗಲಿಲ್ಲ. ಇನ್ನು ದಲಿತ ವರ್ಗದ ಮಠಾಧೀಶರು ಮೇಲ್ವರ್ಗದ ಮಠಾಧೀಶರೆಂಬ ಭಾವನೆ ಬರಕೂಡದು. ನಾವು ಬೇರೆ ಎಂದು ತಿಳಿದುಕೊಂಡರೇ ಅದು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗುತ್ತದೆ. ನಾವು ದಲಿತ ವರ್ಗದ ಮಠಾಧೀಶರು ಎಂದುಕೊಳ್ಳಬಾರದು, ಎಲ್ಲಾ ಮಠಾಧೀಶರು ಒಂದೇನೆ.  ನೀವು ದಲಿತ ವರ್ಗದ ಮಠಾಧೀಶರೆಂದುಕೊಂಡರೇ ಮೇಲ್ವರ್ಗದ ಮಠಾಧೀಶರು ತಲೆ ಮೇಲೆ ಕಾಲು ಇಡಲು ಬರ್ತಾರೇ, ನೀವು ಯಾರೀಗು ತಲೆ ಮೇಲೆ ಕಾಲಿಡಲು ಅವಕಾಶ ಕಲ್ಪಿಸಬೇಡಿ ಎಲ್ಲಾ ಸ್ಮಾಮೀಗಳು ಒಂದೆ ಅದ್ರೇ ದಲಿತ ವರ್ಗದ ಸ್ವಾಮೀ ಎಂದು ಹೇಳಬಾರದು ನಿಮ್ಮ ತಲೆ ಮೇಲೆ ಕಾಲಿಡಲು ಅವಕಾಶ ಮಾಡಿಕೊಡಬಾರದು, ನೀವು ಕೂಡ ತಲೆ ಎತ್ತಿ ಬಾಳ ಬೇಕು, ತಲೆ ತಗ್ಗಿಸಲ್ಲ ಎಂದರು.

ಹಿಂದುಳಿದವರಿಗೆ ಧಾರ್ಮಿಕ ಸಮಾನತೆ ಸಿಕ್ಕಿಲ್ಲ: ಇಡಿ ದೇಶದಲ್ಲಿ ಹಿಂದುಳಿದ ವರ್ಗದವರಿಗೆ  ಮೀಸಲಾತಿಗಾಗಿ ಹೋರಾಟ ಮಾಡಿದ್ದು ಮೈಸೂರು ಬಸವಯ್ಯ.ಒಂದು ನೂರು ವರ್ಷಗಳ ಹಿಂದೆ ಹೋರಾಟ ಮಾಡಿದ್ದರು. ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕರೆ ಸಾಲದು. ಎಲ್ಲ ಹಿಂದುಳಿದವರಿಗೆ ಧಾರ್ಮಿಕ ಸಮಾನತೆ ಸಿಗಬೇಕಾಗಿದೆ 19 ನೇ ಶತಮಾನದಲ್ಲಿ ಸರ್ವರಿಗು ಸಮಬಾಳು ಎಂದು ಎಲ್ಲಾ ವರ್ಗದವರಿಗು ಸಮಾನ ಅವಕಾಶ ನೀಡಿದ್ದು ಸಿರಿಗೆರೆ ಶಿವಕುಮಾರಸ್ವಾಮಿಗಳು ಕೈಗಾರಿಕಾ ಸ್ಥಾಪನೆಗೆ ಜಮೀನು ಪಡೆದರೇ ಆ ಭೂಮಿಯ ಶಾಶ್ವತ  ಮಾಲೀಕ ರೈತನೇ  ಆಗಬೇಕು ಎಂದು ಹೇಳಿದರು. 

ಉಜ್ಜಯಿನಿ- ತರಳಬಾಳು ಮಠಗಳ ವೈಷಮ್ಯ ಸ್ಫೋಟ: ಕೆಲ ಗ್ರಾಮಗಳಲ್ಲಿ ಕಲ್ಲು ತೂರಾಟ ಮನೆಗಳು ಜಖಂ

ಕೈಗಾರಿಕೆ ಸ್ಥಾಪನೆಗೆ ರೈತನ ಭೂಮಿ ಗೇಣಿ ಪಡೆಯಿರಿ:  ಇತ್ತಿಚೆಗೆ ಸರ್ಕಾರ ರೈತರ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ವಶಪಡಿಸಿಕೊಳ್ಳುತ್ತಿದೆ. ರೈತನಿಂದ  ಹತ್ತು ಲಕ್ಷಕ್ಕೆ ಪಡೆದು ನಂತರ ಹತ್ತು‌ ಕೋಟಿಗೆ ಕೈಗಾರಿಕಾ ಉದ್ಯಮಿಗಳು ಮಾರಾಟ ಮಾಡುತ್ತಿದ್ದಾರೆ. ಇದೇ ಕಾರಣ ಭೂಮಿ ಮಾಲೀಕ ರೈತನೇ ಆಗಿರಬೇಕು. ರೈತ ಪ್ರತಿ ವರ್ಷ ಆ ಜಮೀನಿನಲ್ಲಿ ತೆಗೆಯುವ  ಆದಾಯ ದಷ್ಟು ಹಣವನ್ನು  ರೈತನಿಗೆ ಕೈಗಾರಿಕೋದ್ಯಮಿಗಳು ‌ಕೊಡಬೇಕು. ಇಂತಹದೊಂದಿ ಕಾನೂನು ಜಾರಿಗೆ ಬರಬೇಕು ಎಂದು ಆಗ್ರಹಿಸಿದ ಸಿರಿಗೆರೆ ಶ್ರೀ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಜೆ ಪಿ‌ ನಡ್ಡಾ ಮಠಕ್ಕೆ ಬಂದಾಂಗ ಇಂತಹದೊಂದು ಪ್ರಸ್ತಾವನೆಯನ್ನು ಇಟ್ಟಿದ್ದೇನೆ. ಇಂತಹ ಕಾನೂನು ದೇಶದಲ್ಲಿ ಜಾರಿಗೆ ಬರಬೇಕೆಂದು ತರಳಬಾಳು ಶ್ರೀ ಆಗ್ರಹಿಸಿದರು.

Follow Us:
Download App:
  • android
  • ios