Asianet Suvarna News Asianet Suvarna News

ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿಸಲು ಹುನ್ನಾರ: ಹಿಂದೂ ರಾಷ್ಟ್ರಸೇನೆಯ ಖಂಡನೆ

ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಿದಾಗ ಮಾತ್ರ ಭಾರತ ಹಿಂದೂ ರಾಷ್ಟ್ರವಾಗಿಸಲು ಸಾಧ್ಯ ಎಂದು ಹಿಂದೂ ರಾಷ್ಟ್ರ ಸೇನೆ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಧನಂಜಯ್ ಜಯರಾಂ ದೇಸಾಯಿ ಹೇಳಿದರು. 

dhananjay jayaram desai talks over sdpi and pfi organization at davanagere gvd
Author
Bangalore, First Published Aug 22, 2022, 11:27 PM IST

ದಾವಣಗೆರೆ (ಆ.22): ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಿದಾಗ ಮಾತ್ರ ಭಾರತ ಹಿಂದೂ ರಾಷ್ಟ್ರವಾಗಿಸಲು ಸಾಧ್ಯ ಎಂದು ಹಿಂದೂ ರಾಷ್ಟ್ರ ಸೇನೆ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಧನಂಜಯ್ ಜಯರಾಂ ದೇಸಾಯಿ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು ಕೇರಳದಲ್ಲಿ ರೂಪುಗೊಂಡಿರುವ ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಾರ್ಯಕರ್ತರ ಹಾವಳಿ ದೇಶಾದ್ಯಂತ ಹೆಚ್ಚಾಗಿದೆ. ಭಾರತವನ್ಬು ಇಸ್ಲಾಮಿಕ್ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಹಿಜಾಬ್ ಪ್ರಕರಣದಲ್ಲಿ ಗೊಂದಲ ಸೃಷ್ಠಿ ಮಾಡಲಾಗಿತ್ತು. 

ಮಹಿಳೆಯನ್ನು ಬಂಧಿಸುವುದು ಹಿಜಾಬ್ ಸಂಸ್ಕೃತಿಯಾಗಿದೆ. ಇದು ನಮ್ಮ ಭಾರತದ ಸಂಸ್ಕೃತಿಯಲ್ಲ.ಇದು ಅರಬ್ ಸಂಸ್ಕೃತಿ.ಸ್ತ್ರೀಯನ್ನುಹಿಜಾಬ್ ಹಾಕಿ ಬಂಧನದಲ್ಲಿಡುವುದು ಸರಿಯಲ್ಲ. ಭಾರತದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಲಾಗಿದೆ ಹಿಜಾಬ್‌ನ ಬಂಧನ ಅವಶ್ಯಕತೆ ಇಲ್ಲ ಎಂದರು. ಶಾಲಾ ಕಾಲೇಜುಗಳಲ್ಲಿ ಗಣೇಶೋತ್ಸವದಲ್ಲಿ ಪೂಜೆ ಮಾಡುವುದಿಲ್ಲ ಎಂದು ಮುಸ್ಲಿಂರಿಗೆ ಹೇಳಿದ್ದಾರೆ. ಹಾಗೂ ನಮಾಜ್ ಮಾಡುವುದಾಗಿ ಹೇಳುತ್ತಿದ್ದಾರೆ ಇದು ಖಂಡನೀಯ. 

ಶಾಮನೂರು ಶಿವಶಂಕರಪ್ಪನವರ ಮನೆಯಲ್ಲಿ ಕನಕಾಭಿಷೇಕ ಮತ್ತು ತುಲಾಭಾರ

ಬಾಂಗ್ಲಾದಿಂದ ಬಂದಿರುವ ರೋಹಿಂಗ್ಯಾ ಮುಸ್ಲಿಂರನ್ನು ಅಲ್ಲಿಂದ ಹೊರಹಾಕಿದ್ದ ಬಗ್ಗೆ ಕಾರಣ ನೀಡಿದ ಧನಂಜಯ ಜಯರಾಂ ದೇಸಾಯಿಯವರು ಅಲ್ಲಿನ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ, ದೇವಾಲಯಗಳ ಮೇಲೆ‌ ದಾಳಿ ಕೋಮು ಗಲಭೆ ಸೃಷ್ಠಿಸುತ್ತಿದ್ದರು ಎಂಬ ಹಿನ್ನೆಲೆಯಲ್ಲಿ ಅವರನ್ನು ದೇಶದಿಂದ ಹೊರ ಹಾಕಲಾಯಿತು. ಅಂತಹ ದೇಶ ದ್ರೋಹಿಗಳು ನಮ್ಮ ಭಾರತದ ನಾಗರೀಕತೆ ಪಡೆಯಲು ಪ್ರಯತ್ನ ಮಾಡಿದರು. ಅವರೆಲ್ಲಾ ಬ್ಲಾಂಗ್ಲಾದ ಮುಜಾಹಿದ್ ಪಕ್ಷದ ಕಾರ್ಯಕರ್ತರು. ಅವರ ಮುಖ್ಯ ಕಾರ್ಯ ಸೂಚಿಯೇ ದೇಶದ್ರೋಹಿ ಕೆಲಸ ಎಂದರು. ಭಾರತವನ್ನು ಇಸ್ಲಾಮಕ್ ರಾಷ್ಟ್ರ ಮಾಡುವುದಾಗಿ ದೇಶದಲ್ಲಿ ಗಲಭೆ ಸೃಷ್ಠಿಸಲು ಮುಂದಾಗಿದ್ದಾರೆ ಎಂದರು. 

ಕಾಮಗಾರಿ ವಿಳಂಬಕ್ಕೆಂದೇ ಹಣ ಕೊಟ್ಟಿದ್ದಾರಾ?: ಸಂಸದ ಸಿದ್ದೇಶ್ವರ

ಕರ್ನಾಟಕದಲ್ಲಿ ವೀರ ಸಾರ್ವಕರ್‌ಗೆ ಅಪಮಾನ ಮಾಡಲಾಗಿದೆ. ಆದರೆ ಟಿಪ್ಪು ದಿನಾಚರಣೆ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದರು. ಸೇನೆಯ ರಾಜ್ಯ ಪ್ರವಕ್ತ ಸಂದೀಪ್ ಕೆ.ಎನ್ ಮಾತನಾಡಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಸಂಘಟನೆ ಪ್ರಾರಂಭವಾಗಿದೆ. ಸಂಘಟನೆ ವತಿಯಿಂದ ದೇವ,ದೇಶ, ಧರ್ಮದ ಉಳಿವಿಗಾಗಿ ಹಿಂದೂ ರಾಷ್ಟ್ರಸೇನೆ ಸದಾ ಸಿದ್ದವಾಗಿದೆ. ದಕ್ಷಿಣ ಭಾರತದಲ್ಲಿ ಸಂಘಟನೆ ರೂಪಿಸಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸಂಘಟನೆ ಮಾಡಲಾಗುವುದು. ಇದಲ್ಲದೇ ಸ್ಟೇಟ್ ಬೈಠಕ್ ಶೀಘ್ರದಲ್ಲೇ ಮಾಡಲಾಗುವುದು. ನಮ್ಮ ಸಂಘಟನೆ ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ. ಸಮಾನ ನಾಗರೀಕತೆ ನಮ್ಮ ಧ್ಯೇಯವಾಗಿದೆ ಎಂದರು.

Follow Us:
Download App:
  • android
  • ios