Asianet Suvarna News Asianet Suvarna News

ಮೈಸೂರು ದಸರಾ : ವಾಹನ ಸಂಚಾರ ನಿಯಮ - ಮಾರ್ಗ ಬದಲಾವಣೆ

  • ವಿಶ್ವ ವಿಖ್ಯಾತ ಮೈಸೂರು ದಸರಾ 2021 ಹಿನ್ನೆಲೆ ಮೈಸೂರಿನ  ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಳ
  • ಅಕ್ಟೋಬರ್ 7 ರಿಂದ ಮೈಸೂರಿನಲ್ಲಿ ಹಲವು ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ
Dasara Traffic restrictions imposed in Mysuru snr
Author
Bengaluru, First Published Oct 3, 2021, 10:30 AM IST
  • Facebook
  • Twitter
  • Whatsapp

 ಮೈಸೂರು (ಅ.03):  ವಿಶ್ವ ವಿಖ್ಯಾತ ಮೈಸೂರು ದಸರಾ 2021 (Mysuru Dasara) ಹಿನ್ನೆಲೆ ಮೈಸೂರಿನ  ರಸ್ತೆಗಳಲ್ಲಿ ವಾಹನ (vehicle) ಸಂಚಾರ  ಹೆಚ್ಚಾಗಿದ್ದು, ಅಕ್ಟೋಬರ್ 7 ರಿಂದ ಮೈಸೂರಿನಲ್ಲಿ ಹಲವು ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆಗೆ ಆದೇಶಿಸಲಾಗಿದೆ.

ಅರಮನೆ (Palace) ಸುತ್ತಲಿನ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಂಜೆ‌ 4 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಏಕಮುಖ ಸಂಚಾರ ಇರಲಿದೆ.  07.10.2021 ರಿಂದ 15.10.2021 ಗಂಟೆ ವರೆಗೆ ಏಕ ಮುಖ ಸಂಚಾರಕ್ಕೆ ಆದೇಶಿಸಲಾಗಿದೆ. 

ಅರಮನೆಯ ಸುತ್ತಲಿನ ರಸ್ತೆಗಳು

ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ , ಕುಸ್ತಿ ಅಖಾಡ ಜಂಕ್ಷನ್, ಬಿ.ಎನ್.ರಸ್ತೆ, ಜಯಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ಪಿಕ್ಚರ್ ರಸ್ತೆ, ಚಾಮರಾಜ ಒಡೆಯರ್‌ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ನ್ಯೂ ಎಸ್.ಆರ್.ರಸ್ತೆ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ,  ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದಲ್ಲಿ ಏಕಮುಖ ಸಂಚಾರಕ್ಕೆ ಆದೇಶ ನೀಡಲಾಗಿದೆ.  ಇದರ ಜೊತೆಗೆ ಮೈಸೂರಿನ (Mysuru) ಹಲವು ಪ್ರಮುಖ ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆಗೆ ನಗರ ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ (Dr chandragupta) ಆದೇಶಿಸಿದ್ದಾರೆ.

ಸಂಚಾರ ನಿಯಮಗಳಲ್ಲಿ ಬದಲಾವಣೆ:  ವಿಶ್ವವಿಖ್ಯಾತ ಮೈಸೂರು ದಸರಾ 2021  ದಸರಾ ವೇಳೆ ಸಂಚಾರ ನಿಯಮಗಳಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.  ಹಲವು ಪ್ರದೇಶಗಳಲ್ಲಿ ವಾಹನಗಳ ನಿಲುಗಡೆ ನಿಷೇಧ ಹೇರಲಾಗಿದೆ.  07.10.2021 ರಿಂದ 15.10.2021 ರ ವರೆಗೆ ಹೊಸ ಆದೇಶ ಜಾರಿಯಲ್ಲಿರಲಿದೆ.

ದಸರಾ ಉದ್ಘಾಟನೆ: ಸಂಪ್ರದಾಯ ಮುರಿದು ಎಸ್‌. ಎಂ ಕೃಷ್ಣರನ್ನೇಕೆ ಕರೆದಿದ್ದು ಬೊಮ್ಮಾಯಿ?!

ಪ್ರತಿದಿನ ಮದ್ಯಾಹ್ನ 4-00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಿದೆ. ಅಂಬಾವಿಲಾಸ ಅರಮನೆ ಸುತ್ತ ಮುತ್ತ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. 

ಸಯ್ಯಾಜಿರಾವ್ ರಸ್ತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ಪುರಂದರ ರಸ್ತೆ, ಬಿ. ರಾಚಯ್ಯ ವೃತ್ತದಿಂದ ಬಿ.ಎನ್ ರಸ್ತೆ ಜಂಕ್ಷನ್ ವರೆಗೆ. ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತದವರೆಗೆ, ಆಲ್ಬರ್ಟ್ ವಿಕ್ಟರ್ ರಸ್ತೆಯ ಜಯಚಾಮರಾಜೇಂದ್ರ ವೃತ್ತದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದವರೆಗೆ, ಅಶೋಕ ರಸ್ತೆಯ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ, ಅಶೋಕ ರಸ್ತೆಯ ಮಹಾವೀರ ವೃತ್ತದಿಂದ ಜಯಚಾಮರಾಜ ವೃತ್ತದವರೆಗೆ, ಬಲರಾಮ ದ್ವಾರದ ಮುಂಭಾಗ ಡಾ. ರಾಜ್‌ಕುಮಾರ್‌ ವೃತ್ತದಿಂದ ಬಿ.ಎನ್. ನರಸಿಂಹಮೂರ್ತಿ ವೃತ್ತದವರೆಗೆ, ವಸ್ತು ಪ್ರರ್ದಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆಯ ಬಿಎನ್ ರಸ್ತೆ ಜಂಕ್ಷನಿಂದ ಮೃಗಾಲಯದ ರಸ್ತೆವರೆಗೆ, ಇಟ್ಟಿಗೆಗೂಡಿನ ಹೊಸ ಬೀದಿ 5ನೇ ತಿರುವು ರಸ್ತೆ ಮೃಗಾಲಯದ ವೃತ್ತದಿಂದ ವಸ್ತು ಪ್ರರ್ದಶನದ ಪೂರ್ವ ದ್ವಾರದವರೆಗೆ, ಮಾನಸರ ರಸ್ತೆಯ ವಾಣಿವಿಲಾಸ ರಸ್ತೆ ಜಂಕ್ಷನ್‌ನಿಂದ ಲೋಕರಂಜನ್‌ ರಸ್ತೆ ವರೆಗೆ, ಮಲೆ ಮಹದೇಶ್ವರ ರಸ್ತೆಯ ಬಿ.ಎನ್.ರಸ್ತೆ ಜಂಕ್ಷನ್‌ನಿಂದ (ಛತ್ರಿಮರ) ಚನ್ನಯ್ಯ ವೃತ್ತದವರೆಗೆ, ಸರ್ಕಾರಿ ಭವನದ ರಸ್ತೆಯ ಸರ್ಕಾರಿ ಭವನದ ದ್ವಾರದ ರಾಜೇಂದ್ರ ಒಡೆಯರ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಿ ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. 

Follow Us:
Download App:
  • android
  • ios