ಕುಡಿಯುವ ನೀರಿನ ಟ್ಯಾಂಕರ್‌ ಸೇವೆಗೆ ಹಣ ನೀಡದ್ದಕ್ಕೆ : ಸಗಣಿ ನೀರು ಸುರಿ​ದು​ಕೊಂಡ ಗ್ರಾಪಂ ಅಧ್ಯಕ್ಷ!

ತಾಲೂಕಿನ ನಗರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡಿದ ಟ್ಯಾಂಕರ್‌ ಸೇವೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಶಗಣಿ ನೀರನ್ನು ಮೈಮೇಲೆ ಹೋಯಿದುಕೊಂಡು ಪ್ರತಿಭಟನೆ ತಾಲೂಕು ಪಂಚಾಯಿತಿ ಕಚೇರಿ ಎದುರು ನಡೆಸಿದ ಘಟನೆ ನಡೆದಿದೆ.

Delay in grant release issue Hosanagar gram panchayat president protest at shivamogga rav

ಹೊಸನಗರ (ಮೇ.27) : ತಾಲೂಕಿನ ನಗರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡಿದ ಟ್ಯಾಂಕರ್‌ ಸೇವೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಶಗಣಿ ನೀರನ್ನು ಮೈಮೇಲೆ ಹೋಯಿದುಕೊಂಡು ಪ್ರತಿಭಟನೆ ತಾಲೂಕು ಪಂಚಾಯಿತಿ ಕಚೇರಿ ಎದುರು ನಡೆಸಿದ ಘಟನೆ ನಡೆದಿದೆ.

ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿಹೀಗೊಂದು ಪ್ರತಿಭಟನೆ ಮಾಡಿದವರು. ಗ್ರಾಮ ಪಂಚಾಯಿತಿ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ಈ ಹಿಂದೆ ಅರೆಬೆತ್ತಲೆ, ಮರವನ್ನು ಹತ್ತಿ, ಜಡಿ ಮಳೆಯಲ್ಲಿ ಪ್ರತಿ​ಭ​ಟನೆ ಹೀಗೆ ವಿಭಿನ್ನ ರೀತಿ​ಯಲ್ಲಿ ಪ್ರತಿಭಟನೆಗಳ​ನ್ನು ನಡೆಸಿದ ಕರುಣಾಕರ ಶೆಟ್ಟಿ, ಈ ಬಾರಿ ಮೈ ಮೇಲೆ ಸೆಗಣಿ ನೀರು ಸುರಿ​ದು​ಕೊಂಡು, ಸಗಣಿ ರಾಡಿ​ಯಲ್ಲೇ ಕುಳಿತು ಪ್ರತಿಭಟನೆ ನಡೆಸಿ ಸರ್ಕಾ​ರದ ಗಮನ ಸೆಳೆ​ಯುವ ಪ್ರಯತ್ನ ಮಾಡಿದರು.

 

ಅಕಾಲಿಕ ಮಳೆಗೆ ಬೆಳೆ ಹಾನಿ; ಪರಿಹಾರಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ!

ಗ್ರಾಮ ಪಂಚಾಯಿತಿಗಳಲ್ಲಿ 3 ತಿಂಗಳಿಂದ ಅಗತ್ಯವಿದ್ದ ಹಳ್ಳಿಗಳಲ್ಲಿ ನೀರಿನ ಟ್ಯಾಂಕರ್‌ ಮೂಲಕ ಕುಡಿ​ಯುವ ನೀರು ಪೂರೈಕೆ ಮಾಡಲಾಗಿತ್ತು. ಆದರೆ, ಇಲ್ಲಿಯತನಕ ಒಂದು ಬಿಡಿಕಾಸು ಸಹ ಬಿಡುಗಡೆಯಾಗಿಲ್ಲ ಎಂಬುದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

ಪ್ರತಿಭಟನೆ ಸ್ಥಳಕ್ಕೆ ಬಂದ ತಹಸೀಲ್ದಾರ್‌ ಡಿ.ಜಿ.ಕೋರಿ ಹಾಗೂ ಪ್ರಭಾರ ಕಾರ್ಯನಿರ್ವಹ​ಣಾ​ಧಿ​ಕಾರಿ ಕೂಡಲೇ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದರು. ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಕಚೇರಿಯಿಂದ ಶೀಘ್ರದಲ್ಲಿ .20 ಲಕ್ಷ ಬಿಡುಗಡೆ ಆಗಲಿದ್ದು, ನಗರ ಗ್ರಾಮ ಪಂಚಾಯಿಗೆ ಪ್ರಥಮ ಆದ್ಯತೆ ನೀಡುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ನಿಲ್ಲಿಸಲಾಯಿತು.

Wresters Protest ಇಷ್ಟು ದಿನ ಬೀದಿಯಲ್ಲಿ ಕೂರಬೇಕು ಎಂದು ಗೊತ್ತಿರಲಿಲ್ಲ: ಕುಸ್ತಿಪಟು ವಿನೇಶ್‌ ಫೋಗಾಟ್‌

-26ಎಚ್‌ಒಸ್‌1ಪಿ.ಜೆ​ಪಿ​ಜಿ: ಹೊಸನಗರ ತಾಲೂಕು ಪಂಚಾಯಿತಿ ಕಚೇರಿ ಎದುರು ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿಕುಡಿಯುವ ನೀರು ಪೂರೈ​ಸಿ​ದ ಟ್ಯಾಂಕರ್‌ ಸೇವೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೈ ಮೇಲೆ ಸಗಣಿ ನೀರು ಸುರಿ​ದು​ಕೊಂಡು ವಿನೂ​ತ​ನ​ವಾಗಿ ಪ್ರತಿಭಟನೆ ನಡೆಸಿದರು.

Latest Videos
Follow Us:
Download App:
  • android
  • ios