ಹೊರ ರಾಜ್ಯದವರಿಂದ ಕೊರೋನಾ ಹೆಚ್ಚಳ: ಸಚಿವ ಆನಂದ್ ಸಿಂಗ್
ಕೊರೋನಾ ಹತೋಟಿಗಾಗಿ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ| ಬಲವಂತವಾಗಿ ನಿಯಮ ಪಾಲನೆ ಮಾಡಲು ಸೂಚಿಸಿದರೆ, ಪೊಲೀಸರೊಂದಿಗೆ ಜಗಳಕ್ಕೆ ಇಳಿಯುತ್ತಾರೆ| ಸರ್ಕಾರ ನಿಯಮಗಳನ್ನು ಜಾರಿ ತರುತ್ತದೆ. ಆದರೆ, ಸಾರ್ವಜನಿಕರು ನಿಯಮ ಪಾಲನೆ ಮಾಡುತ್ತಿಲ್ಲ| ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ:ಆನಂದ್ ಸಿಂಗ್|
ಹೊಸಪೇಟೆ(ಮಾ.15): ಪ್ರವಾಸಿ ತಾಣವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಇತರೆ ರಾಜ್ಯದ ಜನರು ಹೊಸಪೇಟೆಗೆ ಬರುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮೂಲ ಸೌಕರ್ಯ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಲಸಿಕೆ ಬಂದಿದೆ. ಸಾರ್ವಜನಿಕರು ಕೋವಿಡ್ ಬಗ್ಗೆ ಆತಂಕ ಪಡುವುದು ಬೇಡ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. ಕೊರೋನಾ ಹತೋಟಿಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಬಲವಂತವಾಗಿ ನಿಯಮ ಪಾಲನೆ ಮಾಡಲು ಸೂಚಿಸಿದರೆ, ಪೊಲೀಸರೊಂದಿಗೆ ಜಗಳಕ್ಕೆ ಇಳಿಯುತ್ತಾರೆ. ಸರ್ಕಾರ ನಿಯಮಗಳನ್ನು ಜಾರಿ ತರುತ್ತದೆ. ಆದರೆ, ಸಾರ್ವಜನಿಕರು ನಿಯಮ ಪಾಲನೆ ಮಾಡುತ್ತಿಲ್ಲ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಪಾಲನೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದರು.
ಬಳ್ಳಾರಿ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪೊಲೀಸ್ ಪೇದೆ
ದಿಲ್ಲಿ ಹೋರಾಟ:
ದಿಲ್ಲಿ ರೈತರ ಹೋರಾಟದಿಂದ ಮಧ್ಯವರ್ತಿಗಳಿಗೆ ಅನುಕೂಲವಾಗಲಿದೆ. ಅದು ಧರಣಿ ಕುಳಿತ ರೈತರಿಗೆ ಅನುಕೂಲವಾಗುವುದಿಲ್ಲ. ಅದು ಅವರಿಗೆ ಗೊತ್ತಿಲ್ಲ. ಇಂತಹ ವಿಚಾರಗಳು ಹೊರಗಡೆ ಬರಬೇಕಿದೆ ಎಂದರು.