Asianet Suvarna News Asianet Suvarna News

ಅರಸು ಹೆಸರಲ್ಲಿ ಹುಣಸೂರಿಗೆ ಜಿಲ್ಲೆ ಸ್ಥಾನ?

ಮೈಸೂರು ಜಿಲ್ಲೆಗೆ ಒಳಪಡುವ ಹುಣಸೂರನ್ನು ಪ್ರತ್ಯೇಕ ಜಿಲ್ಲೆಯಾಗಿಸುವುದು ನಮ್ಮ ಬಯಕೆಯಾಗಿದೆ. ಹೀಗೆಂದು ಬಿಜೆಪಿ ಮುಖಂಡ ಎಚ್ ವಿಶ್ವನಾಥ್ ಹೇಳಿದ್ದಾರೆ.

Demands On Separate Hunsur District Says H Vishwanath
Author
Bengaluru, First Published Aug 21, 2020, 12:03 PM IST

ಹುಣಸೂರು (ಆ.21):  ಅರಸರ ಕರ್ಮಭೂಮಿ ಹುಣಸೂರು ಜಿಲ್ಲೆಯಾಗಿ ಮಾರ್ಪಾಡಾಗಬೇಕೆನ್ನುವುದು ನನ್ನ ಜೀವಮಾನದ ಬಯಕೆಯಾಗಿದೆ, ಆದರೆ ಇದು ಯಾವುದೇ ರಾಜಕೀಯ ಲಾಭಕ್ಕಾಗಿಯಲ್ಲ, ಅರಸರ ಹೆಸರು ಚಿರಸ್ಥಾಯಿಯಾಗಿ ಉಳಿಯುವ ಮೂಲಕ ಅರಸು ತವರು ಕ್ಷೇತ್ರದ ಅಭಿವೃದ್ಧಿಯಷ್ಟೆನನ್ನ ಕನಸಾಗಿದೆ ಎಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಹೇಳಿದರು.

ತಮ್ಮ 73ನೇ ಹುಟ್ಟಹಬ್ಬದ ಸಂಭ್ರಮದಲ್ಲಿ ವಿಶಿಷ್ಟಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನೆಂದು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಮಾಡಿಕೊಳ್ಳಲು ಇಷ್ಟವಿಲ್ಲ. ಆದರೆ ಅಭಿಮಾನಿಗಳ ಒತ್ತಾಸೆ ಮೇರೆಗೆ ಅರಸರ ಕರ್ಮಭೂಮಿ ಹುಣಸೂರು ಜಿಲ್ಲೆಯಾಗಬೇಕೆಂಬುದು ನನ್ನ ಕನಸಾಗಿದೆ ಎಂದರು.

ಮೈಸೂರಿಗೆ ಸ್ವಚ್ಛ ನಗರಿ ಗರಿ: Rank ಕುಸಿದರೂ ಸಚಿವರು ಹೇಳಿದ್ದಿಷ್ಟು..!.

ಕೊರೋನಾ ಗಲಾಟೆ ಮುಗಿದ ನಂತರ ಉಪವಿಭಾಗ ವ್ಯಾಪ್ತಿಯ ಕೆ.ಆರ್‌. ನಗರ, ಪಿರಿಯಾಪಟ್ಟಣ, ಎಚ್‌.ಡಿ. ಕೋಟೆ, ಸಾಲಿಗ್ರಾಮ, ಸರಗೂರು ಒಳಗೊಂಡ ಶಾಸಕರು, ಸಂಸದರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು, ಮಾಧ್ಯಮವನ್ನೊಳಗೊಂಡು ಹುಣಸೂರಿನಲ್ಲಿ ಪ್ರಥಮ ಸಭೆ ನಡೆಸಲಾಗುವುದು. ನಂತರ ಪ್ರತಿ ತಾಲೂಕಿನಲ್ಲೂ ಈ ಕುರಿತು ವಿಸುತ್ರತ ಚರ್ಚೆ ನಡೆಸಿ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸಲಾಗುವುದು. ಹುಣಸೂರು ಜಿಲ್ಲೆ ರಾಜ್ಯದಲ್ಲೇ ಅತ್ಯಂತ ಸಂಪತ್ಭರಿತ ಜಿಲ್ಲೆಯಾಗುವ ಎಲ್ಲ ಲಕ್ಷಣಗಳೂ ಇವೆ ಎನ್ನುವುದು ನನ್ನ ಅಭಿಪ್ರಾಯ ಈ ಸಂಬಂಧವಾಗಿ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೂಡ ಅರಸು ಹೆಸರಲ್ಲಿ ಜಿಲ್ಲೆ ಮಾಡುವ ಬಗ್ಗೆ ಹಸಿರು ನಿಶಾನೆ ತೊರಿಸಿದ್ದಾರೆ. ಸಂಬಂಧಿಸಿದ ಮಾಹಿತಿಯೊಂದಿಗೆ ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ನೀಡುವೆ ಎಂದರು.

ಮೈಸೂರು ಮೃಗಾಲಯಕ್ಕೆ ಬಂದ ವೇಗದ ಸರದಾರ

ಶಾಸಕರಾದ ಸಾ.ರಾ. ಮಹೇಶ್‌ ಮತ್ತು ಎಚ್‌.ಪಿ. ಮಂಜುನಾಥ್‌ ಅವರು ಜಿಲ್ಲೆಯ ವಿಚಾರವಾಗಿ ರಾಜಕೀಯ ಲಾಭ ಪಡೆಯಲಿಕ್ಕೆ ಮಾಡುತ್ತಿದ್ದಾರೆ. ನಮಗೆ ಒಪ್ಪಿಗೆ ಬಗ್ಗೆ ಚರ್ಚೆಗಳು ಬಂದಿದ್ದವು, ಆದರೆ ಜಿಲ್ಲೆಯ ವಿಚಾರದಲ್ಲಿ ಅವರಿಗೆ ಇಷ್ಟವಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಯಾವ ಶಾಸಕರು ಆಯಾ ತಾಲೂಕಿನ ಜನಸೇವಕರೆ ಹೊರೆತು, ಮಾಲೀಕರಲ್ಲ ಎಂದು ಇಬ್ಬರು ಶಾಸಕರಿಗೂ ತಿರುಗೇಟು ನೀಡಿದರು.

ಕೊರೋನಾ ತೊಲಗಿಸಲು ತಾಲೂಕು ಅಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ ಕೆಲವು ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂಬುವ ಬಗ್ಗೆ ಮಾಹಿತಿ ಬಂದಿದೆ. ಸಚಿವರ ಗಮನ ಸೆಳೆಯಲಾಗುತ್ತದೆ ಹಾಗೂ ನಾನು ಕೂಡ ತಾಲೂಕಿನ ಜನರ ಹಿತದೃಷ್ಟಿಯಿಂದ ಒಂದುವರೆ ಲಕ್ಷ ಮಾಸ್ಕ್‌, 5 ಸಾವಿರ ಜನರಿಗೆ ಪಡಿತರವನ್ನು ನಮ್ಮ ಅಭಿಮಾನಿಗಳು ಮತ್ತು ಸ್ನೇಹಿತರ ಸಹಕಾರದಿಂದ ಲಾಕ್‌ ಡೌನ್‌ ಸಮಸ್ಯೆಯಿಂದಾಗಿ ಕೊರೋನಾ ಸೋಂಕಿನ ವಿರುದ್ಧ ಸೈನಿಕರಂತೆ ಹೋರಾಡುತ್ತಿರುವವರನ್ನು ಗುರುತಿಸಿ ದಾನಿಗಳಿಂದ ಕೊಡ ಮಾಡಿದ ಪಡಿತರಗಳನ್ನು ನೀಡುತ್ತಿದ್ದೇವೆ.

ಇದೇ ಸಂದರ್ಭದಲ್ಲಿ ಹುಟ್ಟಿದ ನವಜಾತ ಶಿಶುಗಳಿಗೆ ಸಾಕಷ್ಟುಔಷಧೋಪಚಾರ ಸಿಗುತ್ತಿಲ್ಲವೆಂಬ ಮಾಹಿತಿ ತಮಗೆ ಲಭ್ಯವಾಗಿದ್ದು, ಇನ್ನೊಂದು ವಾರದಲ್ಲಿ ನವಜಾತ ಶಿಶು ಸೇರಿದಂತೆ ಒಂದು ವರ್ಷದೊಳಗಿನ ಮಕ್ಕಳಿಗೆ ವಿಟಮಿನ್‌ ಸೇರಿದಂತೆ ವಿವಿಧ ಪ್ರೊಟೀನ್‌ಯುಕ್ತ ಔಷಧೋಪಚಾರ ಉಚಿತವಾಗಿ ಒದಗಿಸುವ ಮೂಲಕ ರಾಜ್ಯಕ್ಕೆ ಹುಣಸೂರು ಮಾದರಿಯಾಗಲಿದೆ ಎಂದರು.

Follow Us:
Download App:
  • android
  • ios