ಧರ್ಮಸ್ಥಳ- ಸುಬ್ರಹ್ಮಣ್ಯಕ್ಕೆ ಹೋಗುವವರೇ ಎಚ್ಚರ: ರಸ್ತೆಯಲ್ಲಿಯೇ ಕಾಡಾನೆಗಳ ದಾಳಿ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಗ್ರಾಮದ ಬಳಿ ಕಾಡಾನೆ ದಾಳಿ ಮಾಡಿದ್ದು, ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರವಾಸಿಗರು ಎಚ್ಚರದಿಂದಿರುವಂತೆ ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ (ಮೇ 28): ಕೆಲಸ ಮುಗಿಸಿಕೊಂಡು ಮನೆಯತ್ತ ಹೊರಟ ಉದ್ಯೋಗಿಯ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಗ್ರಾಮದಲ್ಲಿ ಮತ್ತೆ ಕಾಡಾನೆ ದಾಳಿ ನಡೆದಿದೆ. ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರವಾಸಿಗರಿಗೂ ಎಚ್ಚರದಿಂದ ಹೋಗುವಂತೆ ಗಾಯಾಳು ಮನವಿ ಮಾಡಿದ್ದಾರೆ.
ಕಾಡಾನೆಗಳ ದಾಳಿಯಿಂದ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ವಿಜುಕುಮಾರ್ ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿಯ ನಡುಮನೆ ಕ್ರಾಸ್ ಬಳಿ ಘಟನೆ ನಡೆದಿದೆ. ಪ್ರತಿನಿತ್ಯದಂತೆ ಭಾನುವಾರ ಕೂಡ ಕೆಲಸ ಮುಗಿಸಿಕೊಂಡು ಊರಿನತ್ತ ಹೋಗುವಾಗ ಕಾಡಾನೆ ಬಂದು ದಾಳಿ ಮಾಡಿದೆ. ಈ ವೇಳೆ ಆನೆ ಏಕಾಏಕಿ ದಾಳಿ ಮಾಡಿದ್ದು, ರಸ್ತೆ ಬದಿಯ ಕಂದಕಕ್ಕೆ ಬಿದ್ದು ವಿಜುಕುಮಾರ್ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ರಸ್ತೆ ಬದಿಯಲ್ಲಿ ವಾಹನ ಇದ್ದರೂ ಅದರ ಮಾಲೀಕ ಕಾಣಿಸದೇ ರಸ್ತೆಹೋಕರು ಹುಡುಕಿದಾಗ ಗಾಯಗೊಂಡು ನರಳುತ್ತಿದ್ದ ವಿಜುಕುಮಾರ್ ಅವರನ್ನು ನೋಡಿದ್ದಾರೆ.
ಆರ್‌ಎಸ್‌ಎಸ್ ನಿಷೇಧಿಸುವುದಾಗಿ ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
ಪ್ರವಾಸಿಗರೇ ಪ್ರಯಾಣದ ವೇಳೆ ಎಚ್ಚರದಿಂದಿರಿ: ನಂತರ ಗಂಭೀರ ಗಾಯಗೊಂಡ ವಿಜುಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಡಬದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಪುತ್ತೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಕಾಡಾನೆ ದಾಳಿ ಮಾಡಿದೆ. ಕಡಬ ಬಳಿಯ ಇಚ್ಲಂಪಾಡಿಯ ಪರಿಸರದಲಲ್ಲಿ ಒಟ್ಟು 2 ಆನೆಗಳು ಇರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಲಭ್ಯವಾಗಿದೆ. ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ. ಜೊತೆಗೆ, ಸುಬ್ರಹ್ಮಣ್ಯ-ಧರ್ಮಸ್ಥಳ ತೆರಳುವ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಗಾಯಾಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ.
ರಸ್ತೆಯಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು: ಉತ್ತರಕನ್ನಡ: ಜಿಲ್ಲೆಯ ದಾಂಡೇಲಿಯ ರಸ್ತೆಯಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು, ರಸ್ತೆಯಲ್ಲೇ ಹೆಚ್ಚಾಗಿ ಬೀಡುಬಿಟ್ಟಿವೆ. ದಾಂಡೇಲಿಯ ಕುಳಗಿ - ಭಾಗವತಿ ಮಾರ್ಗದ ರಸ್ತೆಯಲ್ಲಿ ಕಾಣಿಸಿದ ಆನೆಗಳು. ಆನೆಗಳ ಹಿಂಡು ಕಂಡು ರಸ್ತೆಯಲ್ಲೇ ನಿಂತ ವಾಹನ ಸವಾರರು. ಎರಡು ಆನೆ ಮರಿಗಳನ್ನು ಒಳಗೊಂಡಂತೆ ರಾಜಗಾಂಭೀರ್ಯದೊಂದಿಗೆ ಸಾಗಿದ 10 ಆನೆಗಳ ಹಿಂಡು. ಸಾಲಾಗಿ ಒಂದರ ಹಿಂದೆ ಒಂದರಂತೆ ರಸ್ತೆ ದಾಟಿದ ಆನೆಗಳು. ಆನೆಗಳ ಹಿಂಡು ಸಾಗುತ್ತಿರುವುದನ್ನು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದ ವಾಹನ ಸವಾರರು. ಆಹಾರ ಅರೆಸುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿದ ಆನೆಗಳು. ದಾಂಡೇಲಿ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Bengaluru- ಕಣ್ಣಮುಂದೆಯೇ ಕೆರೆಯಲ್ಲಿ ಮುಳುಗಿದ ಸ್ನೇಹಿತ
ಕಾರು ಬೈಕ್ ನಡುವೆ ನಡೆದ ಲೈವ್ ಅಪಘಾತ: ಕೊಡಗು (ಮೇ 28): ಮಡಿಕೇರಿಯ ಕಾರ್ಯಪ್ಪ ವೃತ್ತದ ಸಮೀಪ ಲೈವ್ ವೀಡಿಯೋ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ನೋಡ ನೋಡುತ್ತಿದ್ದಂತೆ ಬೈಕ್ ಸವಾರನೊಬ್ಬ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಈ ಘಟನೆಯಲ್ಲಿ 2ನೇ ಮೊಣ್ಣಂಗೇರಿಯ ಧನಂಜಯ (36) ಸಾವನ್ನಪ್ಪಿದ್ದಾರೆ. ಬೈಕಿನಲ್ಲಿದ್ದ 2ನೇ ಮೊಣ್ಣಂಗೇರಿಯ ಧನಂಜಯ ಅವರು ಕಾರಿಗೆ ಡಿಕ್ಕೆ ಹೊಡೆದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಕಜಾರಿನಲ್ಲಿ ಹೋಗುವಾಗ ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ವೀಡಿಯೋ ಮಾಡುತ್ತಿದ್ದರು. ಆಗ ಮಡಿಕೇರಿ ನಗರದಿಂದ ಚೈನ್ ಗೇಟ್ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ಧನಂಜಯ ಏಕಾಏಕಿ ಕಾರಿಗೆ ಬಂದು ಗುದ್ದಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತಂತೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.