ಬಡ್ಡಿ ಹಣದ ವಿಚಾರವಾಗಿ ಗಲಾಟೆ: ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು
ಬಡ್ಡಿ ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿರ್ಯೋವನ್ನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ಗ್ರಾಮದಲ್ಲಿ ಘಟನೆ ನಡೆದಿದೆ.
ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು (ಅ.06): ಬಡ್ಡಿ ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿರ್ಯೋವನ್ನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತೂರು ಗ್ರಾಮದ ವಾಸಿ ಅಬ್ದುಲ್ ಖಲೀಲ್ (55) ಮೃತ ದುರ್ದೈವಿ. ತೌಸಿಪ್‌ಪಾಷ, ಆಸೀಪ್‌ಪಾಷ, ಶಬಾನಾಬಾನು, ಸನ್ಮಾ ಸುಲ್ತಾನ್ ಹಲ್ಲೆ ನಡೆದಿಸಿದ ಆರೋಪಿಗಳಾಗಿದ್ದು ಅವರ ವಿರುದ್ದ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ: ಮೃತ ಅಬ್ದುಲ್ ಖಲೀಲ್ ಮಗಳ ಮದುವೆಗಾಗಿ ಅಮೃತೂರು ಗ್ರಾಮದ ಪೇಟೇ ಬೀದಿಯ ವಾಸಿ ತೌಸೀಪ್‌ಪಾಷನಿಂದ 50 ಸಾವಿರ ರೂಪಾಯಿಗಳನ್ನು ಸಾಲ ಪಡೆದಿದ್ರು. ಇದಕ್ಕೆ ಪ್ರತಿ ತಿಂಗಳು ಐದು ಸಾವಿರ ರೂಪಾಯಿಗಳನ್ನು ಬಡ್ಡಿ ಹಣ ಕಟ್ಟುತ್ತಿದ್ದರು, ಆದರೆ ಈ ತಿಂಗಳು ಬಡ್ಡಿ ಹಣವನ್ನು ಕೊಡಲು ಒಂದು ದಿನ ತಡವಾಗಿದಕ್ಕೆ ತೌಸಿಪ್ ಪಾಷ ಅಬ್ದುಲ್ ಮೇಲೆ ಗಲಾಟೆ ನಡೆಸಿದ್ದಾನೆ. ತೌಸಿಪ್‌ಪಾಷನ್ನು ಕೋಳಿ ಕಟ್ ಮಾಡುವ ಚಾಕುವಿನಿಂದ ಅಬ್ದುಲ್ ಕಲೀಲ್ ತಲೆಗೆ ಹೊಡೆದಿದ್ದಾನೆ.
ಯಾದಗಿರಿ ನಗರದಲ್ಲಿ ಹೆಚ್ಚಾದ ಕಳ್ಳತನ ಪ್ರಕರಣಗಳು: ಕಳ್ಳರನ್ನು ಹಿಡಿಯಲು ಪೋಲಿಸರ ಹರಸಾಹಸ
ಇದೇ ವೇಳೆ ತೌಸಿಪ್ ಪಾಷ ಕುಟುಂಬದ ಶಬಾನಾ ಬೇಗಂ, ನಗ್ಮಾಸುಲ್ತಾನ್, ಅತ್ತಿಹಾರ್ ಕೂಡ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅಬ್ದುಲ್ ಕಲೀಲ್ ಅನ್ನು ಅಮೃತೂರು, ಕುಣಿಗಲ್ ಹಾಗೂ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಬ್ದುಲ್ ಕಲೀಲ್ ಕೊನೆಯುಸಿರೆಳೆದಿದ್ದಾರೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.