ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಪಮಾನ ಆರೋಪ, ರಾಜ್ಯಾಧ್ಯಕ್ಷ ಜೋಷಿ ರಾಜೀನಾಮೆಗೆ ಒತ್ತಾಯ

ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷರಾದ ತಿಪ್ಪಣ ಮರಿಕುಂಟೆ ಅವರಿಗೆ ಭಾಷಣದ ಅರ್ಧದಲ್ಲೇ ಭಾಷಣ ಮೊಟಕು ಗೊಳಿಸುವಂತೆ ಚೀಟಿ ಕಳುಹಿಸಿ ಅಪಮಾನ ಮಾಡಲಾಗಿದೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ರಾಜೀನಾಮೆಗೆ ಒತ್ತಾಯಿಸಲಾಗಿದೆ.

demand for kannada sahitya sammelana state president mahesh joshi resignation gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.23): ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷರಾದ ತಿಪ್ಪಣ ಮರಿಕುಂಟೆ ಅವರಿಗೆ ಭಾಷಣದ ಅರ್ಧದಲ್ಲೇ ಭಾಷಣ ಮೊಟಕು ಗೊಳಿಸುವಂತೆ ಚೀಟಿ ಕಳುಹಿಸಿ ಅಪಮಾನ ಮಾಡಲಾಗಿದೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಬೇಷರತ್ ಕ್ಷಮೆ ಕೋರಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯ ಚಿಕ್ಕಪ್ಪ‌ನಹಳ್ಳಿ ಷಣ್ಮುಖಪ್ಪ ಆಗ್ರಹಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬುಡುಕಟ್ಟು ಬೀಡಾದ ನಾಯಕನ ಹಟ್ಟಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿದ್ದು, ಇದಕ್ಕೆ ಪತ್ರಕರ್ತ ತಿಪ್ಪಣ ಮರಿಕುಂಟೆ ಅವರನ್ನು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. 

ಇದು ಸಾಕಷ್ಟು ಕನ್ನಡಾಭಿಮಾನಿಗಳು ಸೇರಿದಂತೆ ಪತ್ರಕರ್ತರಿಗೂ ಸಂತಸವನ್ನು ಉಂಟು ಮಾಡಿತ್ತು. ಸಮ್ಮೇಳನ ಅಧ್ಯಕ್ಷರು ಎಂದರೆ, ಈಡೀ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿರುತ್ತಾರೆ. ಅವರಿಗೆ ಎಲ್ಲಾ ರೀತಿಯಿಂದಲೂ ಗೌರವ ಸಲ್ಲಿಸುವುದು ಕನ್ನಡ ಸಾಹಿತ್ಯ ಪರಿಷತ್ ನ ಕರ್ತವ್ಯವಾಗಿರುತ್ತದೆ.  ಅಂತಹದರಲ್ಲಿ ಸಮ್ಮೇಳನ ಅಧ್ಯಕ್ಷ ತಿಪ್ಪಣ್ಣ ಮರುಕುಂಟೆ ಅವರು ಭಾಷಣ ಮಾಡುವಾಗಲೇ ಸಾಹಿತ್ಯ ಪರಿಷತ್ ಕಡೆಯಿಂದ ಭಾಷಣ ಮೊಟಕುಗೊಳಿಸುವಂತೆ ಚೀಟಿ ನೀಡಿದ್ದು, ಸಮ್ಮೇಳನಕ್ಕೆ ಒಂದು ಕಪ್ಪುಚುಕ್ಕೆ ಆಗಿದೆ. ಮತ್ತು ಇದು ಸಮ್ಮೇಳನ ಅಧ್ಯಕ್ಷರಿಗೆ ಮಾಡಿರುವ ಅಪಮಾನವಾಗಿದೆ. ಅಲ್ಲದೆ ಬುಡುಕಟ್ಟು ಜನಾಂಗದವರ ಆಗು, ಹೋಗುಗಳನ್ನು ಆಳವಾಗಿ ಅರಿತು ಅವರುಗಳ ಹೆಳ್ಗೆಗಾಗಿ ಶ್ರಮಿಸುತ್ತಿರುವ ತಿಪ್ಪಣ್ಣ ಮರಿಕುಂಟೆ ಇನ್ನೂ ಸಾಕಷ್ಟು ವಿಚಾರಗಳನ್ನು ಮಂಡಿಸಬೇಕಾದ  ಸಂದರ್ಭದಲ್ಲಿ ಭಾಷಣ ನಿಲ್ಲಿಸಲು ಹೇಳಿದ್ದನ್ನು ಸ್ವತಃ ತಿಪ್ಪಣ್ಣ ಅವರೇ ನೊವ್ವಿನಿಂದ ಹೇಳಿದರು. 

ಇಂತಹ ಅಪಮಾನವನ್ನು ಕನ್ನಡಾಭಿಮಾನಿಗಳು ಹಾಗೂ ಪತ್ರಕರ್ತರು‌ ಸಹಿಸುವುದಿಲ್ಲ. ವೇದಿಕೆಯಲ್ಲಿ ಕಸಪಾ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರ ಸಮ್ಮುಖದಲ್ಲೇ ಈ ಘಟನೆ ನಡೆದಿರುವುದರಿಂದ ಮಹೇಶ್ ಜೋಶಿ ಅವರು ತಿಪ್ಪಣ್ಣ ಮರಿಕುಂಟೆ ಅವರಲ್ಲಿ ಬೇಷರತ್ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು. ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿಡುಗಂಟು ಹಣ ಸುಮಾರು 35 ಲಕ್ಷ ರೂ. ಉಳಿದಿದ್ದು, ಅದರ ಲೆಕ್ಕ ಪತ್ರವನ್ನು ಇದುವರೆಗೂ ಸಹ ಮಂಡಿಸಿಲ್ಲ. ಅಲ್ಲದೆ ಈ ಹಣವನ್ನು ಕನ್ನಡ ಭವನ ನಿರ್ಮಾಣಕ್ಕೆ ಬಳಸಿಕೊಳ್ಳಬೇಕೆಂದು ತೀರ್ಮಾನಿಸಲಾಗಿದ್ದರೂ ಕೂಡ ಇದರ ಯೋಜನೆ ರೂಪಗೊಳಿಸಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವಿರುದ್ದ ಕಿಡಿಕಾರಿದ ಷಣ್ಮುಖಪ್ಪ, ಈ‌ ಬಗ್ಗೆ ಶೀಘ್ರವೇ ಕ್ರಮ ಕೈಗೊಂಡು ಲೆಕ್ಕ ಪತ್ರ ಮಂಡಿಸಬೇಕು.

CM Basavaraj Bommai: ಕನ್ನಡಕ್ಕೆ ಭರ್ಜರಿ ಕೊಡುಗೆ: ಕನ್ನಡ ಹೋರಾಟಗಾರರ ವಿರುದ್ಧದ ಕೇಸ್‌ ವಾಪಸ್‌: ಸಿಎಂ

ನಾಯಕನ ಹಟ್ಟಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾರೆಲ್ಲಾ ಧಾನಿಗಳಿಂದ ದೇಣಿಗೆ ಬಂದಿದೆ ಎಂಬುದರ ಕುರಿತು 15 ದಿನಗಳಲ್ಲಿ ಲೆಕ್ಕ ಪತ್ರವನ್ನು ಮಂಡಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಶ.ಮಂಜುನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಯಾವುದೇ ಸಮ್ಮೇಳನ ನಡೆದರೂ ಕೂಡ ಪರಿಷತ್ ನ ಆಜೀವ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿ ಕರೆಯುವುದು ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷರ ಕರ್ತವ್ಯವಾಗಿದೆ. ಆದರೆ ಮೊನ್ನೆ ನಡೆದ ಜಿಲ್ಲಾ ಸಮ್ಮೇಳನಕ್ಕೆ ಜಿಲ್ಲೆಯ ಯಾವೊಬ್ಬ ಆಜೀವ ಸದಸ್ಯರಿಗೂ ಸಹ ಕಸಾಪ ಜಿಲ್ಲಾಧ್ಯಕ್ಷರು ಆಹ್ವಾನ ನೀಡಿಲ್ಲ. ಇದು ಜಿಲ್ಲೆಯ ಎಲ್ಲಾ ಆಜೀವ ಸದಸ್ಯರಿಗೆ ಮಾಡಿರುವ ಅಪಮಾನವಾಗಿದ್ದು, ಈ ಕುರಿತು ಜಿಲ್ಲಾಧ್ಯಕ್ಷರು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಕಸಾಪ ಸರ್ವಜನಾಂಗದ ಸಂಸ್ಥೆ ಆಗಲಿ: ಪರ್ಯಾಯ ಸಮ್ಮೇಳನದ ನಿರ್ಣಯ

 

ಸಂಗೇನಹಳ್ಳಿ ಅಶೋಕ ಕುಮಾರ್ ಮಾತನಾಡಿ, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮೇಳನ ಕುರಿತು ಜಿಲ್ಲಾ ಕಸಾಪ ಅಧ್ಯಕ್ಷರು ಸೂಕ್ತ ರೀತಿಯಲ್ಲಿ ಪ್ರಚಾರ ಮಾಡದೆ. ಕನ್ನಡ ಅಭಿಮಾನಿಗಳಿಗೆ ಅವಮಾನ ಮಾಡಿದ್ದಾರೆ. ಇದರಿಂದ ಸಮ್ಮೇಳನದ ವೇದಿಕೆಯ ಮೇಲ್ಭಾಗದಲ್ಲಿ ಇದ್ದಷ್ಟು ಜನರು ಸಹ ವೇದಿಕೆಯ ಕೆಳ ಭಾಗದಲ್ಲಿ ಇರಲಿಲ್ಲ. ಇದಕ್ಕೆ ಅಧ್ಯಕ್ಷರ ಕಡೆಗಣನೆಯೇ ಮುಖ್ಯ ಕಾರಣ ಎಂದು ದೂರಿದರು.

Latest Videos
Follow Us:
Download App:
  • android
  • ios