ಕಲಬುರಗಿ: ಅತ್ತೆ ಬೇಗ ಸಾಯಲೆಂದು ಘತ್ತರಗಿ ಭಾಗ್ಯವಂತಿ ದೇವಿಗೆ ಹರಕೆ ಹೊತ್ತ ಸೊಸೆ!
ದೇವಸ್ಥಾನದ ಹುಂಡಿಯಲ್ಲಿನ ಇಪ್ಪತ್ತು ರೂಪಾಯಿ ನೋಟಿನ ಮೇಲೆ ಅತ್ತೆ ಸಾವಿನ ಹರಕೆಯ ಕೈ ಬರಹ ಕಂಡು ಬಂದಿದೆ. ಅತ್ತೆ ಸಾಯಲೆಂದು ಸೊಸೆ ಹರಕೆ ಹೊತ್ತು 20 ರೂ, ನೋಟಿನ ಮೇಲೆ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. 20 ರೂ. ನೋಟಿನ ಮೇಲೆ ಬರೆದು ಭಾಗ್ಯವಂತಿ ದೇವಿಯ ಹುಂಡಿಗೆ ಸೊಸೆ ಹಾಕಿರುವ ಶಂಕೆ ವ್ಯಕ್ತವಾಗಿದೆ.
ಕಲಬುರಗಿ(ಡಿ.27): ನಮ್ಮ ಅತ್ತೆ ಬೇಗ ಸಾಯಬೇಕು ಅಂತ ಸೊಸೆ ಹರಕೆ ಹೊತ್ತ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿ ಇಂದು(ಶುಕ್ರವಾರ) ನಡೆದಿದೆ. ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ ಹುಂಡಿಗೆ ಕಾಣಿಕೆ
ದೇವಸ್ಥಾನದ ಹುಂಡಿಯಲ್ಲಿನ ಇಪ್ಪತ್ತು ರೂಪಾಯಿ ನೋಟಿನ ಮೇಲೆ ಅತ್ತೆ ಸಾವಿನ ಹರಕೆಯ ಕೈ ಬರಹ ಕಂಡು ಬಂದಿದೆ.
ಅತ್ತೆ ಸಾಯಲೆಂದು ಸೊಸೆ ಹರಕೆ ಹೊತ್ತು 20 ರೂ, ನೋಟಿನ ಮೇಲೆ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. 20 ರೂ. ನೋಟಿನ ಮೇಲೆ ಬರೆದು ಭಾಗ್ಯವಂತಿ ದೇವಿಯ ಹುಂಡಿಗೆ ಸೊಸೆ ಹಾಕಿರುವ ಶಂಕೆ ವ್ಯಕ್ತವಾಗಿದೆ.
ದರ್ಶನ್‌ನ ಕಾಪಾಡಿದ ಅಸ್ಸಾಂನ 'ಕಾಮಾಕ್ಯ', ಇಲ್ಲಿ ಹರಕೆ ಹೊತ್ತವರಿಗೆ ಸೋಲೇ ಇಲ್ಲ
ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ ಅತ್ತೆ ಸಾಯಲೆಂದು ಬರೆದ ನೋಟು ಪತ್ತೆಯಾಗಿದೆ. ಹುಂಡಿಯಲ್ಲಿ 60 ಲಕ್ಷ ನಗದು ಒಂದು ಕೆಜಿ ಬೆಳ್ಳಿ, 200 ಚಿನ್ನಾಭರಣ, ಹುಂಡಿಯಲ್ಲಿ ಜಮೆಯಾಗಿದೆ.
ನಿಮ್ಮ ಅಜ್ಜ- ಅಜ್ಜಿ ಹೇಳಿಕೊಂಡ ಹರಕೆ ತೀರಿಸದಿದ್ದರೆ ನಿಮ್ಮನ್ನೂ ಕಾಡಬಹುದು! ಪರಿಹಾರವೇನು?
ಹೇಗೆ ಹಿರಿಯರು ಮಾಡಿಟ್ಟ ಆಸ್ತಿಗೆ ನೀವು ಹಕ್ಕುದಾರರೋ, ಹಾಗೇ ಅವರು ಮಾಡಿದ ಸಾಲಕ್ಕೂ ನೀವು ಹಕ್ಕುದಾರರು ತಾನೆ? ಹಾಗೆಯೇ ಹರಕೆಯೂ ಒಂದು ಸಾಲವೇ. ಇದನ್ನು ಅರ್ಥ ಮಾಡಿಕೊಂಡು ವರ್ತಿಸಿ. ಮದುವೆ ತಡೆ ನಿವಾರಣೆ, ಉತ್ತಮ ಕೆಲಸ ಸಿಗಲಿ, ಆರೋಗ್ಯ ಉತ್ತಮವಾಗಲಿ, ಹಣಕಾಸಿನ ಅಡಚಣೆ ನಿವಾರಣೆ ಆಗಲಿ, ಮನೆ ಕಟ್ಟುವುದಕ್ಕೆ ಅಡಚಣೆ ಇದ್ದಲ್ಲಿ ತೊಂದರೆ ಹೋಗಲಿ ಹೀಗೆ ಕೆಲವರು ಹರಕೆ ಕಟ್ಟಿಕೊಳ್ಳುತ್ತಾರೆ. ನನಗೆ ಇಂತಹ ಅನುಕೂಲ ಆದಲ್ಲಿ ಇಂಥ ಸೇವೆಯೊಂದನ್ನು ಮಾಡಿಸುತ್ತೇನೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಕೆಲವರು ಮುಡಿಪು ಕಟ್ಟಿಕೊಳ್ಳುತ್ತಾರೆ. ಹರಕೆ ಅಥವಾ ಮುಡಿಪು ಹೊತ್ತುಕೊಂಡು, ಆ ಕೆಲಸ ಯಶಸ್ವಿಯಾಗಿ ಆದ ನಂತರ, ಹರಕೆ ಹೊತ್ತ ಫಲ ಸಿಕ್ಕ ನಂತರ, ಹರಕೆ ತೀರಿಸದೇ ಹೋದಲ್ಲಿ ಏನಾಗುತ್ತದೆ?
ಮೊದಲನೆಯದಾಗಿ, ಹರಕೆ ತೀರಿಸದಿದ್ದರೆ ವಾಕ್ ದೋಷ ಬರುತ್ತದೆ. ಅಂದರೆ ಸುಳ್ಳು ಹೇಳಿದ ತಪ್ಪು ಮಾಡಿದವರಾಗುತ್ತೀರಿ. ಹರಕೆ ಮೂಲಕ ಪಡೆದ ಫಲ ನಾಶ ಆಗುತ್ತದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬಹಳ ಜನ ಅರಿಶಿಣದ ಬಟ್ಟೆಯಲ್ಲಿ ಹನ್ನೊಂದು ರುಪಾಯಿ ಮುಡಿಪು ಕಟ್ಟಿರುತ್ತಾರೆ. ಮನೆ ದೇವರಿಗೆ ಹರಕೆ ಹೊತ್ತಿರುತ್ತಾರೆ. ಅದನ್ನು ಪೂರ್ಣ ಮಾಡದಿದ್ದಲ್ಲಿ ದಾಂಪತ್ಯ ಜೀವನದಲ್ಲಿ ಸುಖ ಇರುವುದಿಲ್ಲ. ಮನೆ ಕಟ್ಟಬೇಕು ಅಂದರೆ ಅಡಚಣೆ ಆಗುತ್ತಿರುತ್ತದೆ. ಮದುವೆ- ಸಂತಾನ ವಿಳಂಬ, ಪದೇಪದೇ ಆರೋಗ್ಯ ಸಮಸ್ಯೆ ಆಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಡಚಣೆಯಾಗುತ್ತದೆ.
ಎಷ್ಟೋ ಮಂದಿಗೆ ಮನೆ ಬಾಡಿಗೆ ಕಟ್ಟುವುದಕ್ಕೆ ಸಹ ತೊಂದರೆ ಅನುಭವಿಸುವಂತೆ ಆಗುತ್ತದೆ. ಇನ್ನೂ ಕೆಲವು ಸಲ ಹರಕೆ ಹೊತ್ತು ಮರೆತು ಬಿಟ್ಟಿರುವ ಸಾಧ್ಯತೆ ಇರುತ್ತದೆ. ತಂದೆ-ತಾಯಿ ಮಕ್ಕಳ ಪರವಾಗಿ ಹರಕೆ ಹೊತ್ತಿರುತ್ತಾರೆ. ಅಥವಾ ನಾವೇ ಹರಕೆ ಹೊತ್ತು ಮರೆತಿರುತ್ತೇವೆ. ಅಂಥ ಸಂದರ್ಭದಲ್ಲಿ ವಿಶೇಷ ಪೂಜೆಯೊಂದನ್ನು ಮಾಡಿಸಬೇಕಾಗುತ್ತದೆ. ಹಾಗೆ ಪೂಜೆ ಮಾಡಿಸಿ, ಆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ. ನಾವು ಏನು ಹರಕೆ ಹೊತ್ತುಕೊಂಡಿದ್ದೆವೋ ಗೊತ್ತಿಲ್ಲ. ನಮ್ಮ ತಪ್ಪುಗಳಿದ್ದಲ್ಲಿ ಕ್ಷಮಿಸಿ, ಒಳ್ಳೆಯದನ್ನು ಮಾಡು ಎಂದು ಪ್ರಾರ್ಥಿಸಿ.
Ballari: ಕನಕ ದುರ್ಗಮ್ಮನಿಗೆ ಕಂಡ ವಿಜಯಲಕ್ಷ್ಮೀಯ ಕಣ್ಣೀರು, ಫಲಿಸಿದ ಪ್ರಾರ್ಥನೆ
ಉದ್ಯೋಗ ಸಿಕ್ಕ ಮೇಲೆ ಹರಕೆ ತೀರಿಸದೆ ಹೋದರೆ ಮಾಲೀಕರ ಜತೆಗೆ ಜಗಳ ಆಗಬಹುದು. ಕೆಲಸಗಾರರ ಜತೆ ಜಗಳ ಆಗುತ್ತದೆ. ಅನ್ಯೋನ್ಯತೆ ಇರುವುದಿಲ್ಲ. ಸರಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸ-ಕಾರ್ಯದಲ್ಲಿ ಅನುಕೂಲ ಆಗುವುದಿಲ್ಲ. ಅಕಸ್ಮಾತ್ ಸರಕಾರಿ ಕೆಲಸ ಸಿಕ್ಕಿದ್ದರೂ ಅದರಲ್ಲಿ ನಾನಾ ಬಗೆಯ ತೊಂದರೆ ಅನುಭವಿಸಬೇಕಾಗುತ್ತದೆ. ಇನ್ನು ವ್ಯಾಪಾರ-ವ್ಯವಹಾರ ಮಾಡುವವರಿಗೆ ಚೆನ್ನಾಗಿರುವ ಹಣಕಾಸಿನ ಆದಾಯ ಏಕಾಏಕಿ ಕುಸಿದು ಹೋಗುತ್ತದೆ. ಎಷ್ಟೋ ಮಂದಿ ಬೀದಿಗೆ ಬಂದು ಭಿಡುತ್ತಾರೆ. ಸಾಲ ಜಾಸ್ತಿ ಆಗುತ್ತದೆ. ಹರಕೆ ತೀರಿಸದಿದ್ದಲ್ಲಿ ಇಂಥ ಹಲವಾರು ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಆದ್ದರಿಂದ ಮೊದಲ ಸಲಹೆ ಏನೆಂದರೆ, ಸಿಕ್ಕಸಿಕ್ಕದ್ದಕ್ಕೆಲ್ಲ ಹರಕೆ ಹೊರಲು ಹೋಗಬೇಡಿ. ಹರಕೆ ಹೊತ್ತುಕೊಂಡಿರಾ? ಅದರ ಫಲ ಸಿಕ್ಕಿತಾ? ಆ ಕೂಡಲೇ ಹರಕೆ ತೀರಿಸಿ. ಇದು ಬ್ಯಾಂಕ್ ಸಾಲ ಇದ್ದಂತೆ. ನೀವು ಮನೆ ಕಟ್ಟುವುದಕ್ಕೋ, ವಿದ್ಯಾಭ್ಯಾಸಕ್ಕೋ ಮತ್ಯಾವುದಕ್ಕೋ ಸಾಲ ಪಡೆದಿದ್ದರೆ ಅದನ್ನು ತೀರಿಸಲೇಬೇಕು. ಹರಕೆ ವಿಚಾರಕ್ಕೆ ಬಂದರೆ ದೇವರು ಕೂಡ ಬ್ಯಾಂಕ್ ಇದ್ದಂತೆ. ನೀವಾಗಿಯೇ ಒಂದು ಹರಕೆ ಹೊತ್ತು, ಅದರ ಫಲವನ್ನು ಪಡೆದ ನಂತರ ಕಡ್ಡಾಯವಾಗಿ ತೀರಿಸಲೇಬೇಕು. ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಹರಕೆ ತೀರಿಸುವುದೊಂದೇ ಅದಕ್ಕೆ ಇರುವ ಪರಿಹಾರ. ಹಾಗೇ ನಿಮ್ಮ ಹಿರಿಯರು ಮಾಡಿ ಪೂರೈಸದೇ ಇರುವ ಹರಕೆಗಳು ಕೂಡ ನಿಮ್ಮ ಮೇಲೆ ದುಷ್ಫಲ ಬೀರುತ್ತವೆ.