Asianet Suvarna News Asianet Suvarna News

ವಿಜಯಪುರದಲ್ಲಿ ಹೆಮ್ಮಾರಿಯರ ಆರ್ಭಟ: ಡೆಂಗ್ಯೂ, ಚಿಕನ್‌ ಗುನ್ಯಾ ಹೊಡೆತಕ್ಕೆ ಜನರ ನರಳಾಟ!

ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಹೆಮ್ಮಾರಿಯರ ಆರ್ಭಟ ಜೋರಾಗಿದೆ. ಒಂದೆ ತಿಂಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಆಸ್ಪತ್ರೆಗಳು ಭರ್ತಿಯಾಗಿವೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಸಹ ಜನರಲ್ಲಿ ಭಯ ಹುಟ್ಟಿಸಿವೆ.

Dengue Chikungunya Cases Increased In Vijayapura District gvd
Author
First Published Oct 6, 2023, 12:56 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಅ.06): ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಹೆಮ್ಮಾರಿಯರ ಆರ್ಭಟ ಜೋರಾಗಿದೆ. ಒಂದೆ ತಿಂಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಆಸ್ಪತ್ರೆಗಳು ಭರ್ತಿಯಾಗಿವೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಸಹ ಜನರಲ್ಲಿ ಭಯ ಹುಟ್ಟಿಸಿವೆ.

ಹೆಮ್ಮಾರಿಗಳ ಹಾವಳಿಗೆ ಬಹಳ ಬೆಚ್ಚಿಬಿದ್ದ ಗುಮ್ಮಟನಗರಿ ಜನ: ದಿನಕಳೆದಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗುತ್ತಿದೆ. ಅದ್ರಲ್ಲು ವಾತಾವರಣ ವೈಪರೀತ್ಯಗಳಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗಗಳು ಜನರನ್ನ ಹೆಮ್ಮಾರಿಯಂತೆ ಕಾಡ್ತಿವೆ. ಸೆಪ್ಟೆಂಬರ್ ತಿಂಗಳಲ್ಲಿಯೇ ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ದಾಖಲಾಗಿವೆ. ಇದು ಜನರಲ್ಲಿ ಆತಂಕ ಮೂಡಿಸಿದೆ. 

ಬಡ್ಡಿ ಹಣದ ವಿಚಾರವಾಗಿ ಗಲಾಟೆ: ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಾದ ಪ್ರಕರಣಗಳು: ಆತಂಕದ ವಿಚಾರ ಅಂದ್ರೆ ಸೆಪ್ಟೆಂಬರ್ ಒಂದೆ ತಿಂಗಳಲ್ಲಿ 21 ಚಿಕನ್ ಗುನ್ಯಾ ಹಾಗೂ 46 ಡೆಂಗ್ಯೂ ಪಾಜಿಟಿವ್ ಪ್ರಕರಣ ದಾಖಲಾಗಿವೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ಈ ವರ್ಷ ಜನವರಿ ಆರಂಭದಿಂದ ಸೆಪ್ಟೆಂಬರ್ ಕೊನೆಯವರೆಗೂ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 2,702 ಡೆಂಗ್ಯೂ ಶಂಕಿತ ಲಕ್ಷಣಗಳು ಕಂಡು ಬಂದಿವೆ. ಅವುಗಳಲ್ಲಿ 2164 ಶಂಕಿತರ ರಕ್ತಪರೀಕ್ಷೆ ಕೈಗೊಳ್ಳಲಾಗಿದ್ದು, 206 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಇನ್ನೂ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1107 ಚಿಕನ್ ಗುನ್ಯಾ ಶಂಕಿತ ಲಕ್ಷಣಗಳು ಕಂಡು ಬಂದಿದ್ದು, ಇವುಗಳಲ್ಲಿ 117 ಚಿಕುನ್ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ ಎಂದು ಸಾಂಕ್ರಾಮಿಕ ರೋಗಗಳ ಅಧಿಕಾರಿ ಜೈಬುನಿಸಾ ಬೀಳಗಿ ಮಾಹಿತಿ ನೀಡಿದ್ದಾರೆ.
 
ಹವಾಮಾನ ವೈಪರೀತ್ಯ ಕಾರಣ: ಜಿಲ್ಲೆಯಾದ್ಯಂತ ವಾತಾವರಣದಲ್ಲಿ ಸಾಕಷ್ಟು ವೈಪರೀತ್ಯ ಉಂಟಾಗುತ್ತಿವೆ. ಏಕಾಏಕಿ ಮಳೆ ಸುರಿಯುದು. ಏಕಾಏಕಿ ಬಿಸಿಲು ಬೀಳುವುದು. ಸತತ ವಾರದ ವರೆಗೆ ಮೋಡ ಮುಸುಕಿದ ವಾತಾವರಣ ಇವೆಲ್ಲವೂ ಅನಾರೋಗ್ಯಕ್ಕೆ ಕಾರಣವಾಗಿವೆ. ಈ ರೀತಿಯ ವಾತಾವರಣ ವೈಪರೀತ್ಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಇತ್ತ ಸೊಳ್ಳೆಗಳ ಉತ್ಪತ್ತಿಯಿಂದಾಗಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚಾಗಿವೆ.

ಆಸ್ಪತ್ರೆಗಳು ರಶ್.. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಕ್ಯೂ: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ.  ಜ್ವರ, ಮೈಕೈ ನೋವು, ನೆಗಡಿ, ಕೆಮ್ಮು ಹೀಗೆ ವಿವಿಧ ಅನಾರೋಗ್ಯ ಸಮಸ್ಯೆಗಳಿಗಾಗಿ ಆಸ್ಪತ್ರೆಗಳ ಮುಂದೆ ಪ್ರತಿನಿತ್ಯ ರೋಗಿಗಳ ಸರದಿ ಸಾಲು ದೊಡ್ಡದಾಗುತ್ತಿದೆ. ಆಸ್ಪತ್ರೆಗೆ ಬರುತ್ತಿರುವ ಬಹುತೇಕ ರೋಗಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಕಂಡು ಬರ್ತಿದೆ. ಈ ಪೈಕಿ ಕೆಲವರಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಲಕ್ಷಣಗಳು ಕಂಡು ಬರ್ತಿವೆ..

ಸ್ವಚ್ಛತೆಯ ಕೊರೆತೆ, ಹೆಚ್ಚಾದ ಸೊಳ್ಳೆ ಕಾಟ: ಮೊನ್ನೆಯಷ್ಟೇ ಗಾಂಧಿ ಜಯಂತಿ ಆಚರಣೆ ನಡೆದಿದೆ. ಸ್ವಚ್ಛತಾ ಅಭಿಯಾನದ ನೆಪದಲ್ಲಿ ಕಂಡು ಕಂಡಲ್ಲಿ ರಾಜಕಾರಣಿಗಳು-ಅಧಿಕಾರಿಗಳು ಪೊರಕೆ ಹಿಡಿದು ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಆದ್ರೆ ಅಸಲಿಗೆ ಕೊಳೆ ತುಂಬಿದ್ದ ಪ್ರದೇಶಗಳಲ್ಲಿ ಯಾವುದೇ ಸ್ವಚ್ಛತೆ ಕಂಡಿಲ್ಲ. ಇಷ್ಟಾಗ್ಯೂ ನಗರ ಪ್ರದೇಶದಲ್ಲಿ ಅಧಿಕಾರಿಗಳು ಡೆಂಗ್ಯೂ, ಚಿಕನ್ ಗುನ್ಯಾ ಬಗ್ಗೆ ಅರಿವು ಮೂಡಿಸುವುದು, ಪಾಲಿಕೆ ಸಿಬ್ಬಂದಿ ನಿಯಮಿತವಾಗಿ ಫಾಗಿಂಗ್ ಮಾಡದೆ ಇರೋದು ಸಹ ಡೆಂಗ್ಯೂ, ಚಿಕನ್ ಗುನ್ಯಾ ರೋಗ ಉಲ್ಭಣಿಸಲು ಕಾರಣ ಎನ್ನುವ ಆರೋಪ ಕೇಳಿ ಬರ್ತಿವೆ..

ಮಹಾನಗರ ಪಾಲಿಕೆಯಿಂದ ಫಾಗಿಂಗ್ ಕಾರ್ಯ: ವಿಜಯಪುರ ನಗರದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳು ಹೆಚ್ಚಾದ ಕಾರಣಕ್ಕೆ ಮಹಾನಗರ ಪಾಲಿಕೆ ಸಹ ಕೆಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ನಗರದ ಸಂಜೆ ಫಾಗಿಂಗ್ ಕಾರ್ಯ ನಡೆಯುತ್ತಿದೆ. ಗೋಳಗುಮ್ಮಟ ಏರಿಯಾ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲಾಗ್ತಿದೆ‌‌.

ಯಾದಗಿರಿ ನಗರದಲ್ಲಿ ಹೆಚ್ಚಾದ ಕಳ್ಳತನ ಪ್ರಕರಣಗಳು: ಕಳ್ಳರನ್ನು ಹಿಡಿಯಲು ಪೋಲಿಸರ ಹರಸಾಹಸ

ಜನರಲ್ಲಿ ಸ್ವಯಂ ಜಾಗೃತಿ ಅವಶ್ಯಕತೆ ಇದೆ: ಡೆಂಜರ್ ಸೊಳ್ಳೆಗಳಿಂದ ಹರಡುವ ಡೆಂಗ್ಯು ಸೇರಿ ಇತರೆ ರೋಗಗಳ ನಿಯಂತ್ರಣಕ್ಕೆ ಜನರ ಸಹಕಾರವು ಅಗತ್ಯವಾಗಿರುತ್ತೆ. ಜನರು ಸಹ ಮನೆಯ ಸುತ್ತಮುತ್ತ ಸ್ವಚ್ಛತೆಯ ಬಗ್ಗೆ ಜಾಗೃತಿವಹಿಸದೆ ಇರೋದು ಸಹ ರೋಗಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗ್ತಿದೆ. ಇನ್ನೂ ಮಳೆಗಾಲ ಇರುವ ಕಾರಣ ಮುಂದಿನ ದಿನಗಳಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದ್ದು , ಜನರೇ ಜಾಗೃತಿ ವಹಿಸಬೇಕಿದೆ. ಮನೆಯ ಬಳಿಯಲ್ಲಿ ನೀರು ನಿಂತಿದ್ದರೇ, ಒಡೆದ ಕೊಡ, ಬಿಂದಿಗೆ, ಪ್ಲಾಸ್ಟಿಕ್ ಟ್ಯಾಂಕ್‌ಗಳಲ್ಲಿ ಬಹಳ ದಿನಗಳಿಂದ ನೀರು ನಿಂತಿದ್ದರೆ ಅವುಗಳನ್ನ ತೆರವುಗೊಳಿಸಬೇಕು. ಸೊಳ್ಳೆಗಳ ಲಾರ್ವಾಗಳು ನಿಂತ ನೀರಲ್ಲಿ ಬೆಳೆಯುವುದರಿಂದ ಆ ಬಗ್ಗೆ ಜನರು ಎಚ್ಚರವಹಿಸಬೇಕಿದೆ.

Follow Us:
Download App:
  • android
  • ios