* ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಹರಿಬಿಟ್ಟ ಅಭಿಮಾನಿಗಳು* ಆನಂದ್‌ ಸಿಂಗ್‌ಗೆ ಉಪಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಗಳಿವೆ*  ಯಡಿಯೂರಪ್ಪ ಸಿಎಂ ಆಗಲು ಕಾರಣಕರ್ತರಾದ ಆನಂದ್‌ ಸಿಂಗ್‌ 

ಹೊಸಪೇಟೆ(ಜು.29): ವಿಜಯನಗರ ಜಿಲ್ಲೆ ರಚನೆಯ ರೂವಾರಿ ಆನಂದ್‌ ಸಿಂಗ್‌ ಅವರಿಗೆ ಡಿಸಿಎಂ ಸ್ಥಾನ ನೀಡಬೇಕೆಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆನಂದ್‌ ಸಿಂಗ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅವರ ಅಭಿಮಾನಿ ಹಾಗೂ ಬೆಂಬಲಿಗರು ಜಾಲತಾಣಗಳಲ್ಲಿ ಆನ್‌ಲೈನ್‌ ಅಭಿಯಾನ ಶುರು ಮಾಡಿದ್ದಾರೆ.

ಹೊರ ರಾಜ್ಯದವರಿಂದ ಕೊರೋನಾ ಹೆಚ್ಚಳ: ಸಚಿವ ಆನಂದ್‌ ಸಿಂಗ್‌

ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಆನಂದ್‌ ಸಿಂಗ್‌ ಕಾರಣಕರ್ತರಾಗಿದ್ದಾರೆ. ಮೊದಲು ಆನಂದ್‌ ಸಿಂಗ್‌ ರಾಜೀನಾಮೆ ಸಲ್ಲಿಸಿದ ಬಳಿಕ ಉಳಿದವರು ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗಿ ಯಡಿಯೂರಪ್ಪನವರಿಗೆ ಸುಲಭವಾಗಿ ಮುಖ್ಯಮಂತ್ರಿ ಗಾದಿ ಒಲಿದು ಬರಲು ಕಾರಣವಾಯಿತು. ಹೀಗಾಗಿ ಆನಂದ್‌ ಸಿಂಗ್‌ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಹರಿಬಿಟ್ಟಿದ್ದಾರೆ.

ನಾಲ್ಕು ಬಾರಿ ಶಾಸಕರು ಆಗಿರುವ ಆನಂದ್‌ ಸಿಂಗ್‌ ಅವರು ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರವಾಸೋದ್ಯಮ, ಅರಣ್ಯ, ಮೂಲ ಸೌಕರ್ಯ ಮತ್ತು ಹಜ್‌ ಮಂತ್ರಿಯಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಉಪಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಹೊಂದಿದ್ದು, ಅವರನ್ನು ಡಿಸಿಎಂ ಮಾಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.