Asianet Suvarna News Asianet Suvarna News

ವಿದೇಶಿ ಮಹಿಳೆ ಬೆತ್ತಲು ಮಾಡಿದ್ದ ಮೂವರು ಅಪ್ರಾಪ್ತರು ಅರೆಸ್ಟ್

ವಿದೇಶಿ ಮಹಿಳೆಯನ್ನು ಬೆತ್ತಲುಗೊಳಿಸಿ ದೋಚಿದ್ದ  ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. 

Foreign Woman Robbery Case 3 Minors Arrested in Doddaballapur
Author
Bengaluru, First Published Jan 22, 2020, 12:19 PM IST
  • Facebook
  • Twitter
  • Whatsapp

ದೊಡ್ಡಬಳ್ಳಾಪುರ [ಜ.22]: ವಿದೇಶಿ ಮಹಿಳೆಯನ್ನು ಬೆತ್ತಲೆಗೊಳಿಸಿ ತಾಲೂಕಿನ ಆಲಹಳ್ಳಿಯ ರಸ್ತೆ ಬದಿಯಲ್ಲಿನ ತೋಟದ ಮನೆ ಸಮೀಪ ಬಿಟ್ಟು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂಧಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಜ.17ರಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಆಲಹಳ್ಳಿ ಗ್ರಾಮದ ತೋಟದ ಮನೆಗೆ ಬೆತ್ತಲಾಗಿ ಮಹಿಳೆಯೊಬ್ಬರು ಬಂದಿರುವ ಬಗ್ಗೆ ತೋಟದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಹಿಳೆಯನ್ನು ರಕ್ಷಿಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ್ದರು.

ಕಾರ್ಯಕ್ರಮದ ವಿಡಿಯೋ ಎಂದು ವಿದ್ಯಾರ್ಥಿನಿಗೆ ಸೆಕ್ಸ್ ವಿಡಿಯೋ ತೋರಿಸಿದ ಕಾಮುಕ ಶಿಕ್ಷಕರು..

ವಿದೇಶಿ ಮಹಿಳೆ ನೀಡಿರುವ ಮಾಹಿತಿಯಂತೆ 5 ದಿನಗಳ ಹಿಂದೆ ದೆಹಲಿಯಿಂದ ಬೆಂಗಳೂರಿಗೆ ಮೂತ್ರಪಿಂಡದ ಚಿಕಿತ್ಸೆ ಪಡೆಯಲು ನನ್ನ ಪತಿಯ ಸೂಚನೆ ಮೇರೆಗೆ ಬಂದಿದ್ದು, ಬೆಂಗಳೂರಿನ ಚಿಕಿತ್ಸೆ ಪಡೆಯುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ಪತಿ ತುರ್ತು ಕೆಲಸ ನಿಮಿತ್ತ ಸ್ವದೇಶಕ್ಕೆ ಹೋಗುವಾಗ ನೈಜಿರಿಯಾದ ಒಬ್ಬಾಕೆಯನ್ನು ಪರಿಚಯಿಸಿ ಇವರ ಜೊತೆ ಇರುವಂತೆ ತಿಳಿಸಿ ಹೋಗಿದ್ದರು.

ಹೆಣ್ಣು ಮಕ್ಕಳ ರಕ್ಷಣೆಗೆ ಹೊಸ ಪಡೆ: SP ರವಿ ಡಿ.ಚನ್ನಣ್ಣನವರ್‌...

ಜ.16ರಂದು ರಾತ್ರಿ 10 ಗಂಟೆ ಸಮಯದಲ್ಲಿ ಬೆಂಗಳೂರಿನ ಕಮ್ಮನಹಳ್ಳಿ ಬಳಿಯ ಒಂದು ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಬೆಂಗಳೂರಿನ ನವಜ್ಯೋತಿ ಸ್ಟ್ರಿಟ್‌ಗೆ ಹೋಗಲು ಕ್ಯಾಬ್‌ಬುಕ್‌ ಮಾಡಿಕೊಂಡು ಹೊರಟೆ. ಸುಮಾರು ಐದಾರು ಕಿ.ಮೀ. ದೂರ ಹೋಗುತ್ತಿದ್ದಂತೆ ಕ್ಯಾಬ್‌ ಚಾಲಕ ದಾರಿ ಮಧ್ಯೆ ಕ್ಯಾಬ್‌ ನಿಲ್ಲಿಸಿ ಮತ್ತೆ ಮೂರು ಜನರನ್ನು ಕಾರಿಗೆ ಹತ್ತಿಸಿಕೊಂಡ. ಕಾರಿನಲ್ಲಿದ್ದ ಮೂರು ಜನ ಅಪರಿಚಿತರು ಚಾಕು ತೋರಿಸಿ ಕುತ್ತಿಗೆ ಹಿಡಿದುಕೊಂಡು ಎಳೆದಾಡಿ ಮೊಬೈಲ್‌, ಹಣದ ಪರ್ಸ್‌, ಚಿನ್ನಾಭರಣ ಕಿತ್ತುಕೊಂಡು ಮೈ ಮೇಲಿನ ಬಟ್ಟೆಯನ್ನು ಬಿಚ್ಚಿ, ಬರಿ ಮೈಯಲ್ಲಿ ಬಿಟ್ಟು ಹೋಗಿದ್ದಾರೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಾಗಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Follow Us:
Download App:
  • android
  • ios