Asianet Suvarna News Asianet Suvarna News

ಸಿದ್ದಯ್ಯನಹುಂಡಿ ಗೇಟ್ ಬಳಿಯ ಮದ್ಯದಂಗಡಿ ತೆರವುಗೊಳಿಸಲು ಆಗ್ರಹ

ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಯ್ಯನಹುಂಡಿ ಗೇಟ್ ಬಳಿ ತೆರೆದಿರುವ ಮದ್ಯದಂಗಡಿ ತೆರವುಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದವರು ಗ್ರಾಮಸ್ಥರೊಂದಿಗೆ ಮೈಸೂರಿನ ಕುವೆಂಪುನಗರದಲ್ಲಿರುವ ಅಬಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು.

Demand to vacate the liquor shop near Siddaiyahundi Gate snr
Author
First Published Dec 31, 2023, 11:14 AM IST

  ಮೈಸೂರು:  ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಯ್ಯನಹುಂಡಿ ಗೇಟ್ ಬಳಿ ತೆರೆದಿರುವ ಮದ್ಯದಂಗಡಿ ತೆರವುಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದವರು ಗ್ರಾಮಸ್ಥರೊಂದಿಗೆ ಮೈಸೂರಿನ ಕುವೆಂಪುನಗರದಲ್ಲಿರುವ ಅಬಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು.

ಸಿದ್ದಯ್ಯನಹುಂಡಿ ಗೇಟ್ ಬಳಿ ಬೇರೆ ಕಡೆಯಿಂದ ಸ್ಥಳಾಂತರ ಮಾಡಿದ ಮದ್ಯದಂಗಡಿ ತೆರೆಯಲಾಗಿದೆ. ಇದನ್ನು ವಿರೋಧಿಸಿ ಕಸುವಿನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ನಿಯಮಾವಳಿ ಮಾಡಿ ತೆರವಿಗೆ ತೀರ್ಮಾನಿಸಲಾಗಿದೆ. ಹೀಗಾಗಿ, ಈ ಕೂಡಲೇ ಮದ್ಯದಂಗಡಿ ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಾರ್ವಜನಿಕರು, ಮಹಿಳೆಯರು ಮದ್ಯದಂಗಡಿ ದಾರಿಯ ಮೂಲಕವೇ ಹೋಗುವುದರಿಂದ ತೊಂದರೆ ಉಂಟಾಗುತ್ತದೆ. ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ 16 ದಿನಗಳಿಂದ ಶಾಂತಿಯುತವಾಗಿ ಚಳವಳಿ ನಡೆಸಿಕೊಂಡು ಬರುತ್ತಿದ್ದು, ಡಿ.28 ರಂದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಂಗಡಿ ಮಾಲೀಕರು ಪೊಲೀಸರನ್ನು ಕರೆ ತಂದು ಮಹಿಳೆಯರ ಕೈ ಹಿಡಿದು ಎಳೆದಾಡಿ, ಹಲ್ಲೆಗೆ ಯತ್ನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸುತ್ತಮುತ್ತಲಿನ ಗ್ರಾಮದ ಮಹಿಳಾ ಸಂಘದವರು ಅಬಕಾರಿ ಇಲಾಖೆಗೆ ಪತ್ರವನ್ನೂ ಬರೆದಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ನಡೆಸಲು ಅವಕಾಶ ಕೊಡಬಾರದು. ಅಹಿತಕರ ಘಟನೆಗೆ ಕಾರಣರಾದವರನ್ನು ಕಾನೂನು ರೀತಿ ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಪಿ. ಮರಂಕಯ್ಯ, ಶಿರಮಳ್ಳಿ ಸಿದ್ದಪ್ಪ, ಹೆಜ್ಜಿಗೆ ಪ್ರಕಾಶ್, ಆನಂದೂರು ಪ್ರಭಾಕರ್, ನಾಗನಹಳ್ಳಿ ವಿಜಯೇಂದ್ರ, ಮಂಡಕಳ್ಳಿ ಮಹೇಶ್, ಬೊಕ್ಕಳ್ಳಿ ನಂಜಂಡಸ್ವಾಮಿ, ಕಸುವಿನಳ್ಳಿ ಗ್ರಾಪಂ ಅಧ್ಯಕ್ಷ ಚಿಕ್ಕನಾಯಕ, ಸದಸ್ಯರಾದ ಪರಶಿವಮೂರ್ತಿ, ನಾಗೇಶ್, ಶಿವನಂಜಪ್ಪ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios