ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವಹೇಳನ ಹೇಳಿಕೆ ಹಿನ್ನಲೆಯಲ್ಲಿ ಸೌಜನ್ಯ ಮಾವ ವಿಠಲ ಗೌಡಗೆ ಬಂಧನ ವಾರೆಂಟ್ ಜಾರಿಯಾಗಿದೆ.ಆದರೆ ವಿಠಲ ಗೌಡ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಧರ್ಮಸ್ಥಳ (ಜೂ.27) ರಾಜ್ಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ ಧರ್ಮಸ್ಥಳ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಯಾಗಿದೆ. ಆರಂಭದಲ್ಲಿ ಧರ್ಮಸ್ಥಳ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿರುದ್ದ ಗಂಭೀರ ಆರೋಪ ಮಾಡಿದ್ದ ಬುರುಡೆ ಗ್ಯಾಂಗ್ ತನಿಖೆ ನಡೆಸುತ್ತಿದ್ದಂತೆ ಅಸಲಿಯತ್ತು ಬಹಿರಂಗವಾಗಿ ಚದುರಿಕೊಂಡಿದೆ. ಇದೇ ಇತ್ತ ಧರ್ಮಸ್ಥಳ ವಿರುದ್ದ ಕಳೆದ ಒಂದೊಂದು ದಶಕದಿಂದ ಗಂಭೀರ ಆರೋಪ ಮಾಡುತ್ತಿರುವ ಸೌಜನ್ಯ ಮಾವ ವಿಠಲ ಗೌಡಗೆ ನ್ಯಾಯಲಯ ಬಂಧನ ವಾರೆಂಟ್ ಜಾರಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ್ಯಾಯಾಂಗ ನಿಂದನೆ ಕೇಸ್‌ನಲ್ಲಿ ಬಂಧನ ವಾರೆಂಟ್

ಬೆಂಗಳೂರು VI ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ವಾರೆಂಟ್ ಜಾರಿ ಮಾಡಿದೆ. ಧರ್ಮಸ್ಥಳ ಹಾಗೂ ವಿರೇಂದ್ರ ಹೆಗ್ಗಡೆ ವಿರುದ್ದ ಅವಹೇಳನ ಮಾಡದಂತೆ ನ್ಯಾಲಯ ತಡೆಯಾಜ್ಞೆ ನೀಡಿತ್ತು. ಆದೇಶ ವಿಠಲ ಗೌಡ ಆದೇಶ ಉಲ್ಲಂಘಿಸಿ ಹೇಳಿಕೆ ನೀಡಿದ್ದರು. ಪರಿಣಾಮ ಇದೀಗ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ವಿಠಲ ಗೌಡ ಪರಾರಿ, ಎಲ್ಲಾ ಕಡೆ ಹುಡುಕಾಟ

ಬೆಂಗಳೂರು ನ್ಯಾಯಲ ಹೊರಡಿಸಿದ ಬಂಧನ ವಾರೆಂಟ್ ಹಿಡಿದು ಬೆಳ್ತಂಗಡಿ ತಾಲೂಕಿಗೆ ಆಗಮಿಸಿದ ಕೋರ್ಟ್ ಅಧಿಕಾರಿಗಳು ವಿಠಲಗೌಡನಿಗಾಗಿ ಹುಡುಕಾಡಿದ್ದಾರೆ. ಆದರೆ ಅರೆಸ್ಟ್ ವಾರೆಂಟ್ ಕುರಿತು ಅರಿತಿದ್ದ ವಿಠಲಗೌಡ ಸದ್ಯ ಪರಾರಿಯಾಗಿದ್ದಾನೆ. ಹಗದಾಗಿ ಕೋರ್ಟ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ವಿಠಲ ಗೌಡ ಮನೆ, ಸಹೋದರಿ ಕುಸುಮಾವತಿ ಮನೆ ಹಾಗೂ ಹೋರಾಟಗಾರ ಮಹೇಶ್ ತಿಮರೋಡಿ ನಿವಾಸದಲ್ಲಿ ಹುಡುಕಾಟ ನಡೆಸಲಾಗಿದೆ. ಜೂ.8ರಂದು ಬಂಧನ ವಾರೆಂಟ್ ಜಾರಿಯಾಗಿದ್ದು, ಜೂ.30ರೊಳಗೆ ಕೋರ್ಟ್ ಗೆ ಹಾಜರುಪಡಿಸಲು ಸೂಚನೆ ನೀಡಿದೆ. ಆದರೆ ವಿಠಲ ಗೌಡ ಸುಳಿವು ಪತ್ತೆಯಾಗದ ಕಾರಣ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಸ್ಫೋಟಕ ಆರೋಪ ಮಾಡಿದ್ದ ಚಿನ್ನಯ್ಯ

ಧರ್ಮಸ್ಥಳ ಬುರುಡೆ ಪ್ರಕರಣದ ಆರಂಭ ಚಿನ್ನಯ್ಯನ ಸ್ಫೋಟಕ ಆರೋಪದಿಂದ ಆರಂಭಗೊಂಡಿತ್ತು. ಧರ್ಮಸ್ಥಳಲ್ಲಿ ನೂರಾರು ಮಹಿಳೆಯರ ಶವಗಳನ್ನು ಹೂತಿದ್ದೇನೆ ಎಂಬ ಆರೋಪದಿಂದ ಎಸ್‌ಐಟಿ ರಚನೆಯಾಗಿತ್ತು. ಚಿನ್ನಯ್ಯ ಹೇಳಿದ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಜೆಸಿಬಿ ಸೇರಿದಂತೆ ಹಲವು ಕಾರ್ಮಿಕರ ನೆರವಿನಿಂದ ಉತ್ಖನನ ಕಾರ್ಯಾಚರಣೆ ನಡೆಸಿತ್ತು. ಭಾರಿ ಮಳೆಯಲ್ಲಿ ಉತ್ಖನನ ನಡೆಸಲಾಗಿತ್ತು. ಆದರೆ ಚಿನ್ನಯ್ಯ ಆರೋಪಿಸಿದಂತೆ ಕಳೇಬರಹ ಸಿಗಲಿಲ್ಲ. ಬಳಿಕ ಎಸ್‌ಐಟಿ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಅಸಲಿ ವಿಚಾರಗಳು ಹೊರಬಂದಿತ್ತು. ಚಿನ್ನಯ್ಯನ ಅರೆಸ್ಟ್ ಮಾಡಿದ ಪೊಲೀಸರು ತನಿಖೆ ನಡೆಸಿದ್ದರು. ಚಿನ್ನಯ್ಯ ತನಗೆ ಹಣದ ಆಮಿಷ ನೀಡಿ ಈ ರೀತಿ ಹೇಳಿಕೆ ಕೊಡಿಸಲಾಗಿದೆ. ತನಗೆ ಜೀವಬೆದರಿಕೆ ಇದೆ ಎಂದು ಎಸ್ಐಟಿ ಮುಂದೆ ಹೇಳಿಕೊಂಡಿದ್ದ. ಇತ್ತ ಬುರುಡೆ ಗ್ಯಾಂಗ್‌ನಲ್ಲಿ ಕಾಣಿಸಿಕೊಂಡ ಸುಜಾತಾ ಭಟ್ ತನ್ನ ಮಗಳು ಧರ್ಮಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯ ಶವ ಕೂಡ ಸಿಕ್ಕಿಲ್ಲ ಎಂದು ಆರೋಪಿಸಿದ್ದ ಸುಜಾತ್ ಭಟ್ ಕೊನೆಗೆ ತಾನು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡಿದ್ದರು. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸದ್ಯ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಗಡೀಪಾರಿನ ಆದೇಶದ ಹಿನ್ನಲೆಯಲ್ಲಿ ತಲೆಮರೆಸಿಕೊಂಡಿದ್ದಾರೆ. ಇದೀಗ ವಿಠಲ ಗೌಡ ಕೂಡ ಬಂಧನ ವಾರೆಂಟ್‌ನಿಂದ ಪರಾರಿಯಾಗಿದ್ದಾರೆ.