MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ರಾಜ್ಯದಲ್ಲಿ ವರುಣನ ಅಬ್ಬರ: ಬಾಳೆ ಬೆಳೆ ನಾಶ, ಸಿಡಿಲು, ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತ

ರಾಜ್ಯದಲ್ಲಿ ವರುಣನ ಅಬ್ಬರ: ಬಾಳೆ ಬೆಳೆ ನಾಶ, ಸಿಡಿಲು, ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತ

ರಾಜ್ಯದ ಧಾರವಾಡ, ಗದಗ, ರಾಯಚೂರು, ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಈ ಭಾರಿ ಮಳೆಯಿಂದಾಗಿ ಹಲವೆಡೆ ಬೆಳೆ ನಾಶವಾಗಿದ್ದು, ವಿಶೇಷವಾಗಿ ಬಾಳೆ ಬೆಳೆಗಾರರಿಗೆ ಅಪಾರ ನಷ್ಟವಾಗಿದೆ ಮತ್ತು ಸಿಡಿಲು, ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

2 Min read
Author : Kannadaprabha News
Published : Apr 22 2026, 08:52 AM IST
Share this Photo Gallery
  • FB
  • TW
  • Linkdin
  • Whatsapp
15
4 ಜಿಲ್ಲೆಗಳಲ್ಲಿ ಮಳೆ
Image Credit : Asianet News

4 ಜಿಲ್ಲೆಗಳಲ್ಲಿ ಮಳೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಧಾರವಾಡ, ಗದಗ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಬಿರುಗಾಳಿ, ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಆರಂಭಗೊಂಡ ಮಳೆ 1 ಗಂಟೆಗೂ ಹೆಚ್ಚು ಕಾಲ ಸುರಿಯಿತು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಂಜೆಯ ವೇಳೆ ಸುಮಾರು ಅರ್ಧ ಗಂಟೆ ಆಲಿಕಲ್ಲು ಮಳೆ ಸುರಿಯಿತು. 

ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿಗಳಲ್ಲಿಯೂ ಮಳೆಯಾಗಿದ್ದು, ಕೆಲವೆಡೆ ಬಾಳೆ ಬೆಳೆ ನಾಶವಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ಸಿಡಿಲಿಗೆ ತೆಂಗಿನಮರವೊಂದು ಸುಟ್ಟು ಭಸ್ಮವಾಗಿದೆ.

25
ಮಳೆಗೆ 13 ಎಕರೆ ಬಾಳೆ ನಾಶ
Image Credit : Asianet News

ಮಳೆಗೆ 13 ಎಕರೆ ಬಾಳೆ ನಾಶ

ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಮಂಗಳವಾರ ಸಂಜೆ ಬೀಸಿದ ಭಾರಿ ಗಾಳಿ, ಮಳೆಗೆ ಬಸವನಗೌಡ ದೇಸಾಯಿ ಎಂಬುವವರ 7 ಎಕರೆ ಹಾಗೂ ನಿರಂಜನಗೌಡ ಕೊಟ್ರುಗೌಡ್ರು ಎಂಬುವವರ 6 ಎಕರೆ ಬಾಳೆ ಹಾಗೂ 4 ಎಕರೆ ಪಪ್ಪಾಯಿ ತೋಟ ಸಂಪೂರ್ಣವಾಗಿ ನೆಲಸಮವಾಗಿದ್ದು, ಬೆಳೆಗಾರರಿಗೆ ಭಾರಿ ನಷ್ಟವಾಗಿದೆ. 

ಇನ್ನೇನು ಕಟಾವಿಗೆ ಬಂದಿದ್ದು, ಬಾಳೆ ಫಸಲು ಸಂಪೂರ್ಣ ನೆಲಕಚ್ಚಿದ್ದು, ರೈತರಿಂದ ನೋಡಲು ಸಾಧ್ಯವಾಗದಂತಾಗಿದೆ. ಈಗಾಗಲೇ ತೋಟಗಾರಿಕಾ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬೆಳೆಹಾನಿ ನಷ್ಟಕ್ಕೆ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

Related Articles

Related image1
Bengaluru: ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್
Related image2
ಬಾಲಕನ ಸಾವಿಗೆ ಕಾರಣ ಫುಡ್ ಪಾಯ್ಸನ್ ಅಲ್ಲ, ಹಾವು ಕಚ್ಚಿ ಸತ್ತಿರೋದು: ಪೊಲೀಸರ ವರದಿ ತಳ್ಳಿ ಹಾಕಿದ ವೈದ್ಯರು
35
ಸಂಡೂರು ತಾಲೂಕಿನ ವಿವಿಧೆಡೆ ಆಲಿಕಲ್ಲು ಮಳೆ
Image Credit : Asianet News

ಸಂಡೂರು ತಾಲೂಕಿನ ವಿವಿಧೆಡೆ ಆಲಿಕಲ್ಲು ಮಳೆ

ಸಂಡೂರು ಸೇರಿದಂತೆ ತಾಲೂಕಿನ ಸುಲ್ತಾನಾಪುರ, ಕೃಷ್ಣಾನಗರ, ಚಿಕ್ಕಂತಾಪುರ, ತಾರಾನಗರ ಮುಂತಾದೆಡೆ ಮಂಗಳವಾರ ಸಂಜೆ ಗುಡುಗು, ಸಿಡಿಲು, ಗಾಳಿ ಸಮೇತ ಆಲಿಕಲ್ಲು ಮಳೆಯಾಗಿದೆ. ಮಳೆ ಸುರಿದಿದ್ದರಿಂದ ವಾತಾವರಣ ತಂಪಾಯಿತು. ಗಾಳಿ, ಮಳೆಗೆ ಸಂಡೂರು-ಹೊಸಪೇಟೆ ರಸ್ತೆಯಲ್ಲಿ ಹಾಗೂ ಸುಲ್ತಾನಾಪುರದ ಬಳಿಯಲ್ಲಿ ಮರಗಳು ನೆಲಕ್ಕುರಳಿದ್ದು ಕಂಡು ಬಂತು.

45
ಗದಗ ಜಿಲ್ಲಾದ್ಯಂತ ವರುಣನ ಆರ್ಭಟ
Image Credit : Asianet News

ಗದಗ ಜಿಲ್ಲಾದ್ಯಂತ ವರುಣನ ಆರ್ಭಟ

ಜಿಲ್ಲೆಯ ಹಲವೆಡೆ ಮಂಗಳವಾರ ಸಾಯಂಕಾಲ ಗುಡುಗು, ಸಿಡಿಲು ಸಹಿತ ರಭಸದ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಮುಂಡರಗಿ ತಾಲೂಕಿನಲ್ಲಿ ಸಂಜೆಯಿಂದಲೇ ಗುಡುಗು ಸಿಡಿಲಿನ ಅಬ್ಬರ ಜೋರಾಗಿದ್ದು, ಬಳಿಕ ಮಳೆ ಪ್ರಾರಂಭವಾಗಿದೆ. 

ಇತ್ತ ಡಂಬಳ ಗ್ರಾಮದಲ್ಲಿಯೂ ರಭಸದ ಮಳೆ ಸುರಿದಿದೆ. ರೋಣ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹತ್ತು ನಿಮಿಷ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ​ಗಜೇಂದ್ರಗಡದಲ್ಲೂ ರಭಸದ ಮಳೆ ಬಿದ್ದಿದೆ.

ಇದನ್ನೂ ಓದಿ: Sabarimala women entry case: ‘ದೇವರನ್ನು ಮುಟ್ಟಲು ಅವಕಾಶವಿಲ್ಲದ ಭಕ್ತರ ರಕ್ಷಣೆಗೆ ಸಂವಿಧಾನ ಬರುವುದಿಲ್ಲವೇ?’ ಅರ್ಚಕರಿಗೆ ಸುಪ್ರೀಂ ಪ್ರಶ್ನೆ

55
ಭಾರಿ ಮಳೆಗೆ ತತ್ತರಿಸಿದ ಜನತೆ
Image Credit : Asianet News

ಭಾರಿ ಮಳೆಗೆ ತತ್ತರಿಸಿದ ಜನತೆ

ಗುಡುಗು- ಸಿಡಿಲಿನ ಅರ್ಭಟದೊಂದಿಗೆ ಆರಂಭಗೊಂಡ ಮಳೆ ಅರ್ಧ ಗಂಟೆಗೂ ಹೆಚ್ಚುಕಾಲ ಸುರಿಯಿತು. ಈ ಮೂಲಕ ನಗರದಲ್ಲಿ ಕೊಂಚ ತಂಪನ್ನೆರೆಯಿತು. ಆದರೆ, ಹಲವೆಡೆ ಈ ಮಳೆ ಅ‍ವಾಂತರ ಸೃಷ್ಟಿಸಿತು. ನಗರದ ಕೋಯಿನ್ ರಸ್ತೆ, ಮಹಾವೀರ ಗಲ್ಲಿ, ದಾಜೀಬಾನಪೇಟೆ, ಕಮರಿಪೇಟೆ, ಗಣೇಶ ನಗರ ಸೇರಿದಂತೆ ನಗರದ ಬಹುತೇಕ ಪ್ರದೇಶದ ಮುಖ್ಯರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿತು. ಶ್ರೀಸಿದ್ಧಾರೂಢ ಸ್ವಾಮಿ ಮಠದ ಹಿಂಭಾಗ ಸೇರಿದಂತೆ ಆನಂದ ನಗರ, ಹಳೇ ಹುಬ್ಬಳ್ಳಿಯ ಹಲವೆಡೆ 10ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಇದನ್ನೂ ಓದಿ: Belagavi: ಸೀರೆ ಬದಲು ನೈಟಿ ಧರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಕ್ರೂರ ಪತಿರಾಯ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಮಾನ್ಸೂನ್
ಮಳೆ
ಕರ್ನಾಟಕ ಮಳೆ
ಬೇಸಿಗೆ

Latest Videos
Recommended Stories
Recommended image1
Karnataka News Live: ರಾಜ್ಯದಲ್ಲಿ ವರುಣನ ಅಬ್ಬರ - ಬಾಳೆ ಬೆಳೆ ನಾಶ, ಸಿಡಿಲು, ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತ
Recommended image2
1 Year After Pahalgam Terror Attack : ಪಹಲ್ಗಾಂ ಆಘಾತದಿಂದ ಇನ್ನೂಹೊರಬರದ ಮಂಜುನಾಥ್‌ ಕುಟುಂಬ, ಪತ್ನಿ ಪಲ್ಲವಿ ಈಗ ಹೇಗಿದ್ದಾರೆ?
Recommended image3
ತಂದೆ, ತಾಯಿಗೆ ನಾನು ಒಳ್ಳೆ ಮಗ ಆಗಲಿಲ್ಲ, ಈಗ ಹೆಸರು ಗಳಿಸಲೂ ಆಗುತ್ತಿಲ್ಲ: ನಲಪಾಡ್‌
Related Stories
Recommended image1
Bengaluru: ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್
Recommended image2
ಬಾಲಕನ ಸಾವಿಗೆ ಕಾರಣ ಫುಡ್ ಪಾಯ್ಸನ್ ಅಲ್ಲ, ಹಾವು ಕಚ್ಚಿ ಸತ್ತಿರೋದು: ಪೊಲೀಸರ ವರದಿ ತಳ್ಳಿ ಹಾಕಿದ ವೈದ್ಯರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved