Asianet Suvarna News Asianet Suvarna News

ಕೆಂಪೇ​ಗೌ​ಡರಿಗೆ 'ಪ್ರತಿಮೆ' ಗೌರವ ಸಮರ್ಪಣೆ: ಸಚಿವ ಅಶ್ವತ್ಥ್‌ ನಾರಾಯಣ

ಶತಮಾನಗಳು ಕಳೆದರೂ ಸ್ಮರಣೆಯಲ್ಲಿರುವ ನಾಡ​ಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಿ ಶ್ರದ್ಧಾ​ಭ​ಕ್ತಿ​ಯಿಂದ ಭಾವನಾತ್ಮಕವಾಗಿ ಪ್ರತಿ​ಮೆ​ಯನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವಥನಾರಾಯಣ ಹೇಳಿದರು. 

Dedication of statue to KempeGowda Says Minister Dr Cn Ashwath Narayan gvd
Author
First Published Dec 3, 2022, 8:03 PM IST

ಕನಕಪುರ (ಡಿ.03): ಶತಮಾನಗಳು ಕಳೆದರೂ ಸ್ಮರಣೆಯಲ್ಲಿರುವ ನಾಡ​ಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಿ ಶ್ರದ್ಧಾ​ಭ​ಕ್ತಿ​ಯಿಂದ ಭಾವನಾತ್ಮಕವಾಗಿ ಪ್ರತಿ​ಮೆ​ಯನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವಥನಾರಾಯಣ ಹೇಳಿದರು. ನಗ​ರದ ಖಾಸಗಿ ಕಲ್ಯಾಣ ಮಂಟ​ಪ​ದಲ್ಲಿ ಬಿಜೆ​ಪಿ ತಾಲೂಕು ಘಟಕ ಆಯೋ​ಜಿ​ಸಿದ್ದ ಸಮಾ​ರಂಭ​ದಲ್ಲಿ ಸನ್ಮಾನ ಸ್ವೀಕ​ರಿಸಿ ಮಾತ​ನಾ​ಡಿದ ಅವರು, ಸರ್ವ ಜನರ ಶ್ರೇಯಸ್ಸನ್ನು ಬಯಸಿದ್ದ ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದರು. ಈ ಸಂದೇಶವನ್ನು ಸಾರುವ ಸಲುವಾಗಿಯೇ ಜನರ ಭಾವನೆಯಿಂದ ಪ್ರತಿಮೆ ರೂ​ಪು​ಗೊಂಡು ಸ್ಥಾಪನೆಯಾಗಿದೆ. 

ಮಾಗಡಿ ಕೆಂಪೇಗೌಡರ ಪರಿಕಲ್ಪನೆಯಲ್ಲಿ ಕಟ್ಟಿದ ಬೆಂಗಳೂರಿನ ಮಾದರಿ ಮತ್ತು ಅಭಿವೃದ್ಧಿಯ ಸಂತೃಪ್ತಿಯಿಂದಲೇ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆನಪು ಮಾಡಿಕೊಳ್ಳುವಂತೆ ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ಅನಾವರಣ ಮಾಡಿ ಐತಿಹಾಸಿಕ ಕಾರ್ಯಕ್ರಮದ ಮೂಲಕ ಅವರಿಗೆ ಗೌರವ ಸಮರ್ಪಿಸಿದ್ದೇವೆ ಎಂದು ತಿಳಿ​ಸಿದರು. ಕೆಂಪೇಗೌಡರ ಪ್ರತಿಮೆ ಸ್ಥಾಪನೆಗಾಗಿ ಕರ್ನಾಟಕದ 24 ಸಾವಿರ ಸ್ಥಳಗಳಿಂದ ಮೃತ್ತಿಕೆಯನ್ನು ಸಂಗ್ರಹಿಸಲಾಗಿದೆ. ಒಮ್ಮೆ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ದರ್ಶನ ಮಾಡಿ ಸ್ಪರ್ಶ ಮಾಡಿದರೆ ಕರ್ನಾಟಕದ ಪುಣ್ಯ ಸ್ಥಳಗಳನ್ನು ಸ್ಪರ್ಶಿಸಿದಂತೆ ಆಗುತ್ತದೆ. 

Ramanagara: ಮಾಗಡಿ ಪುರಸಭೆಯಲ್ಲಿ ಮುಖ್ಯಾಧಿಕಾರಿಯೇ ಇಲ್ಲ!

ತಾಲೂಕಿನ ಜನತೆ ನನಗೆ ನೀಡಿದ ಈ ಸನ್ಮಾನ ನಾನೆಂದೂ ಮರೆಯಲು ಸಾಧ್ಯವಿಲ್ಲ. ನನ್ನ ಉಸಿರಿರುವ ವರೆಗೂ ನಿಮಗೆ ಚಿರಋುಣಿಯಾಗಿ ನಿಮ್ಮ ಸೇವೆಗೆ ಸದಾ ಸಿದ್ದನಿರುವುದಾಗಿ ಅಶ್ವತ್ಥ ನಾರಾ​ಯಣ ಹೇಳಿ​ದ​ರು. ವಿಧಾನ ಪರಿಷತ್‌ ಸದಸ್ಯ ಅ.ದೇ​ವೇ​ಗೌಡ, ರಾಜ್ಯ ರೇಷ್ಮೆ ಉದ್ಯ​ಮ​ಗಳ ನಿಗಮ ಅಧ್ಯಕ್ಷ ಗೌತಮ್‌ಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಕುರುಬರಹಳ್ಳಿ ವೆಂಕಟೇಶ್‌, ನಗರಾಧ್ಯಕ್ಷ ಮುತ್ತುರಾಜು, ಬಗರ್‌ ಹುಕುಂ ಸಾಗುವಳಿ ಕಮಿಟಿ ಸದಸ್ಯ ಶಿವಮುತ್ತು, ಸೀಗೆಕೋಟೆ ರವಿ, ರಾಂಪುರ ಶಶಿಕಲಾ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎನ್‌.ಜಗನ್ನಾಥ್‌, ನಿರ್ದೇಶಕ ಪೈ ಆನಂದ್‌, ನಗರಸಭಾ ಸದಸ್ಯೆ ಮಾಲತಿ ಆನಂದ್‌ ಮತ್ತಿ​ತ​ರರು ಉಪಸ್ಥಿತರಿದ್ದರು.

ಅಪ​ರಾಧಿ ಹಿನ್ನೆ​ಲೆ​ಯುಳ್ಳವರಿಗೆ ಅವ​ಕಾಶ ಇಲ್ಲ: ನಮ್ಮದು ಜನರ ಪಕ್ಷ. ಅಪ​ರಾಧಿ ಹಿನ್ನೆ​ಲೆ ಇರು​ವಂತಹ ವ್ಯಕ್ತಿ​ಗ​ಳಿಗೆ ಪಕ್ಷ​ದಲ್ಲಿ ಅವ​ಕಾಶ ಇಲ್ಲ ಎಂದು ಜಿಲ್ಲಾ ಉಸ್ತು​ವಾ​ರಿ ಸಚಿವ ಅಶ್ವತ್ಥ ನಾರಾ​ಯಣ ಪ್ರತಿ​ಕ್ರಿ​ಯಿ​ಸಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಬಿಜೆಪಿ ಕೆಲವೊಂದು ತತ್ವ ಸಿದ್ದಾಂತಗಳನ್ನು ಇಟ್ಟುಕೊಂಡಿದೆ. ಜೆಡಿಎಸ್‌ ಪಕ್ಷದಲ್ಲಿ ಇರುವ ರೀತಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ರೌಡಿಗಳನ್ನು ಆಪರೇಷನ್‌ ಮಾಡಿ ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಡಿ.ಕೆ.​ಶಿ​ವ​ಕು​ಮಾರ್‌ ಹೇಳಿ​ಕೆಗೆ ಪ್ರತಿ​ಕ್ರಿ​ಯಿ​ಸಿದ ಸಚಿ​ವರು, ನಾವು ಯಾವುದೇ ಆಪರೇಷನ್‌ ಮಾಡುತ್ತಿ​ಲ್ಲ. ​ಇ​ರುವ ಜನ​ರೆ​ಲ್ಲರು ನಮ್ಮ ಪಕ್ಷಕ್ಕೆ ಸೇರಿ​ದ​ವರು. 

ಕಾಂಗ್ರೆಸ್‌ ನವರು ನಮ್ಮ​ವರು ಎಲ್ಲಿ​ದ್ದಾ​ರೆಂದು ಹುಡುಕಿಕೊಳ್ಳುವಂತಾ​ಗಿದೆ. ಕಾಂಗ್ರೆಸ್‌ ಜನ ಬೆಂಬಲ ಇಲ್ಲದ ಪಕ್ಷವಾಗಿದೆ ಎಂದು ಟೀಕಿ​ಸಿ​ದರು. ಬಿಜೆಪಿ ಜನರ ಉಳಿವಿಗಾಗಿ ಇರುವ ಹಾಗೂ ಜನರ ಭಾವ​ನೆ​ಗ​ಳಿಗೆ ಸ್ಪಂದಿ​ಸುವ ಪಕ್ಷ. ದೇಶ​ದಲ್ಲಿ ಕಾಂಗ್ರೆಸ್‌ ಯಾವ ಸ್ಥಿತಿ​ಯ​ಲ್ಲಿದೆ ಎಂಬುದು ಎಲ್ಲ​ರಿಗೂ ಗೊತ್ತಿದೆ. ಎಲ್ಲ ಕಡೆ​ಗ​ಳಲ್ಲಿ ಆ ಪಕ್ಷ ಅಧಿ​ಕಾರ ಕಳೆ​ದು​ಕೊ​ಳ್ಳು​ತ್ತಿ​ದೆ.ಅಂತಹ ಪಕ್ಷದ ಜೊತೆ ಯಾವುದೇ ನಾಯ​ಕ​ರಾ​ಗಲಿ ಅಥವಾ ಕಾರ್ಯ​ಕ​ರ್ತ​ರಾ​ಗಲಿ ಇರು​ವು​ದಿಲ್ಲ ಎಂದ​ರು. ಕನಕಪುರದಲ್ಲಿ ಬಿಜೆಪಿ ಪಕ್ಷ ಸಂಘಟನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಕೆಂಪೇಗೌಡರ ಸೇವೆ ಮಾಡಲು ಬಂದಿ​ದ್ದೇವೆ. ಕೆಂಪೇಗೌಡರ ಪ್ರತಿಮೆ ಅನಾವರಣದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸೋಣ ಎಂದಷ್ಟೆಉತ್ತ​ರಿ​ಸಿ​ದರು.

ಸಾತ​ನೂರು ತಾಲೂಕು ಕೇಂದ್ರ​ವ​ನ್ನಾಗಿ ಘೋಷಿಸಲು ಮನವಿ: ಸಾತನೂರನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾ​ಯಣ ಅವರಿಗೆ ಮನವಿ ಸಲ್ಲಿ​ಸಿ​ದರು. 1984 ಹಾಗೂ 2008ರಲ್ಲಿ ಡಿ.ಎಂ.ಉಂಡೇಕರ್‌ ನೇತೃತ್ವದ ಸಮಿತಿ, ಎಂಬಿ.ಪ್ರಕಾಶ್‌ ನೇತೃತ್ವದ ಸಮಿತಿ, ಗದ್ದಿಗೌಡ ಸಮಿತಿಗಳು ಸಾತನೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರೂ ಇವರ ವರದಿಗಳನ್ನು ಮೂಲೆಗುಂಪು ಮಾಡಿ ಪ್ರಸ್ತಾವನೆಯಲ್ಲೇ ಇಲ್ಲದ ಹಾರೋಹಳ್ಳಿಯನ್ನು ಸರ್ಕಾರ ನೂತನ ತಾಲೂಕಾಗಿ ಘೋಷಣೆ ಮಾಡಿ ಸಾತನೂರಿಗೆ ವಂಚನೆ ಮಾಡಿರುವುದಾಗಿ ಸಚಿವರಿಗೆ ವಿವರಿಸಿದರು. 

Ramanagara: ವಿಧಾ​ನ​ಸಭಾ ಚುನಾ​ವ​ಣೆಗೆ ಜಿಲ್ಲಾ​ಡ​ಳಿತದಿಂದ​ಲೂ ತಯಾರಿ

ಸಾತನೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್‌, ಮಾಜಿ ಶಾಸಕ ಕೆ.ಎನ್‌.ಶಿವಲಿಂಗೇಗೌಡರ ನೇತೃತ್ವದಲ್ಲೂ ಹೋರಾಟ ನಡೆದಿತ್ತು. ಈ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿಯೇ ಸಾತನೂರನ್ನು ತಾಲೂಕು ಕೇಂದ್ರವನ್ನಾಗಿ ಘೊಷಣೆ ಮಾಡಿ ಈ ಭಾ​ಗ​ದ ಬಹುಜನರ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾ​ಯಿ​ಸಿ​ದರು. ರಾಜ್ಯ ರೈತ ಸಂಘದ ಸಾತನೂರು ಘಟಕದ ರೈತ ಮುಖಂಡರಾದ ಕಾಡಹಳ್ಳಿ ಅನುಕುಮಾರ್‌, ಸ್ವಾಮಿಗೌಡ, ಶಿವಗೂಳಿಗೌಡ, ಭೂವಳ್ಳಿ ಪುಟ್ಟಸ್ವಾಮಿ, ಆಟೋ ಕುಮಾರ್‌, ಕೆಮ್ಮಾಳೆ ಮಾದೇಶ್‌ ಹಾಜರಿದ್ದರು.

Follow Us:
Download App:
  • android
  • ios