ಚಿತ್ತಾಪುರ: ಗ್ರಾಮೀಣ ಭಾಗಗಳ ಅಭಿವೃದ್ಧಿ ನನ್ನ ಬದ್ಧತೆ: ಪ್ರಿಯಾಂಕ್ ಖರ್ಗೆ
ನಾನು ಸಚಿವನಾಗಿದ್ದಾಗ 80 ಕೊಟಿ ಅನುದಾನವನ್ನು ಕಲಬುರಗಿಗೆ ಕೊಟ್ಟಿದ್ದೇನೆ. ಸೇಡಂ, ಕಲಬುರಗಿ ಗ್ರಾಮೀಣ ಹಾಗೂ ಚಿಂಚೊಳಿ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಆದರೆ ಈ ಸರ್ಕಾರ ನನ್ನ ಕ್ಷೇತ್ರಕ್ಕೆ ಬಿಡಗಡೆಯಾಗಬೇಕಿದ್ದ 200 ಕೊಟಿ ತಡೆ ಹಿಡಿಯಲಾಗಿದೆ ಇದು ದ್ವೇಷದ ರಾಜಕಾರಣದ ಫಲ ಎಂದ ಖರ್ಗೆ
ಚಿತ್ತಾಪುರ(ನ.19): ಗ್ರಾಮೀಣ ಭಾಗದ ಅಭಿವೃದ್ಧಿ ತಮ್ಮ ಬದ್ಧತೆಯಾಗಿದ್ದು ಇದುವರೆಗೆ ಹೊಸೂರ ಗ್ರಾಮಕ್ಕೆ ಸಾಕಷ್ಟುಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇನ್ನು ಅಭಿವೃದ್ಧಿ ಕೆಲಸ ಮಾಡುವುದಾಗಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ತಾಲೂಕಿನ ಹೊಸೂರ ಗ್ರಾಮದಲ್ಲಿ ಒಟ್ಟು .68.05 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕೊಣೆ, ಮಾದಿಗ ಸಮಾಜದ ಏರಿಯಾದಲ್ಲಿ .6.06 ಲಕ್ಷ ವೆಚ್ಚದ ಸಾಂಸ್ಕೃತಿಕ ಭವನ ಹಾಗೂ 10 ಲಕ್ಷ ವೆಚ್ಚದಲ್ಲಿ ಕೊಲಿ ಸಮಾಜದ ಹತ್ತಿರ ಸಾಂಸ್ಕೃತಿಕ ಭವನಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ನಾನು ಸಚಿವನಾಗಿದ್ದಾಗ 80 ಕೊಟಿ ಅನುದಾನವನ್ನು ಕಲಬುರಗಿಗೆ ಕೊಟ್ಟಿದ್ದೇನೆ. ಸೇಡಂ, ಕಲಬುರಗಿ ಗ್ರಾಮೀಣ ಹಾಗೂ ಚಿಂಚೊಳಿ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಆದರೆ ಈ ಸರ್ಕಾರ ನನ್ನ ಕ್ಷೇತ್ರಕ್ಕೆ ಬಿಡಗಡೆಯಾಗಬೇಕಿದ್ದ 200 ಕೊಟಿ ತಡೆ ಹಿಡಿಯಲಾಗಿದೆ ಇದು ದ್ವೇಷದ ರಾಜಕಾರಣದ ಫಲ ಎಂದು ವಿಷಾದ ವ್ಯಕ್ತಪಡಿಸಿದರು.
ಮಕ್ಕಳಿಗಾಗಿ ಜೋಳಿಗೆ ಹಾಕಿದ ಸ್ವಾಮೀಜಿ: ಗೋವುಗಳ ರಕ್ಷಣೆಗೆ ಪಣ ತೊಟ್ಟ ನಾಸೀರ್
ಕಳೆದ ಬಾರಿ ಮೊದಲ ಹಂತದಲ್ಲಿ ಹೊಸೂರ ಗ್ರಾಮಕ್ಕೆ .60 ಲಕ್ಷ ವೆಚ್ಚದಲ್ಲಿ ಶಾಲೆಗಳಿಗೆ ಅನುದಾನ ನೀಡಿದ್ದೆ. ಈಗ ಎರಡನೆಯ ಹಂತದಲ್ಲಿ ಶಾಲೆಗಳ ನಿರ್ಮಾಣಕ್ಕಾಗಿ .60 ಲಕ್ಷ ಹೀಗೆ ಒಟ್ಟು .1 ಕೊಟಿಗೂ ಅಧಿಕ ಅನುದಾನವನ್ನು ಕೇವಲ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರ ವಿವೇಕ ಯೊಜನೆಯಡಿ ನೂತನ ಶಾಲೆಗಳನ್ನು ಕಟ್ಟಿಸಿ ಅವುಗಳಿಗೆ ಕೇಸರಿ ಬಣ್ಣ ಬಳಿಯುತ್ತಿದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸರ್ಕಾರದ ಅದ್ಯತೆಯ ಬಗ್ಗೆ ತಕರಾರಿದೆ. ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಾಣ, ಶಿಕ್ಷಕರ ಕೊರತೆ ನೀಗಿಸುವುದು ಮುಖ್ಯವಾಗಬೇಕಿತ್ತು. ಅದನ್ನು ಬದಿಗಿಟ್ಟು ಧ್ಯಾನ ಮಾಡಿಸುವುದು ಪೋಷಕರಿಂದ ನೂರು ರುಪಾಯಿ ಕಲೆಕ್ಟ್ ಮಾಡಲಾಗುತ್ತಿದೆ ಇದು ಸರಿಯಲ್ಲ ನಮ್ಮ ಅದ್ಯತೆ ಶಾಲೆಯ ಶಿಕ್ಷಣ ಮೂಲ ಸೌಕರ್ಯವಾಗಿರಬೇಕೆ ಹೊರತು ಬಣ್ಣದಲ್ಲಲ್ಲಾ ಎಂದು ಟೀಕಿಸಿದರು.
ಒಟ್ಟು .2.50 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ ಅವುಗಳನ್ನು ತುಂಬುವ ಆಸಕ್ತಿ ಇಲ್ಲಾ. ಆದರೆ ಕೆಪಿಟಿಸಿಎಲ್, ಪಿಎಸ್‌ಐ, ಪಂಚಾಯತರಾಜ್ ನೇಮಕಾತಿ ನಡೆಸಿದರು ಆದರೆ ಅಲ್ಲಿ ಹಣದ ಅವ್ಯವಹಾರ ನಡೆದು ಇಂದು ಲಕ್ಷಾಮತರ ನಿರುದ್ಯೊಗಿ ಯುವಕರ ಭವಿಷ್ಯ ಕತ್ತಲಲ್ಲಿ ಮುಳುಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಾಸ್ತವಿಕವಾಗಿ ಕೊಲಿ ಸಮಾಜ ತಾಲೂಕು ಅಧ್ಯಕ್ಷ ರಾಮಲಿಂಗ ಬಾನರ ಮಾತನಾಡಿದರು. ಬಸವರಾಜ ಜಕಾತಿ ಸ್ವಾಗತಿಸಿದರು. ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಗ್ರಾಪಂ ಅಧ್ಯಕ್ಷ ಮಹಿಪಾಲ್ ಮೂಲಿಮನಿ, ಭೀಮಣ್ಣ ಸಾಲಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ರಮೇಶ ಮರಗೋಳ, ಸಾಹೇಬಡ ಪಾಟೀಲ್, ರವಿಗೌಡ ಬಂಕಲಗಿ, ಹಣಮಂತ ಸಂಕನೂರ, ಖಾಸಿಂಬೀ ಚಿಂತಕುಂಟಿ ವೇದಿಕೆಯಲ್ಲಿದ್ದರು.