Asianet Suvarna News Asianet Suvarna News

ಪ್ರೇಮಿಗಳ ದಿನ: 10 ಲಕ್ಷ ಗುಲಾಬಿ ಹೂವಿಗೆ ಬೇಡಿಕೆ, ಬೆಲೆಯೂ ಏರಿಕೆ

ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಆಚರಿಸುವ ‘ಪ್ರೇಮಿಗಳ ದಿನ’ಕ್ಕೆ ಉದ್ಯಾನ ನಗರಿ ಬೆಂಗಳೂರು ಸಜ್ಜಾಗಿದೆ. ‘ತಾಜ್‌ಮಹಲ್‌’ ಸೇರಿದಂತೆ ವಿವಿಧ ತಳಿಯ ಗುಲಾಬಿಗಳು, ವರ್ಷಾನುಗಟ್ಟಲೆ ಬಾಡದ ವಿದೇಶಿ ಗುಲಾಬಿಗಳು, ಬಹು ಬೇಡಿಕೆಯ ತಾಜ್‌ಮಹಲ್‌ ಚಾಕೋಲೆಟ್‌, ಪ್ರೇಮ ಸಂಕೇತವಾದ ಹೃದಯದ ಆಕಾರದ ಕೇಕ್‌ಗಳು ಸಿದ್ಧವಾಗಿವೆ. ಮನಸೆಳೆಯುವ ವರ್ಣರಂಜಿತ ಗ್ರೀಟಿಂಗ್ಸ್‌, ಬೊಕ್ಕೆಗಳು ಸೇರಿದಂತೆ ವಿಭಿನ್ನ ಹಾಗೂ ವಿನೂತನ ಉಡುಗೊರೆಗಳು ರಾಜಧಾನಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

 

Demand for more than 10 lakhs roses in bangalore on Valentines day
Author
Bangalore, First Published Feb 14, 2020, 8:29 AM IST

ಬೆಂಗ​ಳೂ​ರು(ಫೆ.14): ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಆಚರಿಸುವ ‘ಪ್ರೇಮಿಗಳ ದಿನ’ಕ್ಕೆ ಉದ್ಯಾನ ನಗರಿ ಬೆಂಗಳೂರು ಸಜ್ಜಾಗಿದೆ. ‘ತಾಜ್‌ಮಹಲ್‌’ ಸೇರಿದಂತೆ ವಿವಿಧ ತಳಿಯ ಗುಲಾಬಿಗಳು, ವರ್ಷಾನುಗಟ್ಟಲೆ ಬಾಡದ ವಿದೇಶಿ ಗುಲಾಬಿಗಳು, ಬಹು ಬೇಡಿಕೆಯ ತಾಜ್‌ಮಹಲ್‌ ಚಾಕೋಲೆಟ್‌, ಪ್ರೇಮ ಸಂಕೇತವಾದ ಹೃದಯದ ಆಕಾರದ ಕೇಕ್‌ಗಳು ಸಿದ್ಧವಾಗಿವೆ. ಮನಸೆಳೆಯುವ ವರ್ಣರಂಜಿತ ಗ್ರೀಟಿಂಗ್ಸ್‌, ಬೊಕ್ಕೆಗಳು ಸೇರಿದಂತೆ ವಿಭಿನ್ನ ಹಾಗೂ ವಿನೂತನ ಉಡುಗೊರೆಗಳು ರಾಜಧಾನಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಈ ಬಾರಿಯ ಪ್ರೇಮಿಗಳ ದಿನ ಶುಭ ಶುಕ್ರವಾರ (ಫೆ.14) ಆಚರಣೆಗೆ ಬಂದಿರುವುದು ಪ್ರೇಮಿಗಳ ಪಾಲಿಗೆ ಮತ್ತಷ್ಟುವಿಶೇಷ. ಹೀಗಾಗಿ ಪ್ರೇಮಿಗಳು ಪರಸ್ಪರ ಪ್ರೀತಿಸುವವರಿಗೆ ಖುಷಿಯಾಗುವ ಉಡುಗೊರೆಗಳನ್ನು ಕೊಡಲು ಪ್ರೇಮಿಗಳು ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ ಕಾಲೇಜು ಹುಡುಗ- ಹುಡುಗಿಯರಲ್ಲದೆ ಮದುವೆಯಾದವರು ಕೂಡ ತಮ್ಮ ಪತಿ/ಪತ್ನಿಗೆ ಉಡುಗೊರೆ ನೀಡಲು ಸಂಭ್ರಮದಿಂದ ಖರೀದಿಯಲ್ಲಿ ತೊಡಗಿದ್ದಾರೆ. 150 ರಿಂದ ಹಿಡಿದು .10 ಸಾವಿರ ವರೆಗೆ ಗಿಫ್ಟ್‌ಗಳು ಮಾರಾಟವಾಗುತ್ತಿವೆ.

10 ಲಕ್ಷ ಗುಲಾಬಿಗೆ ಬೇಡಿಕೆ:

ನಗರದಲ್ಲಿ ಹೂಗಳ ರಾಜ ಗುಲಾಬಿಗೆ ಪ್ರೇಮಿಗಳ ದಿನಕ್ಕೆ ಹಿಂದಿಗಿಂತಲೂ ಹೆಚ್ಚು ಬೇಡಿಕೆ ಬಂದಿದೆ. ಫೆ.14ರ ಒಂದೇ ದಿನ ಬರೋಬ್ಬರಿ ಸುಮಾರು 10 ಲಕ್ಷ ಗುಲಾಬಿಗಳಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ. ದರ ಗಗನ​ಕ್ಕೇ​ರಿ​ದರೂ ಖರೀದಿ ಹೆಚ್ಚು​ತ್ತಲೇ ಇದೆ. ಸಾಮಾನ್ಯ ದಿನ​ದಲ್ಲಿ ಒಂದು ಗುಲಾ​ಬಿಗೆ .6​ರಿಂದ .8 ಇದ್ದರೆ, ಇದೀಗ .15ರಿಂದ .20 ಇದೆ. ಜಿಪ್ಸೋ​ಫಿಲ್ಲಾ, ಕಾರ್ನೇಷಿ​ಯ​ನ್‌ ಮಾದರಿ ಗುಲಾಬಿ ಹೂ ಮಾರಾ​ಟ​ದ​ಲ್ಲಿ ಶೇ.99ರಷ್ಟುಸ್ಥಾನ ಪಡೆ​ದಿದೆ.

ಪ್ರೇಮಿಗಳ ದಿನ ಆಚರಿಸದಂತೆ ಭಜರಂಗದಳ ಖಡಕ್ ಎಚ್ಚರಿಕೆ

ಒಂದು ವಾರ​ದಿಂದ ನಿತ್ಯ 5 ಲಕ್ಷ ಗುಲಾ​ಬಿ​ಗಳಿಗೆ ಬೇಡಿಕೆ ಬಂದಿದೆ. ಸಾಮಾನ್ಯ ದಿನಗಳಲ್ಲಿ 15ರಿಂದ 20 ಲಕ್ಷ ವಹಿ​ವಾಟು ನಡೆ​ದರೆ ಫೆ.14ರ ಆಸು ಪಾಸಿನ ದಿನ​ಗಳಲ್ಲಿ ನಿತ್ಯ ಸುಮಾರು 40 ಲಕ್ಷ ವಹಿ​ವಾಟು ನಡೆ​ಯು​ತ್ತದೆ. ಶ್ರುಕ​ವಾರ ಒಂದೇ ದಿನಕ್ಕೆ ಒಟ್ಟು 10 ಲಕ್ಷ ಗುಲಾ​ಬಿಗೆ ಬೇಡಿಕೆ ಬರುವ ಸಾಧ್ಯತೆ ಇದ್ದು, ವಹಿವಾಟು ಇನ್ನಷ್ಟುಹೆಚ್ಚುವ ನಿರೀಕ್ಷೆ ಇದೆ ಎಂದು ಹೆಬ್ಬಾಳದ ಅಂತಾ​ರಾ​ಷ್ಟ್ರೀಯ ಪುಷ್ಪ ಹರಾಜು ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಕಳೆದ ಒಂದು ವಾರ​ದಿಂದ ನಿತ್ಯ ಲಕ್ಷ​ಗ​ಟ್ಟಲೇ ಗುಲಾಬಿ ಹೂಗಳು ಬಿಕರಿಯಾಗುತ್ತಿವೆ. ತಾಜ್‌ ಮಹಲ್‌ ಚಾಕೋಲೆಟ್‌ ಮತ್ತು ಹಾರ್ಟ್‌ ಶೇಪ್‌ ಕೇಕ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಗಿಫ್ಟ್‌ ಸೆಂಟರ್‌, ಬೊಕ್ಕೆ​ಗಳ ಮಳಿ​ಗೆ, ಕೇಕ್‌ ಮತ್ತು ಚಾಕೋ​ಲೆಟ್‌ಗಳ ಮಳಿಗೆಗಳಲ್ಲಿ ತಮ್ಮ ನೆಚ್ಚಿನ ಪ್ರೀತಿಪಾತ್ರರಿಗೆ ವಿಶೇಷ ಹಾಗೂ ಸಫ್ರೈರ್‍ಸ್‌ ಉಡುಗೊರೆ ಖರೀದಿಸುವಲ್ಲಿ ಪ್ರೇಮಿ​ಗಳು, ನವ ಜೋಡಿಗಳು ನಿರತರಾಗಿದ್ದಾರೆ. ಕೆಲವರು ಆನ್‌​ಲೈ​ನ್‌​ ಬುಕ್ಕಿಂಗ್‌ ಮೂಲಕ ದೇಶ ವಿದೇಶಗಳಿಂದಲೂ ವಿಶಿಷ್ಟಉಡುಗೊರೆಗಳನ್ನು ಆರ್ಡರ್‌ ಮಾಡುತ್ತಿದ್ದಾರೆ.

ಎಣ್ಣೆಯಾಗಿ ನಮ್ಮೊಳಗಿನ ಸ್ಫೂರ್ತಿಯ ದೀಪ ಎಂದೂ ಆರದಿರಲಿ.

ನಗರದ ಗಿಫ್ಟ್‌ ಸೆಂಟರ್‌ಗಳು, ಗುಲಾಬಿ ಮಾರುಕಟ್ಟೆಗಳು ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿವೆ. ಮಾಲ್‌, ರೆಸ್ಟೋ​ರೆಂಟ್‌, ಹೋಟೆ​ಲ್‌​ಗಳು ಕೂಡ ಪ್ರೇಮಿಗಳ ದಿನದ ಸಂಭ್ರಮಕ್ಕೆ ವಿಶೇಷ ಅಲಂಕಾರಗಳೊಂದಿಗೆ ಕಂಗೊಳಿಸಲಾರಂಭಿಸಿವೆ. ಬಸ​ವ​ನ​ಗುಡಿ, ಚಾಮ​ರಾ​ಜ​ಪೇಟೆ, ಜಯ​ನ​ಗರ, ರಾಜಾ​ಜಿ​ನ​ಗ​ರ, ಮಲ್ಲೇ​ಶ್ವರ, ಎಂಜಿ.​ರಸ್ತೆ ಹಾಗೂ ಬಿಗ್ರೇಡ್‌ ರಸ್ತೆ ಸೇರಿ​ದಂತೆ ವಿವಿ​ಧೆಡೆ ಗಿಫ್ಟ್‌ ಸೆಂಟ​ರ್‌​ಗಳಲ್ಲಿ ಹೊಸ ಮಾದ​ರಿ ಮತ್ತು ವಿನ್ಯಾ​ಸದ ಕಲ​ರ್‌​ಫು​ಲ್‌ ಗೀಫ್ಟ್‌, ಗ್ರೀಟಿಂಗ್ಸ್‌​ಗ​ಳು ತುಂಬಿ​ಕೊಂಡಿವೆ.

ವಿಶೇಷ ಕೇಕ್‌-ಚಾಕೋ​ಲೆ​ಟ್‌​ಗ​ಳು:

ಸದಾ​ಶಿವ ನಗ​ರ​ದ ‘ಆಬ್ರೀ ಹಾಟ್‌ ಚಾಕೋ​ಲೆ​ಟ್‌’ ಕೇಂದ್ರ ಮಳಿ​ಗೆ​ಯಲ್ಲಿ ಪ್ರೇಮಿ​ಗಳ ದಿನಾ​ಚ​ರ​ದಣೆ ಪ್ರಯುಕ್ತ ಸಂಗಾ​ತಿಗೆ ಉಡು​ಗೊ​ರೆ​ಯಾಗಿ ನೀಡಲು ಹಾರ್ಟ್‌, ಲಿಫ್ಸ್‌ ಶೇಪ್‌ ಮತ್ತು ಉಡು​ಗೊ​ರೆ (ಗಿಫ್ಟ್‌ ಬಾಕ್ಸ್‌ ರೂಪ​ದ) ನೀಡ​ಬ​ಹು​ದಾದ ಗಿಫ್ಟ್‌ ಕೇಕ್‌ ಮತ್ತು ಚಾಕೋ​ಲೆಟ್‌ ತಯಾ​ರಾ​ಗಿವೆ. ಇಲ್ಲಿ ಕೇವಲ ಪ್ಯೂರ್‌ ವೆಜಿಟೇ​ಬಲ್‌ ಕೇಕ್‌ಗೆ ತಯಾ​ರಿ​ಸ​ಲಾ​ಗು​ತ್ತದೆ. ಪ್ರೇಮಿ​ಗಳ ದಿನ​ಕ್ಕೆಂದು ವಿಶೇಷ ಆರ್ಡರ್‌ಗಳಿ​ಗೆ ಅವ​ಕಾಶ ನೀಡ​ಲಾ​ಗಿ​ದೆ. .99ರಿಂದ .3,000 ರವ​ರೆ​ಗಿನ ಚಾಕೋ​ಲೆಟ್‌ ಮತ್ತು ಕೇಕ್‌ ಲಭ್ಯವಿವೆ. ನವ ದಂಪ​ತಿ​ ಕೂಡ ಖರೀ​ದಿ​ ಮತ್ತು ರುಚಿ ಸವಿ​ಯು​ವಲ್ಲಿ ನಿರ​ತ​ರಾ​ಗಿ​ದ್ದಾರೆ.

‘ತಾಜ್‌​ಮ​ಹಲ್‌’ ಚಾಕೋ​ಲೆ​ಟ್‌ಗೆ ಬೇಡಿ​ಕೆ:

ಪ್ರೇಮದ ಸಂಕೇ​ತವಾದ ‘ತಾಜ್‌​ಮ​ಹ​ಲ್‌’ ಚಾಕೋ​ಲೆ​ಟ್‌ (.1500) ಹಾಗೂ ಗುಲಾಬಿ ಆಕಾ​ರದ ಚಾಕೋ​ಲೆ​ಟ್‌​ಗ​ಳಿಗೆ ಈ ಬಾರಿ ಬೇಡಿಕೆ ಹೆಚ್ಚಾ​ಗಿದೆ. ​‘​ರಿಚ್‌ ಚಾಕೋ​ಲೆ​ಟ್‌’ ಕೆ.ಜಿಗೆ .1050 ಇದೆ. ಅಲ್ಲದೆ, ಡಾರ್ಕ್, ಮಿಲ್‌್ಕ, ವೈಟ್‌, ಹಾರ್ಟ್‌ ಶೇಪ್‌ ಚಾಕೋ​ಲೆಟ್‌ ಇಲ್ಲಿ ಲಭ್ಯ​ವಿವೆ. ರೆಡ್‌ ವೈಲೆಟ್‌, ಬಟ್ಟರ್‌ ಸ್ಕಾಚ್‌, ಬ್ಯೂಬೆರಿ, ರಸ್ಬರಿ, ಮ್ಯಾಂಗೋ ಸೇರಿ​ದಂತೆ ವಿವಿಧ ಫ್ಲೇವ​ರ್‌​ನ ಚಾಕೋ​ಲೆಟ್‌ಗಳನ್ನು ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ಸದಾಶಿವನಗರದ ‘ಆಬ್ರೀ ಹಾಟ್‌ ಚಾಕೋ​ಲೆ​ಟ್‌’ ವ್ಯವ​ಸ್ಥಾಪಕ ಚಂದನ್‌ ಶೆಟ್ಟಿ.

ಅಷ್ಟಕ್ಕೂ ಈ ಲವ್, ಲವ್ ಅಂತಾರಲ್ಲ, ಹಂಗಂದ್ರೆ ಏನು?

ರಾಜ್ಯದಲ್ಲಿನ 190ಕ್ಕೂ ಅಧಿಕ ರೈತ​ರಿಂದ ಗುಲಾಬಿ ಖರೀ​ದಿ​ಸ​ಲಾ​ಗು​ತ್ತದೆ. ಸಾಮಾನ್ಯ ದಿನಗಳಲ್ಲಿ ನಿತ್ಯ .20 ಲಕ್ಷದಷ್ಟುನಡೆಯುವ ಗುಲಾಬಿ ಮಾರಾಟ ವಹಿವಾಟು, ಕಳೆದ ಕೆಲ ದಿನಗಳಿಂದ ನಿತ್ಯ .40 ಲಕ್ಷ ವರೆಗೆ ತಲುಪಿದೆ. ಪ್ರೇಮಿಗಳ ದಿನದಂದು .40 ಲಕ್ಕಕ್ಕಿಂತಲೂ ಹೆಚ್ಚು ವಹಿವಾಟು ನಿರೀಕ್ಷಿಸಲಾಗಿದೆ ಎಂದು ಅಂತಾ​ರಾ​ಷ್ಟ್ರೀಯ ಪುಷ್ಪ ಹರಾಜು ಕೇಂದ್ರದ ವ್ಯವ​ಸ್ಥಾ​ಪಕ ನಿರ್ದೇ​ಶ​ಕ ಡಾ. ಎಂ.ವಿಶ್ವ​ನಾಥ ಹೇಳಿದ್ದಾರೆ.

-ಶಂಕರ್‌ ಪರಂಗಿ

Follow Us:
Download App:
  • android
  • ios