ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪವಿತ್ರಾ ಗೌಡ ಸೇರಿದಂತೆ ಉಳಿದ 7 ಮಂದಿ ಆರೋಪಿಗಳಿಗೂ ಜಾಮೀನು ದೊರೆತಿದೆ. ದರ್ಶನ್ ಬಿಡುಗಡೆಗಾಗಿ ವಿಜಯಲಕ್ಷ್ಮೀ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದರು.
ಬೆಂಗಳೂರು (ಡಿ.13): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬ್ರಹನ್ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ನಟ ದರ್ಶನ್‌ಗೆ ಕೊನೆಗೂ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. ಇಲ್ಲಿಯವರೆಗೂ ಮಧ್ಯಂತರ ಜಾಮೀನಿನ ಆತಂಕದಲ್ಲಿದ್ದ ದರ್ಶನ್‌ಗೆ ಕೊನೆಗೂ ಕೋರ್ಟ್ ಪೂರ್ಣ ಪ್ರಮಾಣದ ಜಾಮೀನು ಮಂಜೂರು ಮಾಡಿದೆ. ದರ್ಶನ್ ಮಾತ್ರವಲ್ಲದೆ, ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿದ್ದ ಪವಿತ್ರಾ ಗೌಡ ಸೇರಿದಂತೆ ಉಳಿದ 7 ಮಂದಿ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದೆ. ಪತಿಗೆ ಜಾಮೀನು ಸಿಕ್ಕ ಬೆನ್ನಲ್ಲಿಯೇ ವಿಜಯಲಕ್ಷ್ಮೀ ದರ್ಶನ್ ತಮ್ಮ ಇನ್ಸ್‌ಟಾಗ್ರಾಮ್ ಸ್ಟೋರಿಯಲ್ಲಿ ದೇವರಿಗೆ ಹೂವು ಅರ್ಪಿಸಿದಂತೆ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ದೇವರನ್ನು ನೆನಪಿಸಿಕೊಂಡಿದ್ದಾರೆ. ದರ್ಶನ್ ಜೈಲಿನಿಂದ ಹೊರಬರಬೇಕು ಎನ್ನುವ ನಿಟ್ಟಿನಲ್ಲಿ ವಿಜಯಲಕ್ಷ್ಮೀ ದರ್ಶನ್ ಬೇಡಿಕೊಂಡ ದೇವರಿಲ್ಲ, ಹರಕೆ ಹೊರದೇ ಇರುವ ಕ್ಷೇತ್ರಗಳಿಲ್ಲ ಎನ್ನುವಂತಗಾಗಿತ್ತು. ವಕೀಲರೊಂದಿಗೆ ಸಂಪರ್ಕದಲ್ಲಿರುವ ನಡುವೆ, ರಾಜ್ಯದ ಮೂಲೆ ಮೂಲೆಯ ದೇವಸ್ಥಾನಗಳಿಗೆ ಅವರು ಭೇಟಿ ನೀಡಿದ್ದರು. ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದ ವೇಳೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿಯೇ ಅವರಿಗೆ ಮಧ್ಯಂತರ ಜಾಮೀನು ಮಂಜೂರಾಗಿತ್ತು.
ಕೊನೆಗೂ ಕನಕ ದುರ್ಗಮ್ಮನಿಗೆ ವಿಜಯಲಕ್ಷ್ಮೀಯ ಪ್ರಾರ್ಥನೆ ಕೇಳಿಸಿದೆ. ದರ್ಶನ್ ಬೇಲ್‌ಗಾಗಿ ಬಳ್ಳಾರಿ ಕನಕ ದುರ್ಗಮ್ಮನ ಮೊರೆ ಹೋಗಿದ್ದ ವಿಜಯಲಕ್ಷ್ಮಿಗೆ ಯಶಸ್ಸು ಸಿಕ್ಕಿದೆ. ಮಧ್ಯಂತರ ಜಾಮೀನು ಮುನ್ನ ಹಾಗೂ ಸಿಕ್ಕ ನಂತರ ಇದೇ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿದ್ದರು.
ದೇವಸ್ಥಾನಕ್ಕೆ ಭೇಟಿ ನೀಡಿ ಕುಂಕುಮ ಪ್ರಸಾದವನ್ನ ವಿಜಯಲಕ್ಷ್ಮಿ ದರ್ಶನ್‌ಗೆ ನೀಡಿದ್ದರು. ದರ್ಶನ್ ಪೂರ್ಣಾವಧಿ ಜಾಮೀನು ಸಿಗಲೆಂದು ಕನಕ ದುರ್ಗಮ್ಮನ ಎದುರು ಕಣ್ಣೀರಿನ ಮೊರೆ ಇಟ್ಟಿದ್ದರು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದರು. ಬಳ್ಳಾರಿಯ ಶಕ್ತಿ ಅಧಿದೇವತೆ ಆಗಿರುವ ಕನಕ ದುರ್ಗಮ್ಮ ಕ್ಷೇತ್ರಕ್ಕೆ ವಿಜಯಲಕ್ಷ್ಮಿ ನಾಲ್ಕು ಬಾರಿ ಬಂದು ಪೂಜೆ ಮಾಡಿದ್ದರು. ಪ್ರತಿ ಬಾರಿಯೂ ಅವರು ದರ್ಶನ್ ಹೆಸರಿನಲ್ಲಿಯೇ ಪೂಜೆ ಸಲ್ಲಿಸಿದ್ದರು.
Allu Arjun: ಪುಷ್ಪಾ-2 ಕಾಲ್ತುಳಿತ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದೇಕೆ?
ದರ್ಶನ್ ಬೆಂಗಳೂರಿಗೆ ಶಿಫ್ಟ್ ಆದ ಸಂದರ್ಭದಲ್ಲಿ ದರ್ಶನ್ ಒಳಿತಿಗಾಗಿ ವಿಜಯಲಕ್ಷ್ಮೀ ಪ್ರಾರ್ಥಿಸಿದ್ದರು. ಪತಿಯ ಕಷ್ಟದ ಕುರಿತು ದುರ್ಗಮ್ಮ ದೇಗುಲದಲ್ಲಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದರು ಪೂರ್ಣಾವಧಿ ಜಾಮೀನು ಸಿಕ್ಕ ಬಳಿಕ ಪತಿಯೊಂದಿಗೆ ಮತ್ತೊಮ್ಮೆ ದೇವಸ್ಥಾನಕ್ಕೆ ಬರುವುದಾಗಿ ವಿಜಯಲಕ್ಷ್ಮಿ ಹರಕೆ ಹೊತ್ತಿದ್ದರು.
