ಪ್ರೇಮಿಗಳ ದಿನ ಆಚರಿಸದಂತೆ ಭಜರಂಗದಳ ಖಡಕ್ ಎಚ್ಚರಿಕೆ
ಫೆ.14ರಂದು ಪ್ರೇಮಿಗಳ ದಿನ ಆಚರಣೆಗೆ ಭಜರಂಗ ದಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈಗಾಗಲೇ ಹಲವು ಕಡೆ ಪ್ರೇಮಿಗಳ ದಿನಾಚರಣೆ ಸಂಬಂಧ ಗ್ರೀಟಿಂಗ್ಸ್, ಕಾರ್ಡ್‌ಗಳನ್ನು ಮಾರದಂತೆ ಅಂಗಡಿ ಮಾಲೀಕರಲ್ಲಿ ಭಜರಂಗದಳ ಮನವಿ ಮಾಡಿದೆ.
ಮಂಗಳೂರು(ಫೆ.13): ಫೆ.14ರಂದು ಪ್ರೇಮಿಗಳ ದಿನ ಆಚರಣೆಗೆ ಭಜರಂಗ ದಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈಗಾಗಲೇ ಹಲವು ಕಡೆ ಪ್ರೇಮಿಗಳ ದಿನಾಚರಣೆ ಸಂಬಂಧ ಗ್ರೀಟಿಂಗ್ಸ್, ಕಾರ್ಡ್‌ಗಳನ್ನು ಮಾರದಂತೆ ಅಂಗಡಿ ಮಾಲೀಕರಲ್ಲಿ ಭಜರಂಗದಳ ಮನವಿ ಮಾಡಿದೆ.
ಪ್ರೇಮಿಗಳ ದಿನ ಆಚರಿಸಲು ಭಜರಂಗದಳ ವಿರೋಧ ವ್ಯಕ್ತಪಡಿಸಿದ್ದು, ನಾಳೆ ಪ್ರೇಮಿಗಳ ದಿನ ಆಚರಣೆ ಮಾಡದಂತೆ ಎಚ್ಚರಿಕೆ ನೀಡಿದೆ. ಫೆ.14 ನ್ನು ಪುಲ್ವಾಮಾ ಹುತಾತ್ಮ ದಿವಸ್ ಅಂತಾ ಆಚರಿಸಲು ಮನವಿ ಮಾಡಿದ್ದು, ವ್ಯಾಲೆಂಟೈನ್ ಡೇ ಕಾರ್ಡ್, ರೋಸ್ ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಹುಡುಗರೇ ನೆನಪಿಟ್ಕೊಳ್ಳಿ, ಹುಡುಗೀರು ನೀವಂದುಕೊಂಡಂತಿರೋಲ್ಲ!
ಮಾರಾಟಗಾರರಿಗೆ ಮನವಿ ಮಾಡಿರುವ ಭಜರಂಗದಳ ಯಾರು ಕೂಡ ಪ್ರೇಮಿಗಳ ದಿನ ಆಚರಣೆ ಮಾಡಬೇಡಿ ಎಂದು ಸೂಚನೆ ಕೊಟ್ಟಿದ್ದಾರೆ. ಅದರ ಬದಲು ಪುಲ್ವಾಮ ಹುತಾತ್ಮ ದಿನ ಆಚರಿಸಿ ರಾಷ್ಟ್ರೀಯತೆಯ ಪರವಾಗಿ ನಿಲ್ಲಲು ಮನವಿ ಮಾಡಿದ್ದಾರೆ. ಹಾಗೆಯೇ ಫೆ.14 ರಂದು ಪುಲ್ವಾಮಾ ಹುತಾತ್ಮ ದಿವನ್ ಎಂದು ಘೋಷಿಸಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.