ದಾವಣಗೆರೆ [ಜ.22]:  ಮತ್ತೋರ್ವ ಯುವಕನೊಂದಿಗೆ ನಿಶ್ಚಿತಾರ್ಥವಾಗಿದ್ದಕ್ಕೆ ವಿರೋಧಿಸಿದ್ದರಿಂದ ಪ್ರಿಯತಮೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ  ಯುವಕ ಸಾವಿಗೀಡಾಗಿದ್ದಾನೆ. 

ಜನವರಿ 20 ರಂದು ಬೆಂಕಿ ಹಚ್ಚಿದ್ದು,  ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಪರಸಪ್ಪ [35] ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ವಿದೇಶಿ ಮಹಿಳೆ ಬೆತ್ತಲು ಮಾಡಿದ್ದ ಮೂವರು ಅಪ್ರಾಪ್ತರು ಅರೆಸ್ಟ್...

ದಾವಣಗೆರೆಯ ಯುವಕ ಪರಸಪ್ಪ ಬಳ್ಳಾರಿ ಜಿಲ್ಲೆಯ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ಆಕೆಗೆ ಬೇರೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇದಕ್ಕೆ ಪರಸಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದ. 

ಒಬ್ಬಳ ಮೇಲೆ ಇಬ್ಬರಿಗೆ ಲವ್ : ಕೊಲೆಯಲ್ಲಿ ಅಂತ್ಯವಾಯ್ತು ಪ್ರೇಮ ಪ್ರಕರಣ...

ಈತನ ವಿರೋಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ಜಗಳವಾಗಿತ್ತು.  ಇದೇ ವೇಳೆ ಸೀಮೆ ಎಣ್ಣೆ ಸುರಿದು ಜನವರಿ 20 ರಂದು ಪರಸಪ್ಪನಿಗೆ ಬೆಂಕಿ ಹಚ್ಚಿದ್ದಳು. 

ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪರಸಪ್ಪನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪರಸಪ್ಪ ಇಂದು ಮೃತಪಟ್ಟಿದ್ದಾನೆ. 

ಅರಸೀಕೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.