ಬೊಬ್ಬರ್ಯನಕಟ್ಟೆಬಳಿ ಕುಂದಾಪುರ ನಗರ ಪ್ರವೇಶಕ್ಕೆ ಹಸಿರು ನಿಶಾನೆ?

  • ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ನಗರಕ್ಕೆ ಪ್ರವೇಶ ಮತ್ತು ನಗರದಿಂದ ಹೆದ್ದಾರಿಗೆ ನಿರ್ಗಮನಕ್ಕೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರ ಮನವಿ
  • ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಈ ಕುರಿತು ವರದಿ ನೀಡುವಂತೆ ಕುಂದಾಪುರ ಉಪ ವಿಭಾಗಾಧಿಕಾರಿಯವರ ನೇತೃತ್ವದಲ್ಲಿ ಸಮಿತಿ ರಚಿಸಿ ಆದೇಶ 
Demands for Kundapura Entry  at NH near Bobbaryanakatte snr

ವರದಿ :  ಶ್ರೀಕಾಂತ ಹೆಮ್ಮಾಡಿ

 ಕುಂದಾಪುರ (ಅ.24):  ರಾಷ್ಟ್ರೀಯ ಹೆದ್ದಾರಿ (National Highway) 66ರಲ್ಲಿ ಕುಂದಾಪುರ (Kundapura) ನಗರಕ್ಕೆ ಪ್ರವೇಶ ಮತ್ತು ನಗರದಿಂದ ಹೆದ್ದಾರಿಗೆ ನಿರ್ಗಮನಕ್ಕೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರ ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಕೂರ್ಮಾ ರಾವ್‌ (Kurma Rao), ಈ ಕುರಿತು ವರದಿ ನೀಡುವಂತೆ ಕುಂದಾಪುರ ಉಪ ವಿಭಾಗಾಧಿಕಾರಿಯವರ ನೇತೃತ್ವದಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ- 66 ಚತುಷ್ಪಥ ಕಾಮಗಾರಿ ಪ್ರಾರಂಭವಾದಾಗ ಜಿಲ್ಲೆಯ ಏಕೈಕ ಉಪವಿಭಾಗ ಕೇಂದ್ರ ಹಾಗೂ ಪ್ರಮುಖ ತಾಲೂಕುಗಳಲ್ಲಿ (Taluk) ಒಂದಾಗಿರುವ ಕುಂದಾಪುರ ನಗರ ಪದೇಶಗಳು, ಪುರಸಭಾ ವ್ಯಾಪ್ತಿಗಳು ಮೇಲ್ಸೇತುವೆಯ ಕಾರಣದಿಂದಾಗಿ ಕಡೆಗಣನೆಯಾಗುವ ಸಾಧ್ಯತೆಗಳನ್ನು ಮನಗಂಡು ಸಾರ್ವಜನಿಕರು (Publics), ವಿವಿಧ ಸಂಘಟನೆಗಳು ನಿರಂತರವಾಗಿ ಹೋರಾಟಗಳನ್ನು ಸಂಘಟಿಸಿಕೊಂಡು ಬಂದಿತ್ತು. ಪ್ರಾರಂಭದಲ್ಲಿ ಶಾಸ್ತ್ರಿ ವೃತ್ತದಲ್ಲಿ ಮಾತ್ರ ಮೇಲ್ಸೇತುವೆಯ ಬೇಡಿಕೆಯಿದ್ದು, ಆ ಬಳಿಕ ಬಸ್ರೂರು ಮೂರುಕೈಯಲ್ಲೂ ಮೇಲ್ಸೇತುವೆ (Fly Over) ನಿರ್ಮಾಣವಾದ ಕಾರಣ ವಿನಾಯಕ ಟಾಕೀಸ್‌ನಿಂದ (Vinayaka talkies) ಸಂಗಮ್‌ ಜಂಕ್ಷನ್‌ವರೆಗೂ ಜನರು ರಾಷ್ಟ್ರೀಯ ಹೆದ್ದಾರಿಯಲ್ಲೇ ಸಂಚರಿಸಬೇಕಾದ ಅನಿವಾರ್ಯ ನಿರ್ಮಾಣವಾದ್ದರಿಂದ ಕುಂದಾಪುರ ನಗರಕ್ಕೆ ಪ್ರವೇಶಿಸುವ ವಾಹನಗಳು (Vehicle) ಹಂಗಳೂರು ಗ್ರಾ.ಪಂ.ನ ದುರ್ಗಾಂಬ ನಿಲ್ದಾಣದ ಬಳಿಯಲ್ಲಿ ಸರ್ವೀಸ್‌ ರಸ್ತೆಯನ್ನು (Service Road) ಪ್ರವೇಶಿಸುವ ಸಂದರ್ಭಗಳು ಬಂದಿತ್ತು.

ಬೆಂಗ್ಳೂರಿನ ರಸ್ತೆಗಳು ಈಗ ಮೃತ್ಯಗುಂಡಿಗಳು..!

ಅತಿ ಹೆಚ್ಚು ಸರ್ಕಾರಿ ಹಾಗೂ ವಾಣಿಜ್ಯ ಕಚೇರಿಗಳು: ಬೊಬ್ಬರ್ಯನಕಟ್ಟೆಬಳಿಯಲ್ಲಿ ಎಲ್‌ಐಸಿ (LIC), ಡಿವೈಎಸ್ಪಿ (Dysp) ಕಚೇರಿ, ಲೋಕೋಪಯೋಗಿ ಕಚೇರಿ, ವಿದ್ಯಾರ್ಥಿ ನಿಲಯ (Hostel), ಗ್ರಂಥಾಲಯ, ಶಾಲಾ- ಕಾಲೇಜುಗಳೂ (School - College) ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ವಾಣಿಜ್ಯ ಕಚೇರಿಗಳಿರುವ ಕಾರಣದಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ (students) ಹೆದ್ದಾರಿ ದಾಟಲು ತೊಡಕಾಗುತ್ತದೆ ಎನ್ನುವ ಹಿನ್ನೆಲೆ ಬೊಬ್ಬರ್ಯನಕಟ್ಟೆಬಳಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವ ಕುರಿತು ಹಾಗೂ ನಗರಕ್ಕೆ ಒಳಪ್ರವೇಶ ಮಾಡಲು ಮತ್ತು ನಗರದಿಂದ ಹೊರಕ್ಕೆ ಹೋಗುವಲ್ಲಿ ಅವಕಾಶ ನೀಡುವಂತೆ ಸಾರ್ವಜನಿಕರು, ವಿವಿಧ ಸಂಘ- ಸಂಸ್ಥೆಗಳು ನಿರಂತರವಾಗಿ ಮನವಿ ಸಲ್ಲಿಸುತ್ತಾ ಬಂದಿದ್ದವು.

ಹಿಂದಿನ ಪಿ.ಡಿ.ಯಿಂದ ನಿರಾಕರಣೆ: ಕೆಲ ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಹೆದ್ದಾರಿ ಪ್ರಾಧಿಕಾರದ ಹಿಂದಿನ ಯೋಜನಾ ನಿರ್ದೇಶಕರು ಈ ಪ್ರದೇಶಗಳಲ್ಲಿ ಪ್ರವೇಶ ಅವಕಾಶಗಳನ್ನು ನೀಡಿದ್ದಲ್ಲಿ ತಾಂತ್ರಿಕ ಸಮಸ್ಯೆಗಳು ಮತ್ತು ಅಪಘಾತಗಳು ಉಂಟಾಗುವ ಸಾಧ್ಯತೆ ಇರುವುದುರಿಂದ ಪ್ರವೇಶ ಅವಕಾಶ ನಿರಾಕರಿಸಿದ್ದರು. ಇದರ ವಿರುದ್ಧ ಕುಂದಾಪುರ (Kundapura) ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸಾಕಷ್ಟುಚರ್ಚೆಗಳು ನಡೆದಿತ್ತು. ಇತ್ತೀಚೆಗೆ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್‌ (veena bhaskar) ಮೆಂಡನ್‌ ಅವರ ನೇತೃತ್ವದಲ್ಲಿ ಪುರಸಭಾ ಸದಸ್ಯರ ನಿಯೋಗ ಜಿಲ್ಲಾಧಿಕಾರಿ ಕೂರ್ಮರಾವ್‌ ಅವರನ್ನು ಭೇಟಿಯಾಗಿ ನಗರದ ಅಭಿವೃದ್ದಿ ಕುಂಠಿತವಾಗಿರುವ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹಾಗೂ ಕುಂದಾಪುರದ ಜನತೆಗೆ ಅಗತ್ಯವಾಗಿರುವ ಅಹವಾಲು ಸಲ್ಲಿಸಿ ಮನವಿ ಮಾಡಿದ್ದರು.

ಸಿಗುತ್ತಿಲ್ಲ ಮೀನು, ಬೆಲೆ ಗಗನಕ್ಕೆ, ಮಾರುಕಟ್ಟೆಯಲ್ಲಿ ಮೀನು ಸಿಗದೇ ಮತ್ಸ್ಯ ಪ್ರಿಯರಿಗೆ ನಿರಾಸೆ.!

ನಗರಕ್ಕೆ ಪ್ರವೇಶ ಕೊಡುವಂತೆ ಪಕ್ಷಾತೀತ ಹೋರಾಟ: ಇದಕ್ಕೆ ಪೂರಕವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಅವರು ಸಂದಂಧಪಟ್ಟಇಲಾಖೆಗಳಿಗೆ ಪತ್ರ ಬರೆದಿದ್ದರು. ಅಲ್ಲದೆ ಇತ್ತೀಚೆಗಷ್ಟೇ ವಿಧಾನ ಪರಿಷತ್‌ನಲ್ಲೂ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿಯವರು ಪ್ರಶ್ನೆಯ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಸಾರ್ವಜನಿಕ ಸಂಘ- ಸಂಸ್ಥೆಗಳು ಅನೇಕ ಪ್ರತಿಭಟನೆ ಹಾಗೂ ಮನವಿಗಳನ್ನು ಮಾಡಿದ್ದವು. ಈ ಎಲ್ಲ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಇದೀಗ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿರುವುದು ಸ್ಥಳೀಯರಿಗೆ ಸಂತೋಷ ತಂದಿದೆ.

ಸಮಿತಿ ರಚನೆ: ಸಮಿತಿಯ ಅಧ್ಯಕ್ಷರಾಗಿ ಕುಂದಾಪುರ ಉಪ ವಿಭಾಗಾಧಿಕಾರಿ, ಸದಸ್ಯರಾಗಿ ಕುಂದಾಪುರ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರು, ರಾ.ಹೆ. ಮಂಗಳೂರು ವಿಭಾಗದ ಯೋಜನಾ ನಿರ್ದೇಶಕರು, ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕುಂದಾಪುರ ತಹಸೀಲ್ದಾರ್‌, ಕಾರ್ಯದರ್ಶಿಯಾಗಿ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿಯವರನ್ನು ಆಯ್ಕೆ ಮಾಡಿ ಸಮಿತಿ ರಚಿಸಲಾಗಿದೆ.

ಕೂಡಲೇ ಸಮಿತಿ ಸಭೆ ಕರೆದು ಸ್ಥಳ ಪರಿಶೀಲನೆ ನಡೆಸಿ, ಅಲ್ಲಿನ ಸಾಧಕ- ಬಾಧಕಗಳ ಕುರಿತು ಚರ್ಚಿಸಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಂದಾಪುರ ಪೇಟೆಗೆ ಸಂಪರ್ಕ ಕಲ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಿದ್ದೇವೆ

- ರಾಜು ಕೆ., ಉಪ ವಿಭಾಗಾಧಿಕಾರಿ ಕುಂದಾಪುರ

ನಾವು ಕೇಳುತ್ತಿರುವುದು ಹೆದ್ದಾರಿ ಯೂಟರ್ನ್‌ ಅಲ್ಲ. ಬದಲಾಗಿ ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ಪ್ರವೇಶ. ಇದರಿಂದ ಯಾವ ಅಪಘಾತಗಳು ಸಂಭವಿಸುವುದಿಲ್ಲ. ಹೀಗಾಗಿ ಪುರಸಭೆಯ ನಿಯೋಗ ಡಿಸಿ ಅವರನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಿ ಬಂದಿದ್ದೆವು. ನಮ್ಮ ಮನವಿಗೆ ಪುರಸ್ಕಾರ ನೀಡಿದ ಡಿಸಿಯವರ ಕಾರ್ಯ ಸ್ವಾಗತಾರ್ಹ

- ಗಿರೀಶ್‌ ಜಿ.ಕೆ, ಪುರಸಭಾ ಸದಸ್ಯರು, ಹೋರಾಟಗಾರರು

ನಮ್ಮೆಲ್ಲರ ನಿರಂತರ ಹೋರಾಟದ ಫಲವಾಗಿ ಇದೀಗ ಡಿಸಿ ಅವರು ಸಮಿತಿ ರಚಿಸಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸಮಿತಿಗೆ ಆದೇಶ ನೀಡಿರುವುದು ಒಳ್ಳೆಯ ಬೆಳವಣಿಗೆ

- ವಿವೇಕ್‌ ನಾಯ್ಕ್, ಹೆದ್ದಾರಿ ಹೋರಾಟಗಾರರು

Latest Videos
Follow Us:
Download App:
  • android
  • ios